ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣದಲ್ಲಿ 10,011 ಮತದಾರರಿದ್ದು, ಇದರಲ್ಲಿ 7,270 ಮತದಾನ ನಡೆದಿರುತ್ತದೆ. ಸರಗೂರು ತಾಲೂಕಿನ ಗ್ರಾಮಂತಾರ ಭಾಗಗಳಲ್ಲಿ 92 ಮತಗಟ್ಟೆಗಳು ಇದ್ದು. ಯಾವ ಕಡೆ ಅಹಿತಕರ ಘಟನೆ ನಡೆಯದೆ ಶಾಂತಿಯುವಾಗಿ ಮತದಾನ ಆಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮತದಾರರಿಗೆ ಮತದಾನ ಮಾಡಲು ತೊಂದರೆ ಆಗಿದೆ. ಉರಿ ಬಿಸಿಲಿನಲ್ಲಿ ಒಂದು ಎರಡು ಕಿ.ಮೀ ನಡೆದುಕೊಂಡು ಮತದಾನ ಮಾಡಿದ್ದಾರೆ.
ತಾಲೂಕಿನ ಯಾವುದೆ ಹಾಡಿಗಳಲ್ಲಿ ಬೂತ್ ಇಲ್ಲದೆ ಹಾಡಿಯಿಂದ ನಡೆದು ಕೊಂಡು ಬಂದು ಮತದಾನ ಮಾಡಿದರು. ಕೆಲವು ಗ್ರಾಮಗಳಲ್ಲಿ ಗ್ರಾಮ ದಿಂದ ಗ್ರಾಮಕ್ಕೆ ಬಂದು ಮತದಾನ ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಗ್ರಾಮಗಳಲ್ಲಿ ಬೂತ್ ಇಡದಿದ್ದರೆ ಮತದಾನ ಮುಂದಿನ ತಾಪಂ ಮತ್ತು ಜಿಪಂಗೆ ಮತದಾನ ಮಡುವುದಿಲ್ಲ ಎಂದು ಮತದಾರರು ಎಚ್ಚರಿಸಿದ್ದಾರೆ. ತಾಲೂಕಿನ ಅಧಿಕಾರಿಗಳು ಸಮಸ್ಯೆ ಬಗೆ ಹರಿಸದಿದ್ದರೆ ಮತದಾನ ಮಾಡುವುದಿಲ್ಲ ಮತದಾರರು ತಿಳಿಸಿದರು.ಸರಗೂರು ಪಟ್ಟಣದ ಮತದಾನದ ವಿವರ:
ಮತಗಟ್ಟೆ 200ರಲ್ಲಿ 1334 ಮತದರರಿದ್ದು 906 ಮತದಾನ ಮಾಡಿರುತ್ತಾರೆ. ಮತಗಟ್ಟೆ 201 ರಲ್ಲಿ 710 ಮತದಾರರಿದ್ದು 536 ಮತದಾನ ಆಗಿದೆ. ಮತದಾನದ ಸಮಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್, ಪಿಎಸ್.ಐ ಎಂ.ಸಿ. ಮಧು ಹಾಗೂ ಪೊಲೀಸ್ ತುಕಡಿಗಳು ಹಾಗೂ ಪಪಂ ಮುಖ್ಯಾಧಿಕಾರಿ, ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗದವರು, ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಟ್ಟದಪುರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ
ಬೆಳಗ್ಗೆಯಿಂದಲೇ ಮತದಾನ ಚುರುಕಾಗಿ ನಡೆಯಿತು. ಮಧ್ಯಾಹ್ನದ ನಂತರ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ಬಾರದೆ ಸಂಜೆ 4ರ ನಂತರ ಹೆಚ್ಚು ಮಂದಿ ಮತ ಚಲಾಯಿಸಿದರು.ಹಲಗನಹಳ್ಳಿ ಗ್ರಾಮದಲ್ಲಿ ಸಂಜೆ 7.30 ರವರೆಗೆ ಮತದಾನ ನಡೆಯಿತು. ಬೆಟ್ಟದತುಂಗಾ, ಮೇಗಳಾಕೊಪ್ಪಲು ಗ್ರಾಮದಲ್ಲಿ 1,325 ಮತದಾರರದು ಇಲ್ಲಿ ಒಂದೇ ಮತಗಟ್ಟೆ ಮಾಡಿರುವುದರಿಂದ ಮತದಾನ ಮಾಡಲು ಬಹಳ ಸಮಯ ಬೇಕಾಯಿತು. ಆದ್ದರಿಂದ ಮತ್ತೊಂದು ಮತಗಟ್ಟೆ ತೆರೆಯಬೇಕು ಎಂದು ಗ್ರಾಮದ ಮುಖಂಡ ಕೃಷ್ಣೆಗೌಡ ಆಗ್ರಹಿಸಿದರು.
ಬೆಟ್ಟದಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಯಾವುದೇ ಹಿತಕರಣೆ ಘಟನೆ ನಡೆಯಯದ ಹಿನ್ನೆಲೆಯಲ್ಲಿ ಪೊಲೀಸರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.