ಕಳೆದ 2019 ರಲ್ಲಿ ಶೇ. 73.17 ರಷ್ಟು ಮತದಾನ । ಈ ಬಾರಿ ಮತದಾನದಲ್ಲಿ ಏರಿಕೆ। ಹಿಂದೂ ಮುಖಂಡನ ಮೇಲೆ ಬಿಜೆಪಿ ಕಾರ್ಯಕರ್ತರಿಂದಲೇ ಹಲ್ಲೆ
ಬಿಸಿಲು ಹೆಚ್ಚಿದ್ದರಿಂದ ನಿರೀಕ್ಷಿತ ಮಟ್ಟದ ಮತದಾನವಾಗದು ಎಂದು ಭಾವಿಸಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಯಲ್ಲೂ ಮತಗಟ್ಟೆಗೆ ಬಂದು ಮತದಾರರು ಹಕ್ಕು ಚಲಾವಣೆ ಮಾಡಿರುವುದು ಈ ಬಾರಿಯ ವಿಶೇಷ.
ವೋಟ್ ಮಾಡಿದ ನವ ದಂಪತಿ:ಜಿಲ್ಲೆಯ ವಿವಿಧೆಡೆ ವಧು-ವರರು ವೋಟ್ ಮಾಡಿದರ, ಕೆಲವೆಡೆ ಮೊದಲು ಓಟ್ ಮಾಡಿ ನಂತರ ಮದುವೆ ಮಂಟಪಕ್ಕೆ ತೆರಳಿದ ಘಟನೆಗಳು ಸಹ ನಡೆದಿದೆ.ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮದ ಸರ್ಕಾರಿ ಶಾಲೆ ಬೂತ್‌ನಲ್ಲಿ ಸ್ಪಂದನ ಅವರು ಮತದಾನ ಮಾಡಿ ನಂತರ ಕಲ್ಯಾಣ ಮಂಟಪಕ್ಕೆ ತೆರಳಿದರು.ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ತಳವಾರ ಗ್ರಾಮದಲ್ಲಿ ವಧು ಸೌಮ್ಯ ವೋಟ್ ಮಾಡಿದ ನಂತರ ಹಸೆ ಮಣೆ ಏರಿದ್ದಾರೆ.ಗಣ್ಯರ ಮತದಾನ:
---ಮಠಾಧೀಶರಿಂದ ಮತದಾನ:
ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತದಾನ ಮಾಡಿದರು.ಶ್ರೀ ರಂಭಾಪುರೀ ಪೀಠದ ಮಠಾಧೀಶರಾದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬಾಳೆಹೊನ್ನೂರು ಮಠದ ಬೂತ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಬೆಳಿಗ್ಗೆ 7 ಕ್ಕೆ ಮೊದಲ ಮತವನ್ನು ಚಲಾವಣೆ ಮಾಡಿದರು.ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಕೊಪ್ಪ ಪಟ್ಟಣದ ಕೆಪಿಎಸ್ ಶಾಲೆ ಬೂತ್‌ನಲ್ಲಿ ವೋಟ್ ಮಾಡಿದರು.ಪೋಟೋ ಪೈಲ್ ನೇಮ್ 26 ಕೆಸಿಕೆಎಂ 1ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ----- ಬಾಕ್ಸ್-------ವಿದೇಶದಿಂದ ಬಂದು ವೋಟ್ ಮಾಡಿದ ದಂಪತಿಚಿಕ್ಕಮಗಳೂರು: ವಿದೇಶದಿಂದ ಬಂದು ದಂಪತಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
ಕಡೂರು ತಾಲೂಕು ಪಂಚೇನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಮಧು ಮತ್ತು ಅವರ ಪತ್ನಿ ಪಿಳ್ಳೇನಹಳ್ಳಿಯ ತನುಶ್ರೀ ದುಬೈನಲ್ಲಿ ವಾಸವಾಗಿದ್ದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೂರದ ದುಬೈನಿಂದ ಬಂದು ಮತ ಚಲಾಯಿಸಿದ್ದಾರೆ.ದುಬೈನಲ್ಲಿ ಮಧು ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದು ಪತ್ನಿ ತನುಶ್ರೀ ಗೃಹಿಣಿಯಾಗಿದ್ದಾರೆ. ಮಧು ತನ್ನ ಊರಾದ ಪಂಚೇನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ತನುಶ್ರೀ ಪಿಳ್ಳೇನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ನಂತರ ಸುದ್ದಿಗಾರರ ಜತೆ ಮಾತನಾಡಿದ ದಂಪತಿ, ನಮ್ಮ ಹಕ್ಕು ಚಲಾಯಿಸಲು ದುಬೈನಿಂದ ಬಂದಿದ್ದೇವೆ. ಯುವ ಸಮುದಾಯವೇ ನಮ್ಮ ದೇಶದ ಶಕ್ತಿಯಾಗಿದ್ದು, ಯುವ ಸಮುದಾಯ ಉತ್ಸಹದಿಂದ ಮತದಾನ ಮಾಡಬೇಕು ಎಂದರು.ಬೇರೆ ದೇಶಗಳಂತೆ ನಮ್ಮ ದೇಶ ಅಭಿವೃದ್ಧಿ ಹೊಂದಬೇಕು. ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ದುಬೈಗೆ ತೆರಳಿ ಆರು ವರ್ಷವಾಗಿದೆ. ಕಳೆದ ವಿಧಾನಸಭೆ ಚುನಾವಣೆಗೆ ಬರಬೇಕೆಂಬ ಇಚ್ಛೆ ಇತ್ತು. ಆದರೆ, ಆ ಸಮಯಕ್ಕೆ ರಜೆ ಸಿಗದ ಕಾರಣ ಬರಲು ಸಾಧ್ಯ ವಾಗಿರಲಿಲ್ಲ. ಈ ವರ್ಷ ಮುಂದಿನ ತಿಂಗಳು ರಜೆ ಇತ್ತು. ಮತದಾನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮುಂಚಿತವಾಗಿ ರಜೆ ಪಡೆದು ಬಂದು ನಮ್ಮ ಹಕ್ಕು ಚಲಾಯಿಸಿದ್ದೇವೆ.ಪೋಟೋ ಫೈಲ್ ನೇಮ್ 26 ಕೆಸಿಕೆಎಂ 2ದುಬೈಯಿಂದ ಬಂದು ಮತ ಚಲಾವಣೆ ಮಾಡಿದ ದಂಪತಿ.
ಪೋಟೋ ಫೈಲ್ ನೇಮ್ 26 ಕೆಸಿಕೆಎಂ 3ಚಿಕ್ಕಮಗಳೂರಿನ ಮತಗಟ್ಟೆವೊಂದರಲ್ಲಿ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು.----ಪೋಟೋ ಫೈಲ್ ನೇಮ್ 26 ಕೆಸಿಕೆಎಂ 4ಚಿಕ್ಕಮಗಳೂರಿನ ಚಿಕ್ಕ ಕುರುಬರಹಳ್ಳಿಯ ಮತಗಟ್ಟೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮತದಾನ ಮಾಡಿದರು.