ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಸಿದ್ದಾರ್ಥನಗರದಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 2202 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 1026324 ಪುರುಷರು, 1065714 ಮಹಿಳೆಯರು, 184 ಇತರರು ಸೇರಿದಂತೆ ಒಟ್ಟು 2092222 ಮತದಾರರು ಇದ್ದಾರೆ ಎಂದರು.
2202 ಮತಗಟ್ಟೆಗಳಿಗೆ 2434 ಪಿ.ಆರ್.ಒ, 2482 ಎ.ಪಿ.ಆರ್.ಒ, 4893 ಪಿ.ಒ ಸೇರಿದಂತೆ ಒಟ್ಟು 9809 ಮತದಾನ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಮತದಾನಾಧಿಕಾರಿಗಳನ್ನು ನೇಮಿಸಿ, ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ.ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಅಂಚೆ ಮತಪತ್ರ:
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮನೆ- ಮನೆಗೆ ತೆರಳಿ ಮತದಾನ ಮಾಡಿಸಿದ್ದು, 85 ವರ್ಷ ಮೇಲ್ಪಟ್ಟವರು ಮತದಾರರು 2475 ಪೈಕಿ 2360 ಮತದಾನ ಮಾಡಿದ್ದಾರೆ. ವಿಶೇಷಚೇತನ ಮತದಾರರು 918 ಪೈಕಿ 663 ಮಂದಿ ಮತ ದಾಖಲಿಸಿದ್ದಾರೆ. ಅಗತ್ಯ ಸೇವೆಯ ಮತದಾರಕರು 915 ಪೈಕಿ 663 ಮಂದಿ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ 2088 ಸೇವಾ ಮತದಾರರಿದ್ದು, ಎಲ್ಲಾ ಸೇವಾ ಮತದಾರರಿಗೂ ಇಟಿಪಿಬಿಎಸ್ ಮುಖಾಂತರ ಅಂಚೆ ಮತಪತ್ರವನ್ನು ನೀಡಲಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರಗಳು:
ಶೇ.98.12 ರಷ್ಟು ವೋಟರ್ ಸ್ಲಿಪ್ ಗಳನ್ನು ಜಿಲ್ಲೆಯಲ್ಲಿ ಹಂಚಿಕೆ ಮಾಡಲಾಗಿದೆ. ಶೇ.100 ರಷ್ಟು ಎಪಿಕ್ ಕಾರ್ಡ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಆದರೆ, ಯಾವುದೇ ರೀತಿಯ ಪ್ರಚಾರವನ್ನು ಮಾಡುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್ ನಲ್ಲಿ ಅವರು ಮತದಾರರ ಭಾಗ ಸಂಖ್ಯೆ ,ಕ್ರಮ ಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯಬಹುದಾಗಿದ್ದು, ಯಾವುದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, ಬ್ಯಾನರ್ ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು, ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದರು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಇದ್ದರು.ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತಾದನ
ಮತದಾನವು ಏ.26ರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. 90 ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ 5.30ಕ್ಕೆ ಅಣಕು ಮತದಾನ ಮಾಡಲಾಗುತ್ತದೆ. ಮತಚಲಾಯಿಸಿದ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಎಡಗೈ ತೋರು ಬೆರಳಿಗೆ ಹಾಕಲಾಗುವುದು. ಎಡಗೈ ಇಲ್ಲದವರಿಗೆ ಬಲಗೈ ಬೆರಳಿಗೆ, ಎರಡು ಕೈ ಇಲ್ಲದಿದ್ದರೆ ತೋಳಿಗೆ, ಕೈಗಳು ಸಂಪೂರ್ಣ ಇಲ್ಲದಿದ್ದರೇ ಕಾಲಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು. ಮೈಸೂರು ಜಿಲ್ಲೆಯ ಮತದಾನಾಧಿಕಾರಿಗಳಿಗೆ ಮತಗಟ್ಟೆಗಳಿಗೆ ತಲುಪಿಸಲು ಒಟ್ಟು 473 ಕೆ.ಎಸ್.ಆರ್.ಟಿ.ಸಿ ಬಸ್ ಗಳು, 33 ಜಿಪ್ ಗಳು ಹಾಗೂ 79 ಮಿನಿ ಬಸ್ ಉಪಯೋಗಿಸಲಾಗುತ್ತಿದೆ ಎಂದರು.ವಿಶೇಷ ಮತಗಟ್ಟೆಗಳ ಸ್ಥಾಪನೆಮೈಸೂರು ಲೋಕಸಭಾ ಕ್ಷೇತ್ರದಲ್ಲಿ 40 ಸಖಿ ಬೂತ್ ಗಳು, 2 ಸಾಂಪ್ರದಾಯಿಕ ಮತಗಟ್ಟೆಗಳು, 8 ದಿವ್ಯಾಂಗ ಮತಗಟ್ಟೆಗಳು, 8 ಯುವ ಮತದಾರರ ಬೂತ್ ಗಳು, 7 ಥೀಮ್ ಬೇಸಡ್ ಬೂತ್ ಗಳನ್ನು ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವಿಲ್ ಚೇರ್ ಹಾಗೂ ಬೂತಗನ್ನಡಿ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ದೃಷ್ಠಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಅನ್ನು ಸಹ ಪ್ರತಿ ಮತಗಟ್ಟೆಗೆ ಸರಬರಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ವಿವರಿಸಿದರು.