ಹೊನ್ನಾವರ: ಆಸ್ತಿ ಇ- ಸ್ವತ್ತು ಮಾಡಿಸಲು ಲಂಚ ಸ್ವೀಕರಿಸುತ್ತಿದ್ದಾಗ ಇಲ್ಲಿನ ಪಪಂ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪಪಂ ಸದಸ್ಯ ವಿಜಯ ವೆಂಕಟೇಶ ಕಾಮತ್ ಇಬ್ಬರನ್ನು ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಬಂಧಿಸಿದ್ದಾರೆ.
ಪಪಂ ಮುಖ್ಯಾಧಿಕಾರಿ ಬೇಡಿಕೆಯಂತೆ ₹೨,೫೦,೦೦೦ಗಳಲ್ಲಿ ಮುಂಗಡವಾಗಿ ₹೬೦,೦೦೦ ಚಂದ್ರಹಾಸ ಮಧ್ಯವರ್ತಿ ಪಪಂ ಸದಸ್ಯನ ಮೂಲಕ ಬುಧವಾರ ಹಸ್ತಾಂತರ ಮಾಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿ ಹಣದ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕಾರವಾದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
ದಾಳಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ, ಪ್ರಸಾದ, ಸಿದ್ದರಾಜು, ಹೆಡ್ ಕಾನ್‌ಸ್ಟೇಬಲ್‌ಗಳಾದ ನಾರಾಯಣ ನಾಯ್ಕ, ಶ್ರೀಕೃಷ್ಣ, ಪ್ರದೀಪ್, ರಫಿಕ್ ಹಾಗೂ ಪೊಲೀಸರಾದ ಶಿವಕುಮಾರ, ಗಜೇಂದ್ರ, ಆನಂದ, ವಿಧ್ಯಾಜ್ಯೋತಿ, ಸಂಜೀವ, ಮೆಹಬೂಬ್, ಸತೀಶ್, ಮಹೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.ಕೆಲಸ ಕೊಡಿಸುವುದಾಗಿ ವಂಚನೆಕಾರವಾರ: ನೌಕಾನೆಲೆಯಲ್ಲಿ ಕೆಲಸ ಕೊಡಿಸುವುದಾಗಿ ₹2 ಲಕ್ಷ ವಂಚಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.