ಮರಳಿ ವೈಭವದತ್ತ ಲೋಕಪಾವನಿ ಮಹಿಳಾ ಬ್ಯಾಂಕ್: ಸುಜಾತ ಕೃಷ್ಣ

KannadaprabhaNewsNetwork |  
Published : Sep 24, 2026, 01:30 AM IST
23ಕೆಎಂಎನ್‌ಡಿ-5ಮಂಡ್ಯದ ವಿಠಲ ಸಮುದಾಯ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಅಧ್ಯಕ್ಷೆ ಸುಜಾತ ಕೃಷ್ಣ ಮಾತನಾಡಿದರು. | Kannada Prabha

ಸಾರಾಂಶ

ಪ್ರಸ್ತುತ ಆಡಳಿತ ಮಂಡಳಿ ಬ್ಯಾಂಕ್‌ನ ಚೇತರಿಕೆಗೆ ಅವಿರತವಾಗಿ ಶ್ರಮಿಸುತ್ತಿದ್ದು ಬ್ಯಾಂಕ್ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಷೇರು ರೂಪದಲ್ಲಿ ಹಣ ಸಂಗ್ರಹಿಸಿ ಬ್ಯಾಂಕ್‌ನ ವಹಿವಾಟಿಗೆ ರಿಸರ್ವ್ ಬ್ಯಾಂಕ್ ವಿಧಿಸಿದ್ದ ತಡೆ ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿರುವ ಲೋಕಪಾವನಿ ಮಹಿಳಾ ಬ್ಯಾಂಕ್ ಎಲ್ಲರ ಸಹಕಾರದಿಂದ ವೈಭವದತ್ತ ಸಾಗುತ್ತಿದೆ ಎಂದು ಲೋಕಪಾವನಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಸುಜಾತ ಕೃಷ್ಣ ಹರ್ಷ ವ್ಯಕ್ತಪಡಿಸಿದರು.

ನಗರದ ವಿಠಲ ಸಮುದಾಯ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಬ್ಯಾಂಕ್ ಅಭಿವೃದ್ಧಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಬ್ಯಾಂಕ್‌ನ ಶ್ರೇಯೋಭಿವೃದ್ಧಿಗೆ ಎಲ್ಲರೂ ಒಗ್ಗೂಡೋಣ ಎಂದು ಕರೆ ನೀಡಿದರು.

ಕೃಷಿ ಸಾಲಮನ್ನಾ ವಿಷಯದಲ್ಲಿ ಎದುರಾಗಿದ್ದ ತೊಡಕಿನಿಂದಾಗಿ ರಿಸರ್ವ್ ಬ್ಯಾಂಕ್ ಲೊಕಪಾವನಿ ಮಹಿಳಾ ಸಹಕಾರ ಬ್ಯಾಂಕ್‌ನ ವಹಿವಾಟಿಗೆ ಷರತ್ತುಬದ್ದ ತಡೆ ನೀಡಿತ್ತು. ಇದರಿಂದ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಗ್ರಾಹಕರು ಕಷ್ಟಕ್ಕೆ ಸಿಲುಕಿದ್ದರು. ಪ್ರಸ್ತುತ ಆಡಳಿತ ಮಂಡಳಿ ಬ್ಯಾಂಕ್‌ನ ಚೇತರಿಕೆಗೆ ಅವಿರತವಾಗಿ ಶ್ರಮಿಸುತ್ತಿದ್ದು ಬ್ಯಾಂಕ್ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಷೇರು ರೂಪದಲ್ಲಿ ಹಣ ಸಂಗ್ರಹಿಸಿ ಬ್ಯಾಂಕ್‌ನ ವಹಿವಾಟಿಗೆ ರಿಸರ್ವ್ ಬ್ಯಾಂಕ್ ವಿಧಿಸಿದ್ದ ತಡೆ ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸದ್ಯದಲ್ಲೇ ರಿಸರ್ವ್‌ ಬ್ಯಾಂಕ್ ಬ್ಯಾಂಕ್‌ನ ವಹಿವಾಟಿಗೆ ಹಸಿರು ನಿಶಾನೆ ತೊರಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಕೊಟ್ಟ ಮಾತಿನಂತೆ ಬ್ಯಾಂಕ್ ಉಳಿಸಿಕೊಳ್ಳಲು ಆಡಳಿತ ಮಂಡಳಿ ಅವಿರತ ಶ್ರಮಿಸಿದ್ದೇವೆ. ಇದರಿಂದಾಗಿ ಜಿಲ್ಲೆಯ ಏಕೈಕ ಲೊಕಪಾವನಿ ಮಹಿಳಾ ಬ್ಯಾಂಕ್‌ನ್ನು ಮಂಡ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಲೋಕಪಾವನಿ ಬ್ಯಾಂಕ್ ವೈಭವ ಮರಳಿ ತರುವ ವಿಶ್ವಾಸವಿದೆ. ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಎಲ್ಲಾ ಗ್ರಾಹಕರ ಹಣ ಸುಭಧ್ರವಾಗಿದೆ. ಯಾರು ಆತಂಕಗೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಷೇರು ಹಾಗೂ ಠೇವಣಿ ವ್ಯವಹಾರ ಮುಂದವರಿಸುವಂತೆ ಮಾಡುತ್ತೇವೆ ಎಂದರು.

ಬ್ಯಾಂಕ್ ಸಂಕಷ್ಟದಲ್ಲಿರುವಾಗ ಬ್ಯಾಂಕ್ ಖಾತೆಗೆ ಹಣ ತುಂಬಿ ಬ್ಯಾಂಕ್ ಏಳಿಗೆಗೆ ಸಹಕರಿಸಿದ ನಿರ್ದೇಶಕರು ಹಾಗೂ ಷೇರುದಾರರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಸರ್ವ ಸದಸ್ಯರ ಸಭೆಯಲ್ಲಿ ನಿರ್ದೇಶಕರಾದ ಜ್ಯೋತಿ ಲಕ್ಷ್ಮೀ, ಎಂ.ಎನ್‌.ನವ್ಯಶ್ರೀ, ಸಿ.ಆರ್‌.ಸಾವಿತ್ರಿ, ಕೆ.ಶ್ವೇತಾ, ಎಚ್‌.ಡಿ.ಜ್ಯೋತಿಲಕ್ಷ್ಮೀ, ರತ್ನ, ಎಸ್‌.ಆರ್‌.ಕಲ್ಪನ, ಬಿ.ರತ್ನಮ್ಮ, ಕೆ.ಎನ್.ಪುಷ್ಪರಾಮೇಗೌಡ, ಸಿ.ಕೆ.ಮೀನಾಕ್ಷಿ, ಎಂ.ಕೆ.ಪೂರ್ಣಿಮಾ, ಚಂದ್ರಕಲಾ, ಎನ್‌.ಲತಾ, ಅನುರಾಧ, ಎನ್.ಎ.ರೇಣುಕಾ, ಕೆ.ಹೇಮಲತಾ, ಎಚ್‌.ಕೆ.ರೋಚನ, ವೃತ್ತಿಪರ ನಿರ್ದೇಶಕರಾದ ಮನೋಹರ್ ಮಸ್ಕಿ, ವೈ.ಸಿ.ಪೂರ್ಣಿಮಾ ಹಾಗೂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮುಕುಂದ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ