ಲೋಕಾಪುರ ಲೋಕೇಶ್ವರ ಜಾತ್ರೆ: ರೋಮಾಂಚನಗೊಳಿಸಿ ಚಕ್ಕಡಿ ಓಡಿಸುವ ಸ್ಪರ್ಧೆ

KannadaprabhaNewsNetwork |  
Published : Feb 21, 2026, 03:00 AM IST
ಲೋಕಾಪುರ ಲೋಕೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ನಿಮಿಷದ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ಎತ್ತುಗಳನ್ನು ಹೊರುದುಂಬಿಸುತ್ತಿರುವ ರೈತರು. | Kannada Prabha

ಸಾರಾಂಶ

ಲೋಕೇಶ್ವರ ಜಾತ್ರಾ ನಿಮಿತ್ತ ಏರ್ಪಡಿಸಿದ್ದ ನಿಮಿಷದ ಸುತಬಂಡಿ ಓಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನಿಮಿಷದ ಚಕ್ಕಡಿ ಓಡಿಸುವ ಸ್ಪರ್ಧೆ, ಚಕ್ಕಡಿ ಸ್ಪರ್ಧೆಗಳು ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಜನರಿಗೆ ಮನರಂಜನೆ ನೀಡಿದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕೇಶ್ವರ ಜಾತ್ರಾ ನಿಮಿತ್ತ ಏರ್ಪಡಿಸಿದ್ದ ನಿಮಿಷದ ಸುತಬಂಡಿ ಓಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನಿಮಿಷದ ಚಕ್ಕಡಿ ಓಡಿಸುವ ಸ್ಪರ್ಧೆ, ಚಕ್ಕಡಿ ಸ್ಪರ್ಧೆಗಳು ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಜನರಿಗೆ ಮನರಂಜನೆ ನೀಡಿದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಚಕ್ಕಡಿ ಸ್ಪರ್ಧೆ : ಲೋಕಾಪುರದ ರಮೇಶ ದುರಗಪ್ಪ ಗಸ್ತಿ ಪ್ರಥಮ ಬಹುಮಾನ, ಯಾದವಾಡದ ರಮೇಶ ಪಾಸೋಡೆ ದ್ವೀತಿಯ, ಕುಂಟೋಜಿ ಶಿವರುದ್ರಯ್ಯ ಮಠ ತೃತೀಯ, ಹಲಗತ್ತಿ ಬಸವೇಶ್ವರ ಪ್ರಸನ್ ಚತುರ್ಥ, ಕುಮಟೆ ಶಿವಾನಂದ ಕಡ್ಲಿಮಟ್ಟಿ ಎತ್ತಿನ ಜೋಡಿಗಳು ಐದನೇ ಬಹುಮಾನ ಪಡೆದುಕೊಂಡರು.

ಸುತಬಂಡಿ ಸ್ಪರ್ಧೆ : ಮಮದಾಪೂರ ಗ್ರಾಮದ ಸಂಗಪ್ಪ ಪುಂಡಿಬಜಿ ಪ್ರಥಮ, ಯಲ್ಲಟ್ಟಿ ಗ್ರಾಮದ ಅರಣ್ಯಸಿದ್ದೇಶ್ವರ ಪ್ರಸನ್ ದ್ವೀತಿಯ, ಲಕ್ಷಾನಟ್ಟಿ ಹಣಮಂತ ದು ಕುದರಿ ತೃತೀಯ, ಬಿವರಕುಂಬಿ ಗ್ರಾಮದ ಸಂಗನಗೌಡ ಪಾಟೀಲ ಚತುರ್ಥ, ಮಸೂತಿ ಗ್ರಾಮದ ರಾವತ ಕಾಗಲ ಐದನೇ ಬಹುಮಾನ ಪಡೆದುಕೊಂಡಿವೆ.

ನಿಮಿಷದ ಚಕಡಿ ಸ್ಪರ್ಧೆ: ಉಮರಾನಿಯ (ಕಕಮರಿ) ಸದಾಶಿವ ಮುತ್ಯಾ ಪ್ರಸನ್ ಪ್ರಥಮ, ನಾವಲಗಿ ಗ್ರಾಮದ ಜೈ ಹನುಮಾನ ಪ್ರಸನ್ ದ್ವೀತಿಯ, ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ಪ್ರಸನ್ ತೃತೀಯ, ಉಮರಾಣಿಯ (ಕೆಸರಗೊಪ್ಪ) ಅಪ್ಪಾಜಿ ಮುತ್ಯಾ ಪ್ರಸನ್ ಚತುರ್ಥ, ಉದಗಟ್ಟಿ(ಕಪ್ಪಲಗುಡ್ಡ) ಲಕ್ಷ್ಮೀದೇವಿ ಪ್ರಸನ್ ಐದನೇ, ನೇಸರಗಿ(ಮಲ್ಲಾಪೂರ) ಅವಧೂತ ಕಲ್ಮೇಶ್ವರ ಪ್ರಸನ್ ಆರನೇ, ಹೆಬ್ಬಾಳ ಗ್ರಾಮದ ಜೈ ಹನುಮಾನ ಪ್ರಸನ್ ಜೋಡಿಗಳು ಏಳನೇ ಬಹುಮಾನ ಪಡೆದುಕೊಂಡಿವೆ.

ರಂಗೋಲಿ ಸ್ಪರ್ಧೆ: ರಂಗೋಲಿ ಸ್ಫರ್ಧೆಯಲ್ಲಿ ೨೫ ಜನ ಸ್ಪರ್ಧಿಗಳು ಭಾಗವಹಿಸಿದ್ದರು. ರಾಘವೇಂದ್ರ ಕೊಕಟೆ ಪ್ರಥಮ, ಜಾನು ಮಾಳೇದ ದ್ವಿತೀಯ, ಲಕ್ಷ್ಮೀ ಲಗಳಿ ತೃತೀಯ, ಸುರೇಖಾ ಕೋರಿಶೆಟ್ಟಿ ಚತುರ್ಥ, ಪಂಚಮಮಲ್ಲೇಶ ಎನ್.ಬಿ. ಐದನೇ ಬಹುಮಾನ ನೀಡಲಾಯಿತು. ನಿರ್ಣಾಯಕರಾಗಿ ಕೆ.ಪಿ. ಯಾದವಾಡ, ಸವಿತಾ ಗಂಗಾವತಿ, ಜೋಶಿ ಮೆಡಂ ಕಾರ್ಯನಿರ್ವಹಿಸಿದರು.

ಎಲ್ಲ ಸ್ಪರ್ಧೆಗಳು ಕಮೀಟಿಯ ಡಾ.ಕೆ.ಎಲ್.ಉದಪುಡಿ ಹಾಗೂ ಅಧ್ಯಕ್ಷ ಕಿರಣರಾವ ದೇಸಾಯಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿದವು. ಜಾತ್ರಾ ಕಮೀಟಿ ಸದಸ್ಯ ಪ್ರಕಾಶ ಚುಳಕಿ, ಮುದಕಪ್ಪ ಚಿಗರಡ್ಡಿ, ಯಂಕಣ್ಣ ಮಾಳೆದ, ಅರುಣ ನರಗುಂದ, ಪ್ರಮೋದ ತೆಗ್ಗಿ, ಮುದಕಪ್ಪ ಬಿದರಿ, ಲೋಕಯ್ಯ ಗಣಾಚಾರಿ, ಯಲ್ಲಪ್ಪ ತಳವಾರ, ವಿನಾಯಕ ಗಂಗಣ್ಣವರ, ನವೀನ ಚೌಧರಿ, ಗಿರೀಶ ಹುಕುಮನವರ, ರವಿಗೌಡ ಚೌಧರಿ, ವಿಠ್ಠಲ ಹೂಗಾರ, ಸುರೇಶ ಚೌಧರಿ, ವಿಠ್ಠಲ ಹುಗ್ಗಿ, ಲೋಕಣ್ಣಾ ಸರಕಾರ, ಲೋಕಣ್ಣ ಪುರವಾರ, ಅಕ್ಷಯ ನರಗುಂದ, ರಕ್ಷಿತ ಕೊಡಬಾಗಿಲ, ಪರಶುರಾಮ ಠಾಣೀಕೇರಿ, ಯಮನಪ್ಪ ಕಾಳಮ್ಮನವರ, ಸೋಮಲಿಂಗಪ್ಪ ನಾಯಕ, ಲೋಕೇಶ್ವರ ಜಾತ್ರಾ ಕಮೀಟಿ ಸದಸ್ಯರು, ಹಿರಿಯರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಜಿರೆ: ಇಂದು ಭಿಡೆ ಸಹೋದರಿಯರ ಭರತನೃತ್ಯ ರಂಗಪ್ರವೇಶ
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ತೋಯಜಾಕ್ಷ ಶೆಟ್ಟಿ ಆಯ್ಕೆ