ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮ

KannadaprabhaNewsNetwork |  
Published : Sep 04, 2026, 02:30 AM IST
ಗುತ್ತಲದಲ್ಲಿ ಜೋರ್ಣೋದ್ಧಾರಗೊಂಡಿರುವ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಜೋರ್ಣೋದ್ಧಾರಗೊಂಡಿರುವ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಸೆ. 6ರಿಂದ 10ರ ವರೆಗೆ ಜರುಗಲಿದ್ದು, ಸೆ.10ರ ಬೆಳಗ್ಗೆ 10ಕ್ಕೆ ನೂತನ ಮಠದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಕೊಟ್ರಯ್ಯಸ್ವಾಮಿ ಕೋವಳ್ಳಿಮಠ ತಿಳಿಸಿದರು.

ಗುತ್ತಲ:ಜೋರ್ಣೋದ್ಧಾರಗೊಂಡಿರುವ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಸೆ. 6ರಿಂದ 10ರ ವರೆಗೆ ಜರುಗಲಿದ್ದು, ಸೆ.10ರ ಬೆಳಗ್ಗೆ 10ಕ್ಕೆ ನೂತನ ಮಠದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಕೊಟ್ರಯ್ಯಸ್ವಾಮಿ ಕೋವಳ್ಳಿಮಠ ತಿಳಿಸಿದರು.

ಮಂಗಳವಾರ ಪಟ್ಟದ್ದೇವರ ಹಿರೇಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸೆ. 6ರಿಂದ ಸೆ.9ರ ವರೆಗೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ''''''''ಬದುಕು-ಬೆಳಕು'''''''' ಪ್ರವಚನ ಕಾರ್ಯಕ್ರಮ ಜರುಗಲಿದ್ದು, ನಿಜಗುಣೇಶ ಹೂಗಾರ ಸಂಗೀತ ಹಾಗೂ ಗಂಗಾಧರ ಮಹಂತ ಅವರ ತಬಲಾ ಸೇವೆ ಜರುಗಲಿದೆ.

ಸೆ.10ರ ಗುರುವಾರ ಬೆಳಗ್ಗೆ 10ಕ್ಕೆ ನೂತನ ಮಠದಲ್ಲಿ ವಿಘ್ನೇಶ್ವರ, ಚೌಡೇಶ್ವರಿ ಹಾಗೂ ನಾಗದೇವತೆಗಳು ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಜರುಗುವುದು. ನಂತರ ಧರ್ಮ ಸಮಾರಂಭ ಜರುಗಲಿದ್ದು, ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಚೌಡಯ್ಯದಾನಪುರದ ಒಡೆಯರ ಸಂಸ್ಥಾನ ಮಠದ ಶ್ರೀ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಂಗಮ ಕ್ಷೇತ್ರ ಲಿಂಗನಾಯಕನ ಹಳ್ಳಿಯ ಚನ್ನವೀರ ಸ್ವಾಮೀಜಿ, ಗುತ್ತಲ ಕಲ್ಮಠ-ಅಗಡಿ ಪ್ರಭುಸ್ವಾಮಿ ಮಠದ ಶ್ರೀಗುರುಸಿದ್ದ ಸ್ವಾಮೀಜಿ ಹಾಗೂ ಹಾವನೂರ ದಳವಾಯಿ ಮಠದ ಶ್ರೀಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಕ್ಕರೆ ಹಾಗೂ ಜವಳಿ ಸಚಿವರಾದ ರುದ್ರಪ್ಪ ಲಮಾಣಿ, ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಸೇರಿದಂತೆ ಹಿರೇಮಠದ ಸದ್ಭಕ್ತರು, ಜನ ಪ್ರತಿನಿಧಿಗಳು ಉಪಸ್ಥಿತರಿರುವರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಉದ್ಯಮಿ ಶಿವಕುಮಾರ ಮರಿಯಾನಿ, ವಿಕಾಸ ಹಿರೇಮಠ, ಅಜ್ಜಪ್ಪ ಬೆನ್ನೂರ, ರೇವಣಸಿದ್ದಯ್ಯ ಹಿರೇಮಠ, ಚನ್ನವೀರಯ್ಯ ಸುತ್ತೂರಮಠ, ನಾಗರಾಜ ರುದ್ರಾಕ್ಷಿ, ಪ್ರಶಾಂತಸ್ವಾಮಿ ಹಿರೇಮಠ, ಮಹದೇವಪ್ಪ ಗಡ್ಡಿ, ಹೇಮಂತ ಗಡ್ಡಿ, ಚನ್ನಪ್ಪ ಹೊನ್ನಮ್ಮನವರ, ಮೃತ್ಯುಂಜಯ ರಿತ್ತಿಮಠ, ಮಂಜುನಾಥ ಯರವಿನತಲಿ, ಈರಣ್ಣ ಅಂಕಲಕೋಟಿ, ಚಂದ್ರಪ್ಪ ಯರವಿನತಲಿ, ಮಂಜುನಾಥ ಕಾಯಕದ, ಕುಮಾರಸ್ವಾಮಿ ಸುತ್ತೂರಮಠ, ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ