ಲೋಕಾಯುಕ್ತ ನ್ಯಾ. ರಮಾಕಾಂತ ಚವ್ಹಾಣ ಮಿಂಚಿನ ಸಂಚಾರ

KannadaprabhaNewsNetwork |  
Published : Jan 05, 2026, 01:15 AM IST
ಬೆಂಗಳೂರಿನ ಲೋಕಾಯುಕ್ತ ನ್ಯಾಯಮೂರ್ತಿಗಳಾದ ರಮಾಕಾಂತ ಚವ್ಹಾಣ ಅವರು ತಮ್ಮ ಅಧಿಕಾರಿ ತಂಡದೊಂದಿಗೆ ಭಾನುವಾರ ನಗರದ ವಿವಿಧ ಪ್ರಮುಖ ಇಲಾಖೆಗಳಿಗೆ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆ ಮತ್ತು ಮಾಡಬೇಕಾದ ಕೆಲಸ ಬಗ್ಗೆ ಕಣ್ಣಾರೆ ಕಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ, ಸೂಕ್ತ ಕ್ರಮಕ್ಕೆ ಆದೇಶಿಸಿದರು. | Kannada Prabha

ಸಾರಾಂಶ

Lokayukta Justice Ramakant Chavan's lightning journey

- ಯಾದಗಿರಿ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ । ಸಾರ್ವಜನಿಕ ಸೌಲಭ್ಯಗಳ ವೀಕ್ಷಣೆ

---

ಕನ್ನಡಪ್ರಭ ವಾರ್ತೆ ಯಾದಗಿರಿ

ಕಳೆದ 2-3 ದಿನಗಳಿಂದ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ ಮತ್ತು ಇತರೇ ಸ್ಥಳಗಳಿಗೆ ಹಠಾತ್ ಭೇಟಿ ನೀಡುತ್ತಿರುವ ಬೆಂಗಳೂರಿನ ಲೋಕಾಯುಕ್ತ ನ್ಯಾಯಮೂರ್ತಿಗಳಾದ ರಮಾಕಾಂತ ಚವ್ಹಾಣ ಅವರು ತಮ್ಮ ಅಧಿಕಾರಿ ತಂಡದೊಂದಿಗೆ ಭಾನುವಾರ ನಗರದ ವಿವಿಧ ಪ್ರಮುಖ ಇಲಾಖೆಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಮಾಡಬೇಕಾದ ಕೆಲಸ ಬಗ್ಗೆ ಕಣ್ಣಾರೆ ಕಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ, ಸೂಕ್ತ ಕ್ರಮಕ್ಕೆ ಆದೇಶಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸುವಂತೆಯೇ ಸೂಚಿಸಿದರು.

ಬಬಲಾದನಲ್ಲಿರುವ ನಗರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ತಂಡ, ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಎಸೆದಿರುವುದು, ತ್ಯಾಜ್ಯ ಸಂಗ್ರಹಣೆ ಸಂಪೂರ್ಣವಾಗದೇ ಇರುವುದು ಮತ್ತು ನಗರದ ಕೆಲವು ಪ್ರದೇಶಗಳಲ್ಲಿ ಕಸದ ಸಂಗ್ರಹಣೆ ಅಪೂರ್ಣವಾಗಿದ್ದನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಕೂಡಲೇ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಯಿಮ್ಸ್‌ ಆಸತ್ರೆಯಲ್ಲಿ ಸ್ವಚ್ಛತೆಯ ಕೊರತೆ ಕಂಡ ಅವರು, ಚಿಕಿತ್ಸೆಗೆ ಬಂದ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ ಬಗ್ಗೆ ಮಾಹಿತಿ ಪಡೆದರು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಸಲಕರಣೆಗಳ ಕೊರತೆ ಕಂಡು ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಭೇಟಿ ನೀಡಿದಾಗ ನ್ಯಾಯಮೂರ್ತಿ ಚವ್ಹಾಣ ನೇತೃತ್ವದ ತಂಡ, ವಿದ್ಯಾರ್ಥಿಗಳಿಗೆ ಸರಿಯಾಗಿ ಕಿಟ್ ವಿತರಣೆ ಮಾಡದೇ ಇರುವುದು, ವಸತಿ ನಿಲಯಗಳ ಆವರಣದ ಸುತ್ತಮುತ್ತ ಸ್ವಚ್ಛತೆ ಇಲ್ಲದೆ ಇರುವುದರ ಬಗ್ಗೆ ವಾರ್ಡನ್ ಗಳಿಗೆ ಎಚ್ಚರಿಕೆ ನೀಡಿ ಸ್ವಚ್ಛತೆ ಕಾಪಾಡಲು ಸೂಚಿಸಿತು.

ಊಟದ ಮೆನ್ಯು ಪ್ರಕಾರ ಊಟ ಹಾಕದೇ ಇರುವುದರ ಬಗ್ಗೆ ವಿದ್ಯಾರ್ಥಿಗಳಿಂದ ತಿಳಿದು ಅವರು, ಮೆನ್ಯು ಪ್ರಕಾರ ಊಟ ಬಡಿಸಲು ಸೂಚಿಸಿದ ನ್ಯಾಯಾಧೀಶರು ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳಾದ ಜೆ. ಎಚ್ಇ. ನಾಮದಾರ್, ಡಿಎಪಿ ಮಲ್ಲಿಕಾರ್ಜುನ ಚುಕ್ಕಿ, ಡಿಎಪಿ ಪೂವಯ್ಯ ಕೆ.ಸಿ., ಡಿಎಪಿ. ಪೊಲೀಸ್ ನಿರೀಕ್ಷಕರಾದ ಸಂಗಮೇಶ, ಗೋವಿಂದರಾಜ, ಉಮಾಮಹೇಶ್, ಕಲ್ಲಪ್ಪ ಬಡಿಗೇರ, ಬಸವರಾಜ ಬುದ್ದಿನ್ನಿ, ಭೀಮಣ್ಣಗೌಡ ಬಿರಾದಾರ, ಪ್ರಭುಲಿಂಗಯ್ಯ ಹಿರೇಮಠ, ಸುನೀಲ್ ಮೇಗಲಮನಿ, ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಸೇರಿದಂತೆಯೇ ಇತರರಿದ್ದರು.

===ಬಾಕ್ಸ್===

* ಬಸ್ ನಿಲ್ದಾಣದ ಅವ್ಯವಸ್ಥೆ ಖುದ್ದು ಪರಿಶೀಲಿಸಿದ ನ್ಯಾಯಾಮೂರ್ತಿಗಳು

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಸೌಲಭ್ಯ ಕೊರತೆ, ಸಾರ್ವಜನಿಕರಿಗೆ ಸೂಕ್ತ ಆಸನಗಳ ಅಗತ್ಯತೆ ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದು, ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ನ್ಯಾಯಾಮೂರ್ತಿಗಳು ಖುದ್ದಾಗಿ ಪರಿಶೀಲಿಸಿದರು. ಹಳ್ಳಿಗಳಿಗೆ ಸೂಕ್ತ ಸಮಯಕ್ಕೆ ಬಸ್ ಗಳು ಇಲ್ಲದಿರುವುದು ಸಾರ್ವಜನಿಕರಿಂದ ಕೇಳಿದ ಅವರು ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕಿತು ಮಾಡಿದರು.

-

4ವೈಡಿಆರ್‌12 : ಬೆಂಗಳೂರಿನ ಲೋಕಾಯುಕ್ತ ನ್ಯಾಯಮೂರ್ತಿಗಳಾದ ರಮಾಕಾಂತ ಚವ್ಹಾಣ ಅವರು ತಮ್ಮ ಅಧಿಕಾರಿ ತಂಡದೊಂದಿಗೆ ಭಾನುವಾರ ನಗರದ ವಿವಿಧ ಪ್ರಮುಖ ಇಲಾಖೆಗಳಿಗೆ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆ ಮತ್ತು ಮಾಡಬೇಕಾದ ಕೆಲಸ ಬಗ್ಗೆ ಕಣ್ಣಾರೆ ಕಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ, ಸೂಕ್ತ ಕ್ರಮಕ್ಕೆ ಆದೇಶಿಸಿದರು.

-

4ವೈಡಿಆರ್12 : ಬೆಂಗಳೂರಿನ ಲೋಕಾಯುಕ್ತ ನ್ಯಾಯಮೂರ್ತಿಗಳಾದ ರಮಾಕಾಂತ ಚವ್ಹಾಣ ಅವರು ತಮ್ಮ ಅಧಿಕಾರಿ ತಂಡದೊಂದಿಗೆ ಭಾನುವಾರ ನಗರದ ವಿವಿಧ ಪ್ರಮುಖ ಇಲಾಖೆಗಳಿಗೆ ಭೇಟಿ ನೀಡಿದರು. ಆಸ್ಪತ್ರೆಗೆ ಭೇಟಿ ನೀಡಿದ ವೇಳೆ, ರೋಗಿಯೊಂದಿಗೆ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ