ಸಾರಿಗೆ ನಕಲಿ ಚಲನ್‌ ಕರ್ಮಕಾಂಡ ಲೋಕಾಯುಕ್ತ ತನಿಖೆಗೆ ಒತ್ತಾಯ

KannadaprabhaNewsNetwork |  
Published : Dec 06, 2025, 02:45 AM IST
5ಎಚ್‌ಪಿಟಿ6- ಹೊಸಪೇಟೆಯಲ್ಲಿ ಶುಕ್ರವಾರ ಆರ್‌ಟಿಒ ಕೆ. ದಾಮೋದರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯಾದಂತ್ಯ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ನಲ್ಲಿ ಮತ್ತು ಚೆಕ್ ಪಾಯಿಂಟ್ ಗಳಲ್ಲಿ ಅಕ್ರಮವಾಗಿ ನಕಲಿ ಚಲನ್ ಸೃಷ್ಟಿಸಿ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

ಹೊಸಪೇಟೆ: ಸಾರಿಗೆ ಇಲಾಖೆಯಲ್ಲಿ ನಕಲಿ ಚಲನ್‌ ಸೃಷ್ಟಿಸಿ ದಂಡದ ಹಣ ಲೂಟಿ ಮಾಡಿದ ಪ್ರಕರಣವನ್ನು ಲೋಕಾಯುಕ್ತದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ.

ರಾಜ್ಯಾದಂತ್ಯ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ನಲ್ಲಿ ಮತ್ತು ಚೆಕ್ ಪಾಯಿಂಟ್ ಗಳಲ್ಲಿ ಅಕ್ರಮವಾಗಿ ನಕಲಿ ಚಲನ್ ಸೃಷ್ಟಿಸಿ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಸಾರಿಗೆ ಇಲಾಖೆ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರು. ತೆರಿಗೆ ಲೂಟಿ ಮಾಡಿ ಸರ್ಕಾರಕ್ಕೆ ಹಾಗೂ ಇಲಾಖೆಗೆ ನಷ್ಟವನ್ನುಂಟು ಮಾಡಿದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಆಟೋರಿಕ್ಷಾ ಚಾಲಕರ ಸಂಘ , ಟ್ಯಾಕ್ಸಿ- ಮ್ಯಾಕ್ಸ್ ಕ್ಯಾಬ್, ಲಘು ಗೂಡ್ಸ್ ವಾಹನ, ಮಿನಿ ಲಾರಿ ಚಾಲಕರ ಸಂಘ, ಖಾಸಗಿ ಆ್ಯಂಬುಲೆನ್ಸ್ ಚಾಲಕರ ಸಂಘ ಹಾಗೂ ಮೆಕಾನಿಕ್ಸ್ ಗಳ ಸಂಘವು ಒಂದೇ ಕಂಪನಿಗೆ ಸೇರಿದ್ದ ವಾಹನಗಳಿಗೆ ಸಂಬಂಧಪಟ್ಟಂತೆ ಹೊಸಪೇಟೆಯ ಚೆಕ್ ಪೋಸ್ಟ್ ನಲ್ಲಿ 62 , ಬಾಗೇಪಲ್ಲಿ ಚೆಕ್ ಪೋಸ್ಟ್ ನಲ್ಲಿ 47 , ಮುಳಬಾಗಿಲು ಚೆಕ್ ಪೋಸ್ಟ್ ನಲ್ಲಿ 44, ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ 20, ಚಿತ್ರದುರ್ಗ ಚೆಕ್ ಪೋಸ್ಟ್ ನಲ್ಲಿ 14 , ವಿಜಯಪುರದಲ್ಲಿ 04 , ಹಾಗೂ ಕೊಪ್ಪಳ ಚೆಕ್ ಪೋಸ್ಟ್ ನಲ್ಲಿ 3 ನಕಲಿ ಚಲನ್ ಗಳು ಪತ್ತೆಯಾಗಿವೆ. ಒಂದೇ ಕಂಪನಿಯ ವಾಹನಗಳಿಗೆ ಸಂಬಂಧಪಟ್ಟಂತೆ ಇಷ್ಟೊಂದು ನಕಲಿ ಚಲನ್ ಗಳು ಸಿಕ್ಕಿರುವ ಸಂದರ್ಭದಲ್ಲಿ ರಾಜ್ಯದ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ವಾಹನಗಳು ಸಂಚಾರ ಮಾಡುತ್ತಿದ್ದು, ಇದೇ ರೀತಿಯಾಗಿ ಇನ್ನು ಹಲವಾರು ವಾಹನಗಳಿಗೆ ನಕಲಿ ಚಲನ್ ಬಳಸಿ ಕೋಟ್ಯಂತರ ರು. ಲೂಟಿ ಮಾಡಿರುವ ಶಂಕೆ ಮೇಲ್ನೋಟಕ್ಕೆ ಕಂಡು ಕಂಡುಬರುತ್ತದೆ.

ಚೆಕ್ ಪೋಸ್ಟ್ ಗಳಲ್ಲಿ ಮೋಟರ್ ವಾಹನ ನಿರೀಕ್ಷಕರು ಹಾಕುವಂತಹ ದಂಡವನ್ನು ನಕಲಿ ಚಲನ್ ಸೃಷ್ಟಿಸಿ ದಂಡದ ಕೋಟ್ಯಂತರ ರು. ಲೂಟಿ ಮಾಡಿರುವ ಪ್ರಕರಣವನ್ನು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ರೀತಿಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಾರಿಗೆ ಇಲಾಖೆ ಲೋಕಾಯುಕ್ತರಲ್ಲಿ ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಿದ್ದಲ್ಲಿ ಸಂಘವು ನೇರವಾಗಿ ಮಾನ್ಯ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಆರ್‌ಟಿಒ ಕೆ. ದಾಮೋದರ ಅವರ ಮೂಲಕ ರವಾನಿಸಲಾಯಿತು.

ಮುಖಂಡರಾದ ಕೆ.ಎಂ. ಸಂತೋಷಕುಮಾರ, ಕೆ. ಕೈಲಾಶ್ ಮೂರ್ತಿ, ಚನ್ನಬಸವನಗೌಡ, ಎಸ್. ಅನಂತಶಯನ, ಬಿ.ಎಸ್. ಯಮುನಪ್ಪ, ಮೈನುದ್ದಿನ್, ಅಸ್ಲಾಂ, ಸೈಯದ್ ಜಮೀರ್, ಮಣಿಕಂಠ, ಬಸವರಾಜ್ ಚಾಂದ್ ಬಾಷಾ, ರಾಮಚಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಗೆ ಅನುಕೂಲವಾಗುವ ಮಾದರಿ ತಯಾರಿಸಿ: ಜಗದೀಶಪ್ಪ
ಇಂದಿರಾ ಕ್ಯಾಂಟೀನ್ ಆಹಾರ ಸ್ವಾದರಹಿತ: ಶಾಸಕ ಡಾ. ಚಂದ್ರು ಲಮಾಣಿ ಆರೋಪ