ಸರ್ವೆ ಸೂಪರ್‌ವೈಸರ್‌ ಮನೆ ಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : May 09, 2025, 12:34 AM IST
ಶಿರ್ಷಿಕೆ-8ಕೆ.ಎಂ.ಎಲ್‌.ಆರ್.2-ಮಾಲೂರು ತಾಲೂಕಿನ ನಿಢಘಟ್ಟ ಗ್ರಾಮಕ್ಕೆ ಬೆಳ್ಳಿಗೆ ಧಾಳಿ ನಡೆಸಿದ ಲೋಕಾಯುಕ್ತ ಎಸ್‌ ಪಿ ಧನಂಜಯ ನೇತೃತ್ವದ ತಂಡ ಅಕ್ರಮವಾಗಿ ಸರ್ಕಾರಿ ದಾಖಲೆ ತಿದ್ದಿ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೆ ಸೂಪರ್‌ ವೈಸರ್‌ ಸುರೇಶ್‌ ಬಾಬು ಮನೆ ಮೇಲೆ ಧಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. | Kannada Prabha

ಸಾರಾಂಶ

ಜಿಲ್ಲಾ ಲೋಕಾಯುಕ್ತ ಎಸ್‌ಪಿ ಧನಂಜಯ ನೇತೃತ್ವದ ಲೋಕಾಯುಕ್ತ ತಂಡ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಏಕ ಕಾಲಕ್ಕೆ ಸುರೇಶ್‌ ಬಾಬು ಅವರ ಎರಡು ಮನೆ ಮೇಲೆ ದಾಳಿ ನಡೆಸಿದರು.

ಮಾಲೂರು: ತಾಲೂಕಿನ ನಿಡಘಟ್ಟ ಗ್ರಾಮದಲ್ಲಿರುವ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲಿ ಜಿಲ್ಲಾ ಸರ್ವೆ ಸೂಪರ್‌ ವೈಸರ್‌ ಸುರೇಶ್‌ ಬಾಬು ಅವರ ಗ್ರಾಮದ ಮನೆ ಹಾಗೂ ಮಾಲೂರು ಪಟ್ಟಣದ ಮನೆ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಕೋಲಾರ ಲೋಕಾಯುಕ್ತ ರ ಧಾಳಿ ನಡೆದಿದೆ.ಜಿಲ್ಲಾ ಲೋಕಾಯುಕ್ತ ಎಸ್‌ಪಿ ಧನಂಜಯ ನೇತೃತ್ವದ ಲೋಕಾಯುಕ್ತ ತಂಡ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಏಕ ಕಾಲಕ್ಕೆ ಸುರೇಶ್‌ ಬಾಬು ಅವರ ಎರಡು ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿಸಿದರು. ಅಕ್ರಮವಾಗಿ ಸರ್ಕಾರಿ ದಾಖಲೆ ತಿದ್ದಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಆರೋಪ ಜತೆಯಲ್ಲಿ ಕೋಟ್ಯಾಂತರ ರುಪಾಯಿಗಳ ಅಕ್ರಮ ಆಸ್ತಿ ಮಾಡಿರುವ ದೂರಿನ ಅನ್ವಯ ಜಿಲ್ಲೆಯ 6 ಕಡೆ ದಾಳಿ ನಡೆದಿದೆ. ದಾಳಿ ವೇಳೆಯಲ್ಲಿ ಸುರೇಶ್‌ ಬಾಬು ಅವರ ಗ್ರಾಮದ ಮನೆಯಲ್ಲಿದ್ದರು ಎನ್ನಲಾಗಿದೆ. ದಾಳಿಯ ಫಲಿತಾಂಶದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ ಬಹಳಷ್ಟು ಚಿನ್ನದ ಒಡವೆ ಹಾಗೂ ಲಕ್ಷಕ್ಕೂ ಹೆಚ್ಚು ನಗದು ಹಾಗೂ ಕೆಲವು ಭೂ ದಾಖಲೆ ಸಿಕ್ಕಿದೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ