ಫೆ.16ರಂದು ಲೋಕೇಶ್ವರ ಅದ್ಧೂರಿ ಜಾತ್ರೆ

KannadaprabhaNewsNetwork |  
Published : Jan 23, 2026, 03:00 AM IST
ಲೋಕಾಪುರ | Kannada Prabha

ಸಾರಾಂಶ

ಸಮಸ್ತ ಭಕ್ತರ ಆರಾಧ್ಯ ದೈವ ಹಾಗೂ ಇತಿಹಾಸ ಪ್ರಸಿದ್ಧ ಲೋಕೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಪಟ್ಟಣದ ಹಿರಿಯ ಮುಖಂಡ ಎಸ್.ಎನ್.ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮಸ್ತ ಭಕ್ತರ ಆರಾಧ್ಯ ದೈವ ಹಾಗೂ ಇತಿಹಾಸ ಪ್ರಸಿದ್ಧ ಲೋಕೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಪಟ್ಟಣದ ಹಿರಿಯ ಮುಖಂಡ ಎಸ್.ಎನ್.ಹಿರೇಮಠ ಹೇಳಿದರು.

ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ಮಾತನಾಡಿದ ಅವರು, ಪ್ರತಿವರ್ಷ ಶಿವರಾತ್ರಿ ಮುಗಿದ ಮರುದಿನ ಅಂದರೆ 16.02.2026 ರಂದು ರಥೋತ್ಸವ ಜರುಗುವುದು. ಈ ವರ್ಷವೂ ಅದೇ ಪ್ರಕಾರ ಜರುಗುವುದು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಪರ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಭಕ್ತರ ಶ್ರದ್ಧಾ ಕೇಂದ್ರವಾದ ಲೋಕಾಪುರ ಲೋಕೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಲು ಎಲ್ಲ ಸಹಕಾರ ಅತ್ಯಗತ್ಯ ಎಂದರು. ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಲೋಕೇಶ್ವರ ಜಾತ್ರೆಯನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ಹಬ್ಬಗಳನ್ನು ಆಚರಿಸೋಣ. ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಪೂರೈಕೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಭಕ್ತರು ಸಹಕರಿಸುವ ಮೂಲಕ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಕೋರಿದರು. ವಾಯುಪತ್ರ ಸೌಹಾರ್ದ ಬ್ಯಾಂಕ್‌ ಅಧ್ಯಕ್ಷ ಲೋಕಣ್ಣ ಕತ್ತಿ ಮಾತನಾಡಿ, ಲೋಕೇಶ್ವರ ದೇವಸ್ಥಾನ ಪುರಾತನ ಕಾಲದಾಗಿದ್ದು ದೇವಸ್ಥಾನಕ್ಕೆ ಹೊಸ ರೂಪಕೊಡಲು ಎಲ್ಲರೂ ಸಹಕರಿಸಬೇಕು. ಏನೇ ಸಮಸ್ಯೆಗಳು ಬಂದರೂ ಎಲ್ಲರೂ ಸೇರಿ ಪರಿಹರಿಸಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಜಾತ್ರಾ ಉತ್ಸವದ ಸದಸ್ಯ ಪ್ರಕಾಶ ಚುಳಕಿ ಮಾತನಾಡಿ, ಫೆ.12 ರಿಂದ ಫೆ.20 ರವರೆಗೆ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರಾ ಉತ್ಸವದ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.15 ಮಹಾಶಿವರಾತ್ರಿ, ಫೆ.16 ರಂದು ಅದ್ಧೂರಿಯಾಗಿ ರಥೋತ್ಸವ ಜರುಗುವುದು. ಅಂಗಡಿಕಾರರು ಅಂಗಡಿಗಳನ್ನು ತೆರೆಯಲು ಜಾತ್ರಾ ಉತ್ಸವ ಕಮೀಟಿಯಿಂದ ಪರವಾನಗಿ ಪಡೆದುಕೊಳ್ಳಬೇಕು. ಜಾತ್ರಾ ಉತ್ಸವ ಕಮಿಟಿ ನಿರ್ಣಯವೇ ಅಂತಿಮವಾಗಿದ್ದು ಯಾರು ಅನವಶ್ಯಕ ಗೊಂದಲ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.ಈ ವೇಳೆ ಕಿರಣ ದೇಸಾಯಿ, ವಿ.ಎಂ.ತೆಗ್ಗಿ, ಶಿವಪ್ಪ ಚೌಧರಿ, ಯಲ್ಲಪ್ಪ ತಳವಾರ, ಹಣಮಂತ ರಾಮದುರ್ಗ, ಷಣ್ಮುಖಪ್ಪ ಕೋಲ್ಹಾರ, ಬಸವರಾಜ ಕಾತರಕಿ, ಯಮನಪ್ಪ ಹೊರಟ್ಟಿ, ಸದಾಶಿವ ಉದಪುಡಿ, ಈಶ್ವರ ಹವಳಖೋಡ, ಮುದಕಪ್ಪ ಚಿಗರಡ್ಡಿ, ರವಿ ಬೋಳಿಶೆಟ್ಟಿ, ಸುರೇಶ ಅಂಕಲಗಿ, ಸಂಕಪ್ಪ ಗಂಗಣ್ಣವರ, ಅರುಣ ನರಗುಂದ, ಗುಲಾಬಸಾಬ ಅತ್ತಾರ, ಬಸವರಾಜ ಪಂಚಕಟ್ಟಿಮಠ, ಪ್ರವೀಣ ಗಂಗಣ್ಣವರ, ಪಿಕೆಪಿಎಸ್ ಸದಸ್ಯ ಚನ್ನಯ್ಯ ಗಣಾಚಾರಿ, ಸಂಗಮೇಶ ಪಲ್ಲೇದ, ಕೃಷ್ಣ ಭಜಂತ್ರಿ, ಭೀಮಶಿ ಅವರಾದಿ, ಮುತ್ತಪ್ಪ ಚೌಧರಿ, ಪ್ರಕಾಶ ಚೌಧರಿ, ಚನ್ನಬಸು ಹುಬ್ಬಳ್ಳಿ, ಶಿವು ಸುರಪುರ, ಸುನೀಲ ವಸ್ತçದ, ಲೋಕೇಶ್ವರ ದೇವಸ್ಥಾನ ಅರ್ಚಕರು, ಲೋಕಾಪುರ, ನಾಗಣಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ವೆಂಕಟಾಪುರ, ಠಾಣಿಕೇರಿ, ಚೌಡಾಪುರ, ವರ್ಚಗಲ್, ಜಾಲಿಕಟ್ಟಿ ಸುತ್ತಲಿನ ಗ್ರಾಮದ ಸದ್ಭಕ್ತರು ಇದ್ದರು. ಜಾತ್ರೆಗೆ ಎಲ್ಲ ಕಡೆಗಳಿಂದ ಭಕ್ತರು ಆಗಮಿಸುವುದರಿಂದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಈ ವೇಳೆ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ಎಲ್ಲರ ಸಹಕಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಒಟ್ಟಿಗೆ ಕೂಡಿಕೊಂಡು ಸೌಹಾರ್ದದಿಂದ ಜಾತ್ರೆಯನ್ನು ಮಾಡೋಣ. ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಪೂರೈಕೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.

- ಶಿವಾನಂದ ಉದಪುಡಿ, ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆ ವಿಳಂಬ: ಮೂಲ್ಕಿ ತಾಲೂಕು ಪ್ರಜಾ ಸೌಧಕ್ಕೆ ಡಿಸಿ ಭೇಟಿ
ಬಂಟ್ವಾಳ: 25ರಂದು ‘ಕೋಟಿ ಚೆನ್ನಯ್ಯ ಕ್ರೀಡಾಕೂಟ’