- ಗೋವುಗಳಿಗೆ ಮೇವು, ರಕ್ತದಾನ ಶಿಬಿರ: ಬಿ.ಕೆ.ಶಿವಕುಮಾರ ಮಾಹಿತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಅವರ ಜನ್ಮದಿನೋತ್ಸವವನ್ನು ಆ.20 ರಿಂದ 24 ರವರೆಗೆ ವಿವಿಧ ಸಮಾಜಮುಖಿ, ಮಾನವೀಯ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಗುವುದು ಎಂದು ಲೋಕಿಕೆರೆ ನಾಗರಾಜ ಅಭಿಮಾನಿ ಬಳಗದ ಬಾತಿ ಬಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.20ರಂದು ಗೋವುಗಳಿಗೆ ಮೇವು ವಿತರಣೆ, ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುವುದು. ಆ.24ರಂದು ವಿದ್ಯಾನಗರದ ಗಾಂಧಿ ವೃತ್ತದ ಬಳಿ ಬಳಗದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.ಆ.24ರ ಬೆಳಗ್ಗೆ 11 ಗಂಟೆಗೆ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ನಡೆಯುವ ಲೋಕಿಕೆರೆ ನಾಗರಾಜ ಜನ್ಮದಿನೋತ್ಸವ ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡುವರು. ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಂ.ಬಸವರಾಜ ನಾಯ್ಕ, ಪ್ರೊ. ಎನ್.ಲಿಂಗಣ್ಣ, ಎಚ್.ಪಿ.ರಾಜೇಶ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ ಇತರರು ಭಾಗವಹಿಸುವರು ಎಂದು ಬಿ.ಕೆ.ಶಿವಕುಮಾರ ತಿಳಿಸಿದರು.ಬಳಗದ ಎನ್.ಎಚ್.ಹಾಲೇಶ ನಾಯ್ಕ, ಆರ್.ಜೆ. ನರೇಂದ್ರ ಕುಮಾರ್, ಮಂಜಣ್ಣ ವಾಟರ್, ಶಾಮನೂರು ರಾಜು ಇದ್ದರು.
- - --19ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಮಂಗಳವಾರ ಲೋಕಿಕೆರೆ ನಾಗರಾಜ ಅಭಿಮಾನಿ ಬಳಗದ ಮುಖಂಡ ಬಾತಿ ಬಿ.ಕೆ.ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.