ಬಿ.ಕಣಬೂರು ಗ್ರಾಪಂ ವಿವಿಧ ಶಾಲೆಗಳಿಗೆ 8 ವಿದ್ಯಾರ್ಥಿಗಳು ಗೈರು
ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಶಾಲೆಗಳಿಗೆ ದೀರ್ಘ ಗೈರಾಗುತ್ತಿರುವ ವಿದ್ಯಾರ್ಥಿಗಳ ಮನೆಗೆ ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರು ಭೇಟಿ ನೀಡಿ ಮಕ್ಕಳ ಮನವೊಲಿಸಿ ಪುನಃ ಶಾಲೆಗೆ ಬರಲು ಸೂಚಿಸಲಾಯಿತು.ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಸುಮಾರು 8 ವಿದ್ಯಾರ್ಥಿಗಳು ಕಳೆದ ಕೆಲವು ತಿಂಗಳುಗಳಿಂದ ದೀರ್ಘ ಗೈರು ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಶಾಲೆ ಮುಖ್ಯಶಿಕ್ಷಕರು ಮಕ್ಕಳ ರಕ್ಷಣಾ ಕಾವಲು ಸಮಿತಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಕೋರಿದ್ದರು.ಈ ಹಿನ್ನೆಲೆಯಲ್ಲಿ ಬಿ.ಕಣಬೂರು ಗ್ರಾಪಂ ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರು ಸೋಮವಾರ ಗೈರಾದ ಮಕ್ಕಳ ಮನೆಗಳಿಗೆ ತೆರಳಿ ಪೋಷಕರು ಹಾಗೂ ಮಕ್ಕಳಿಗೆ ಬುದ್ಧಿವಾದ ಹೇಳಿ ಶಾಲೆಗೆ ಪುನಃ ಹಾಜರಾಗುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಪುನಃ ಶಾಲೆಗೆ ಹಾಜರಾಗುವ ಕುರಿತು ಕಾವಲು ಸಮಿತಿಗೆ ಒಪ್ಪಿಗೆ ಪತ್ರ ಸಹ ಬರೆದು ಕೊಟ್ಟಿದ್ದಾರೆ.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಇಬ್ರಾಹಿಂ ಶಾಫಿ, ಬಿ.ಸಿ.ಸಂತೋಷ್‌ಕುಮಾರ್, ಗ್ರಾಮ ಆಡಳಿತಾಧಿಕಾರಿ ಸಮೀಕ್ಷಾ, ಮುಖ್ಯಶಿಕ್ಷಕ ಕೊಟ್ರೇಶಪ್ಪ, ಗ್ರಾಪಂ ಪಿಡಿಓ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಅಂಗನವಾಡಿ ಕಾರ್ಯಕರ್ತೆ ರಮ್ಯಾ, ಪೊಲೀಸ್ ಸಿಬ್ಬಂದಿ ಉಮಾದೇವಿ, ಮಾನಸ ಮತ್ತಿತರರು ಹಾಜರಿದ್ದರು.೨೯ಬಿಹೆಚ್‌ಆರ್ ೧
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ದೀರ್ಘ ಗೈರಾಗುತ್ತಿದ್ದ ವಿದ್ಯಾರ್ಥಿಗಳ ಮನೆಗೆ ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರು ಭೇಟಿ ನೀಡಿ ಮಕ್ಕಳ ಮನವೊಲಿಸಿ ಶಾಲೆಗೆ ಪುನಃ ಬರಲು ಸೂಚಿಸಲಾಯಿತು.