ಕನ್ನಡಪ್ರಭ ವಾರ್ತೆ ತುರುವೇಕೆರೆ
ತಮ್ಮ ಗ್ಲೋಬಲ್ ಎಂಬಸಿ ಶಾಲಾ ಆವರಣದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಮಕ್ಕಳೊಂದಿಗೆ ನಡೆಸಿದ ಯೋಗಚಾರಣೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಮನುಷ್ಯನ ಸರಾಸರಿ ಆಯಸ್ಸು 65 ಕ್ಕೆ ಇಳಿದಿದೆ. ಈ ಹಿಂದಿನ ದಿನಗಳಲ್ಲಿ ಸರಾಸರಿ ಆಯಸ್ಸು 80 ರಿಂದ 90 ಆಗಿತ್ತು. ಆದರೆ ಈಗ ದಿನನಿತ್ಯದ ಆಚರಣೆಗಳಿಂದ ಮನುಷ್ಯನ ಆಯಸ್ಸು ಕಡಿಮೆಯಾಗಿದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ವಿರಳವಾಗಿದೆ. ಯೋಗಾಭ್ಯಾಸ ಅಥವಾ ಶರೀರಕ್ಕೆ ವ್ಯಾಯಾಮ ಇಲ್ಲದಾಗಿದೆ. ಎಲ್ಲರೂ ಸುಖೀ ಜೀವನವನ್ನೇ ಬಯಸುತ್ತಿದ್ದಾರೆ. ಹಾಗಾಗಿ ಮನುಷ್ಯನಲ್ಲಿ ಸೋಂಬೇರಿತನ ಮನೆ ಮಾಡಿದೆ. ಇದರಿಂದಾಗಿ ದೇಹ ಜಡ್ಡು ಹಿಡಿದು ಕಷ್ಟ ಪಡದ ಹಾಗೆ ಆಗಿದೆ ಎಂದರು.
ಯೋಗಾಭ್ಯಾಸವನ್ನು ಮಾಡುತ್ತಿದ್ದವರು ಅತಿ ಹೆಚ್ಚು ವರ್ಷ ಆರೋಗ್ಯಕರ ಜೀವನ ನಡೆಸಿರುವ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದೆ. ತಮ್ಮ ಜೀವನದ ಅಂಗವೆಂದು ಯಾರು ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೋ ಅವರೆಲ್ಲರೂ ದೀರ್ಘಾಯುಷಿಗಳು, ಆರೋಗ್ಯವಂತರೂ ಆಗಿದ್ದಾರೆ ಎಂಬುದು ಹಲವಾರು ನಿದರ್ಶನಗಳಿಂದ ಸಾಬೀತಾಗಿದೆ. ಅವರೆಲ್ಲರೂ ತಮ್ಮ ಕೊನೆ ದಿನದವರೆಗೂ ಆರೋಗ್ಯವಂತರಾಗಿದ್ದರು ಎಂಬುದು ಸಂತಸದ ಸಂಗತಿ ಎಂದರು. ಯೋಗವನ್ನು ಪ್ರತಿದಿನವೂ ಮಾಡುವುದರಿಂದ ಲವಲವಿಕೆ ಮೈಗೂಡುತ್ತದೆ. ಆರೋಗ್ಯ ತರುತ್ತದೆ. ಮಕ್ಕಳಿಂದಲೇ ಯೋಗಕ್ಕೆ ಒತ್ತು ನೀಡಿದರೆ ಮಕ್ಕಳಲ್ಲಿ ತೇಜಸ್ಸು, ಬುದ್ದಿವಂತಿಕೆ, ಆರೋಗ್ಯ ದೊರೆತು ಉತ್ತಮ ಆರೋಗ್ಯವಂತ ಪ್ರಜೆಗಳಾಗುವರು ಎಂದು ಗಂಗಾಧರ ದೇವರ ಮನೆ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶರಿತಾ ದೇವರಮನೆ ಯೋಗ ಶಿಕ್ಷಕರಾದ ರಾಣಿ ಮತ್ತು ಚೈತನ್ಯ ರವರನ್ನು ಅಭಿನಂದಿಸಿದರು. ಈ ವೇಳೆ ನೂರಾರು ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗಿದರು.