ಕನ್ನಡಪ್ರಭ ವಾರ್ತೆ ಗುಳೇದಗುಡ್ಡವೈದ್ಯರ ಶಿಕ್ಷಕರ ಸೇವೆ ಅಪಾರ. ವೈದ್ಯರಿಗೆ, ಶುಶ್ರೂಷಕರಿಗೆ ವಿಶ್ರಾಂತಿ ಎಂಬುದೇ ಕಡಿಮೆ. ಜನರ ಜೀವನ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಾರೆ ಇವರಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವೈದ್ಯರ ಶಿಕ್ಷಕರ ಸೇವೆ ಅಪಾರ. ವೈದ್ಯರಿಗೆ, ಶುಶ್ರೂಷಕರಿಗೆ ವಿಶ್ರಾಂತಿ ಎಂಬುದೇ ಕಡಿಮೆ. ಜನರ ಜೀವನ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಾರೆ ಇವರಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಸಮೀಪದ ತೋಗುಣಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ಥಿ ಹಾಗೂ ನಿರ್ವಹಣೆಯ ಸುಮಾರು ₹ 35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿ ಮಾತನಾಡಿ, ರೋಗಿಯ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟೇ ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ರೋಗಿಗಳನ್ನು ರೋಗ ವಾಸಿ ಮಾಡಿ, ಮರುವಜೀವ ನೀಡುವ ವೈದ್ಯರಕಾರ್ಯ ಶ್ಲಾಘನೀಯ.ಸಾರ್ವಜನಿಕರು ವೈದ್ಯರು, ಅಧಿಕಾರಿಗಳ ಜೊತೆಗೆ ಸಹಕಾರದಿಂದ ನಡೆದುಕೊಳ್ಳಿ.ಅದಷ್ಟೇಅಲ್ಲದೇ ವೈದ್ಯರು, ಸಿಬ್ಬಂದಿ ರೋಗಿಗಳಿಗೆ ಸರಿಯಾಗಿಚಿಕಿತ್ಸೆ ನೀಡಿ, ಆರೈಕೆ ನೀಡಬೇಕು.ಗ್ರಾಮದಆಸ್ಪತ್ರೆಯಕಟ್ಟಡದ ಬಗ್ಗೆ ವೈದ್ಯರು ನಮ್ಮಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳ ಸೌಕರ್ಯಗಳನ್ನು ಬಲ ಪಡಿಸುವ ಯೋಜನೆ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರ ಕೆಲಸ ಹೆಚ್ಚಿನದಿದೆ. ಅವರ ಬಗ್ಗೆ ಗೌರವ ಬೆಳೆಸಿಕೊಳ್ಳಿ ದೂರು ಕೊಡುವ ಬದಲು ಅವರ ಸಮಸ್ಯೆ ಅರ್ಥ ಮಾಡಿಕೊಂಡು ಅವರಿಗೆ ಸಾಥ್ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಸನ್ನಿಲಿ ಮಾತನಾಡಿ, ನಮ್ಮಅಸ್ಪತ್ರೆಯಲ್ಲಿ ಇಸಿಜಿ ಚಿಕಿತ್ಸಾ ಸೌಲಭ್ಯವಿದೆಅದನ್ನು ಸದುಪಯೋಗಪಡಿಸಿಕೊಳ್ಳಿ. ವಾರ್ಡಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದ ಸನ್ನಿಲಿ ಅವರು, ಹೆಚ್ಚಿನಕಟ್ಟಡ ನಿರ್ಮಾಣಕ್ಕೆ, ಪೂರ್ಣ ಪ್ರಮಾಣದಲ್ಲಿಅಂಬ್ಯುಲೆನ್ಸ್ ಸೌಲಭ್ಯ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.20ಲಕ್ಷ ಕಾಮಗಾರಿಗೆ ಚಾಲನೆ: ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ತೋಗುಣಶಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ 20 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಗ್ರಾಮದ ಮುಖಂಡರಾದ ಎಸ್.ಎಂ.ಪಾಟೀಲ, ಶಿವಾನಂದ ವಾಲಿಕಾರ, ಕೆಎಂಎಪ್ ನಿರ್ದೇಶಕ ಸಿದ್ದು ಕೊಣ್ಣುರ, ಗುತ್ತಿಗೆದಾರ ಜಿ.ಅರುಣಕುಮಾರ, ಇಂಜಿನಿಯರ್ ಶರಣಗೌಡ ಮುಗನೂಗೌಡ್ರ, ಫಕೀರಪ್ಪ ತಳವಾರ, ಪರಶುರಾಮ ಮಾದರ, ಕಾಶಿನಾಥ ಪುರಾಣಿಕಮಠ, ಮಲಕಾಜಪ್ಪ ಜಾಲಿಹಾಳ, ಬಸರಕೋಡ, ಕೇಶಪ್ಪ ಲಮಾಣಿ, ಮಲ್ಲಪ್ಪ ತಿಪ್ಪಣ್ಣವರ, ಧರಿಯಪ್ಪ ಉಪ್ಪಾರ, ಕರಿಯಪ್ಪ ಪೂಜಾರ, ಯಲ್ಲಪ್ಪ ಗುಳೇದ, ಭೀಮಪ್ಪ ಪೂಜಾರಿ, ನಾಗಪ್ಪಜಾಲಿಹಾಳ, ಶಹಬಾಜ್ ಮುಲ್ಲಾ, ರಾಜು ಸಂಗಮ, ಮಹಾಂತೇಶ ಉಳ್ಳಾಗಡ್ಡಿ, ಸುರೇಶಕುರಿ, ತುಕ್ಕಪ್ಪಜಾಧವ, ಡಾ.ವಿನೋದಗದಗ, ಜಂಪಣ್ಣಕಟಗೇರಿ, ಅನ್ನಪೂರ್ಣ ಬಿಲ್ಲಕಾರ, ವಿನುತ್ ಸಿದ್ಲಿಂಗಪ್ಪನವರ, ಎಸ್.ಬಿ.ನೋಟಗಾರ, ಜಾಪಾಳ, ಸೇರಿದಂತೆಇತರರುಇದ್ದರು.