ಹುಬ್ಬಳ್ಳಿ:
ಅವರು ಬುಧವಾರ ಇಲ್ಲಿಯ ನವನಗರ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿರುವ ರಮಿಲಾ ಹಾಸ್ಪೆಸ್ ಕ್ಯಾನ್ಸರ್ ಆರೈಕೆ ಮತ್ತು ಉಪಶಮನ ಕೇಂದ್ರದಲ್ಲಿ ಮಜೇಥಿಯಾ ಫೌಂಡೇಶನ್, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಪ್ಯಾಲಿಯೇಟಿವ್ ಕೇರ್ ಮತ್ತು ಜೀವನ ಕೌಶಲಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣದ ಜತೆಯಲ್ಲಿ ಒಬ್ಬ ರೋಗಿಯ ಆರೈಕೆ ಮಾಡುವುದು ಹೇಗೆ ಎಂಬುದನ್ನು ನಾವುಗಳು ಅರಿತುಕೊಂಡರೆ ಚಿಕಿತ್ಸೆ ನಂತರವೂ ಮನೆಯಲ್ಲಿ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡಬಹುದು. ಈ ಕುರಿತು ಪ್ರತಿಯೊಬ್ಬರೂ ಅರಿತುಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಪ್ರತಿ ಮನೆಯಲ್ಲೂ ಅರೈಕೆದಾರರು ಇರಬೇಕು ಎನ್ನುವ ಉದ್ದೇಶದಿಂದ ಮಜೇಥಿಯಾ ಫೌಂಡೇಶನ್ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ. ಇತ್ತ ತರಬೇತಿ ಪಡೆಯುವವರಿಗೆ ಮನೆಯಲ್ಲಿನ ಹಿರಿಯ ನಾಗರಿಕರನ್ನು ಆರೈಕೆ ಮಾಡಲು ಸಹಕಾರಿಯಾಗಲಿದೆ ಎಂದರು.
ಡಾ. ವಿ.ಬಿ. ನಿಟಾಲಿ ಪ್ರಾಸ್ತಾವಿಕ ಮಾತನಾಡಿದರು. ಆರೋಗ್ಯ ತಾಂತ್ರಿಕ ನಿರ್ದೇಶಕಿ ಡಾ. ಗೌತಮಿ, ಮೋಹನಕುಮಾರ, ಡಾ. ಶ್ರೀವಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಡಾ. ಸುನೀಲಕುಮಾರ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು.