ಹಾಸನ : ಹೊಸ ವರ್ಷದ ಆಚರಣೆ ವೇಳೆ ಮಧ್ಯರಾತ್ರಿ ಪ್ರೇಯಸಿಯಿಂದ ಪ್ರಿಯಕರನಿಗೆ ಚಾಕು ಇರಿತ

KannadaprabhaNewsNetwork |  
Published : Jan 02, 2025, 12:32 AM ISTUpdated : Jan 02, 2025, 09:12 AM IST
ಮನುಕುಮಾರ್ | Kannada Prabha

ಸಾರಾಂಶ

 ಹೊಸ ವರ್ಷದ ಆಚರಣೆ ವೇಳೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಪ್ರಿಯಕರನ ಬಳಿ ಹೋಗಿ ಗಲಾಟೆ ತೆಗೆದು ಪ್ರೇಯಸಿ ಮೊದಲೆ ನಿರ್ಧರಿಸಿದಂತೆ ಚಾಕುವಿನಿಂದ ಇರಿದ ಘಟನೆ ಹೊಸ ವರ್ಷದ ಹಿಂದಿನ ದಿವಸ ತಡರಾತ್ರಿಯಲ್ಲಿ ನಡೆದಿದೆ.  

  ಹಾಸನ : ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಪ್ರೇಮಿಗಳು ಸಲ್ಪ ದಿನಗಳು ದೂರವಾಗಿದ್ದು, ಹೊಸ ವರ್ಷದ ಆಚರಣೆ ವೇಳೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಪ್ರಿಯಕರನ ಬಳಿ ಹೋಗಿ ಗಲಾಟೆ ತೆಗೆದು ಮೊದಲೆ ನಿರ್ಧರಿಸಿದಂತೆ ಪ್ರೇಯಸಿ ಚಾಕುವಿನಿಂದ ಇರಿದ ಘಟನೆ ಹೊಸ ವರ್ಷದ ಹಿಂದಿನ ದಿವಸ ತಡರಾತ್ರಿಯಲ್ಲಿ ನಡೆದಿದೆ.

ಹಾಸನ ತಾಲೂಕಿನ ಎ. ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (೨೪) ಎಂಬುವರೇ ಪ್ರಿಯತಮೆಯಿಂದ ಚಾಕು ಇರಿತಕ್ಕೆ ಒಳಗಾದವನು. ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ಈ ದುರ್ಘಟನೆ ನಡೆದಿದೆ. ಭವಾನಿ ಎಂಬುವಳು ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಪ್ರೇಮ ನಡೆಯುತಿತ್ತು. 

ಏಕೋ ಕೆಲ ದಿನಗಳಿಂದ ಇಬ್ಬರೂ ಬೇರೆಯಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದುಕೊಂಡು ಪದೇ ಪದೇ ಮನುಕುಮಾರ್ಗೆ ಭವಾನಿ ಫೋನ್ ಮಾಡಿದರೂ ಏಕೋ ರಿಸಿವ್ ಮಾಡಲಿಲ್ಲ. ತಡರಾತ್ರಿ ೧೨.೩೦ಕ್ಕೆ ಹೋಟೆಲ್ ಬಳಿ ಬಂದ ಭವಾನಿಯು ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋದಳು. 

ಅಷ್ಟರಲ್ಲಿ ಮನುಕುಮಾರ್ ಗೇಟ್ ಬಳಿ ಬಂದನು. ಈ ವೇಳೆ ಭವಾನಿ ಹಾಗೂ ಮನುಕುಮಾರ್ ನಡುವೆ ಜಗಳ ಶುರುವಾಯಿತು. ತಕ್ಷಣ ಜಗಳವನ್ನು ಮನುಕುಮಾರ್ ಸ್ನೇಹಿತರು ಬಿಡಿಸಲು ಮುಂದಾದರು. ನೋಡುತಿದ್ದಂತೆ ಈ ವೇಳೆ ಮನುಕುಮಾರ್‌ಗೆ ಭವಾನಿ ಏಕಾಏಕಿ ಚಾಕುವಿನಿಂದ ಇರಿದಳು. ಕೂಡಲೇ ಮನುಕುಮಾರ್‌ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದರು. ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದೆ. ಮನುಕುಮಾರ್ ಹಾಸನದಲ್ಲಿ ಹಾರ್ಡ್ವೇರ್‌ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್‌.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ವೇಳೆ ಚಾಕು ಇರಿತಕ್ಕೆ ಒಳಗಾದ ಸಂಬಂಧಿಕರು ಮಾಧ್ಯಮದ ಮುಂದೆ ಘಟನೆ ಬಗ್ಗೆ ತಿಳಿಸಿ ತಮ್ಮ ಅಳಲು ತೋಡಿಕೊಂಡರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ