ಊರು ಬಿಟ್ಟ ಪ್ರೇಮಿಗಳು: ಯುವಕನ ಸಂಬಂಧಿಗಳು ಆಸ್ಪತ್ರೆಗೆ!

KannadaprabhaNewsNetwork |  
Published : Nov 20, 2026, 01:30 AM IST
ರಾಣಿಬೆನ್ನೂರು ನಗರದ ತಹಸೀಲ್ದಾರ್ ಕಚೇರಿ ಎದುರುವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಪ್ರೀತಿಸಿ ವಿವಾಹದ ಜೋಡಿಯ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿ 6ಕ್ಕೂ ಹೆಚ್ಚು ಜನರು ಗಾಯಗೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

- ಹರಪನಹಳ್ಳಿ ತಾ. ಸತ್ತೂರು ಗೊಲ್ಲರಹಟ್ಟಿಯಲ್ಲಿ ಮಾರಾಮಾರಿ । 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ । ಅರಸೀಕೆರೆ ಠಾಣೆಗೆ ದೂರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರೀತಿಸಿ ವಿವಾಹದ ಜೋಡಿಯ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿ 6ಕ್ಕೂ ಹೆಚ್ಚು ಜನರು ಗಾಯಗೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಕೂಲಿ ಕೆಲಸಗಾರ ಬಸವರಾಜ (25) ಹಾಗೂ ಅದೇ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ (21) 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಇಬ್ಬರೂ 4 ದಿನಗಳ ಹಿಂದೆ ಮನೆ ಬಿಟ್ಟುಹೋಗಿ, ಪ್ರೇಮ ವಿವಾಹವಾಗಿದ್ದರು.

ವಿರೋಧದ ಮಧ್ಯೆಯೂ ಮದುವೆಯಾದ ಬಗ್ಗೆ ಎರಡೂ ಕುಟುಂಬಗಳ ಕಡೆಯವರಲ್ಲಿ ಅಸಮಾಧಾನ ಇದ್ದೇ ಇತ್ತು. ಈ ಸಂಬಂಧ ಬಸವರಾಜನ ಸಂಬಂಧಿಗಳ ಮೇಲೆ ಯುವತಿಯ ಕಡೆಯವರ ಮಧ್ಯೆ ಕಳೆದ ರಾತ್ರಿ ಭಾರಿ ಮಾರಾಮಾರಿಯಾಗಿದೆ. ಯುವಕನ ಕಡೆಯವರ ಮೇಲೆ ಯುವತಿ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಯುವಕ ಬಸವರಾಜನ ಸಂಬಂಧಿಗಳಾದ ಉಮಾಪತಿ, ಚನ್ನಪ್ಪ, ನವೀನ, ಪ್ರಶಾಂತ ಸೇರಿದಂತೆ ಆರಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯ ಸಿಸಿ ಕ್ಯಾಮೆರಾ ದೃಶ್ಯಗಳು, ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ವೈರಲ್ ಆಗಿವೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಎನ್ನದೇ ತಮ್ಮ ಮೇಲೆ ದಾಳಿ ಮಾಡಿದ್ದಾರೆ. ತಮ್ಮ ಕುಟುಂಬ, ಸಂಬಂಧಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವಕನ ಕಡೆಯವರು ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅನ್ಯಜಾತಿಯ ಪ್ರೇಮಿಗಳು:

ಪ್ರೇಮಿಸಿ ಮದುವೆಯಾದ ಬಸವರಾಜ ಹಾಗೂ ಐಶ್ವರ್ಯ ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದು, ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗಿದ್ದರಿಂದ ಯುವತಿ ಕಡೆಯವರು ಗುಂಪು ಕಟ್ಟಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಸವರಾಜ ವಾಲ್ಮೀಕಿ ಜನಾಂಗಕ್ಕೆ ಸೇರಿದ್ದು, ಯುವತಿ ಯಾದವ ಸಮುದಾಯಕ್ಕೆ ಸೇರಿದವರು. ಪ್ರೀತಿಸಿ ಮದುವೆಯಾದ ಈ ಇಬ್ಬರೂ ಈಗ ಎಲ್ಲಿದ್ದಾರೆಂಬ ಸಂಗತಿ ಯಾರಿಗೂ ಗೊತ್ತಿಲ್ಲ. ಆದರೆ, ಇಬ್ಬರೂ ಮದುವೆ ಆಗಿದ್ದರಿಂದ ಯುವಕನ ಸಂಬಂಧಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿವೆ.

- - -

(ಬಾಕ್ಸ್‌)

* ಹಲ್ಲೆ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಹಲ್ಲೆ ವಿಷಯ ತಿಳಿದ ಜಿಲ್ಲಾ ವಾಲ್ಮೀಕಿ ಸ್ವಾಭಿಮಾನಿ ನಾಯಕರ ವೇದಿಕೆ ಅಧ್ಯಕ್ಷ ಎನ್.ಎಚ್.ಹಾಲೇಶ ನಾಯಕ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳು ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ಹಾಗೂ ಧೈರ್ಯ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಯುವಕ- ಯುವತಿ ಪ್ರೀತಿಸುತ್ತಿದ್ದು, ಮನೆ ಬಿಟ್ಟು ಹೋಗಿದ್ದಾರೆಂದು ಗೊತ್ತಾಗಿದೆ. ಆದರೆ, ಯುವಕನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂಬ ಕಾರಣಕ್ಕೆ ಆತನ ಕುಟುಂಬದ ಮೇಲೆ ಗುಂಪು ಕಟ್ಟಿಕೊಂಡು ಬಂದು, ಹಲ್ಲೆ ಮಾಡಲಾಗಿದೆ. ಮನೆಗೆ ನುಗ್ಗಿ ಹಲ್ಲೆ ಮಾಡಿದವರನ್ನು ಬಂಧಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

- - -

(-ಫೋಟೋ?)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ