ಚಿಕ್ಕಮಗಳೂರುಸಾಮೂಹಿಕ ವಿವಾಹನದಲ್ಲಿ ಜಾತಿ ಸಂಕೋಲೆ ಮೀರಿ ಬ್ರಾಹ್ಮಣ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಸಮುದಾಯದ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಾಮೂಹಿಕ ವಿವಾಹನದಲ್ಲಿ ಜಾತಿ ಸಂಕೋಲೆ ಮೀರಿ ಬ್ರಾಹ್ಮಣ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಸಮುದಾಯದ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಇವರ ಮದುವೆ ನೆರವೇರಿದೆ.
ಪ್ರೀತಿಸುವ ವೇಳೆ ಜಾತಿ ಧರ್ಮ ನೋಡುವುದಿಲ್ಲ, ಆದರೆ ಮದುವೆ ವಿಚಾರ ಬಂದಾಗ ಜಾತಿ ಬಹಳಷ್ಟು ಪ್ರೇಮಿಗಳಿಗೆ ಅಡ್ಡಿಯಾಗಲಿದೆ. ಆದರೆ ಇಲ್ಲಿ ಸಚಿನ್ ಆ ಜಾತಿ ಸಂಕೋಲೆ ಮೀರಿ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಆಗಿದ್ದಾನೆ.
ಎಟಿಎಂನಿಂದ ಹಣ ತೆಗೆಯುವುದಕ್ಕೆ ಹೋದಾಗ ಸಚಿನ್ ಹಾಗೂ ಸಾವಿತ್ರಿ ಅವರಿಗೆ ಪರಸ್ಪರ ಪರಿಚಯವಾಗಿತ್ತು. ಇಬ್ಬರೂ
ಮೊಬೈಕ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ತದ ನಂತರ ಪ್ರೀತಿಯಾಗಿ ಮತ್ತಷ್ಟು ಹತ್ತಿರವಾಗಿದ್ದು, ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾರೆ. ಎರಡು ಮನೆಯವರನ್ನು ಈ ಜೋಡಿ ಒಪ್ಪಿಸಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುವುದು ವಿಶೇಷ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.