ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಉದ್ಭವಿಸಿದ ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿ ಬಂದಿರುವ ಎಲ್‌ಪಿಜಿ ಹಡಗು ಶಿವಾಲಿಕ್, ಗುಜರಾತ್‌ನ ಮುಂದ್ರಾ ಬಂದರು ತಲುಪಿದ್ದು, ಅಲ್ಲಿ ಅರ್ಧದಷ್ಟು ಎಲ್‌ಪಿಜಿ ಇಳಿಸಿ ಉಳಿದ ಎಲ್‌ಪಿಜಿಯನ್ನು ನವ ಮಂಗಳೂರು ಬಂದರಿಗೆ ತರಲು ಉದ್ದೇಶಿಸಲಾಗಿದೆ.
ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಉದ್ಭವಿಸಿದ ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿ ಬಂದಿರುವ ಎಲ್‌ಪಿಜಿ ಹಡಗು ಶಿವಾಲಿಕ್, ಗುಜರಾತ್‌ನ ಮುಂದ್ರಾ ಬಂದರು ತಲುಪಿದ್ದು, ಅಲ್ಲಿ ಅರ್ಧದಷ್ಟು ಎಲ್‌ಪಿಜಿ ಇಳಿಸಿ ಉಳಿದ ಎಲ್‌ಪಿಜಿಯನ್ನು ನವ ಮಂಗಳೂರು ಬಂದರಿಗೆ ತರಲು ಉದ್ದೇಶಿಸಲಾಗಿದೆ.
ಒಟ್ಟು 46,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಈ ಹಡಗು ಮುಂದ್ರಾ ಬಂದರಿಗೆ ಸೋಮವಾರ ತಲುಪಿದೆ. ಈ ಪೈಕಿ 20,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮುಂದ್ರಾದಲ್ಲಿಯೇ ಇಳಿಸಲಾಗುವುದು. ಉಳಿದ 26,000 ಮೆಟ್ರಿಕ್ ಟನ್‌ನ್ನು ನವ ಮಂಗಳೂರು ಬಂದರಿಗೆ ತರಿಸಿ ಇಲ್ಲಿ ಇಳಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.ಈ ಎಲ್‌ಪಿಜಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಆದೇಶಿಸಿತ್ತು.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ಈ ಎಲ್‌ಪಿಜಿ ಹಡಗು ಸುರಕ್ಷಿತವಾಗಿ ದಾಟಿ ಭಾರತ ತಲುಪಿರುವುದು ಮಹತ್ವದ್ದಾಗಿದೆ. ದೇಶೀಯ ಎಲ್‌ಪಿಜಿ ಕೊರತೆ ನೀಗಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.ಶಿವಾಲಿಕ್ ಹಡಗು ಭಾರತೀಯ ಶಿಪ್ಪಿಂಗ್ ಕಾರ್ಪೊರೇಶನ್ (ಎಸ್‌ಸಿಐ) ಮಾಲೀಕತ್ವದಲ್ಲಿದ್ದು, ಇದು ಬಹುದೊಡ್ಡ ಅನಿಲ ಸಂಗ್ರಹ ಸಾಮರ್ಥ್ಯದ ಟ್ಯಾಂಕರ್ ಆಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.