ಸಾಲುಮರದ ತಿಮ್ಮಕ್ಕ ಫೌಂಡೇಷನ್‌ನಿಂದ ಧರ್ಮಸ್ಥಳ ಪಾದಯಾತ್ರಿಗಳಿಗೆ ಭೋಜನ ವ್ಯವಸ್ಥೆ

KannadaprabhaNewsNetwork | Published : Mar 6, 2024 2:15 AM

ಸಾರಾಂಶ

ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಬೇಲೂರಿನ ಬಳ್ಳೂರು ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಷನ್ ವತಿಯಿಂದ ಪಲಾವ್, ಕೇಸರಿಬಾತ್, ಹಣ್ಣು ಹಂಪಲು ನೀಡಲಾಯಿತು.

ವಿತರಣೆ । ಧರ್ಮಸ್ಥಳಕ್ಕೆ ಬೇಲೂರು ಮಂದಿ ಪಾದಯಾತ್ರೆ

ಕನ್ನಡಪ್ರಭ ವಾರ್ತೆ ಬೇಲೂರು

ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಬಳ್ಳೂರು ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಷನ್ ವತಿಯಿಂದ ಪಲಾವ್, ಕೇಸರಿಬಾತ್, ಹಣ್ಣು ಹಂಪಲು ನೀಡಲಾಯಿತು.

ತಾಲೂಕಿನ ಬಳ್ಳೂರು ಪಾಳ್ಯದಲ್ಲಿ ಮಂಗಳವಾರ ಬೆಳಿಗ್ಗೆ ದತ್ತುಪುತ್ರ ಬಳ್ಳೂರು ಉಮೇಶ್ ಸಹಕಾರದೊಂದಿಗೆ ಭಕ್ತಾದಿಗಳಿಗೆ ಅನ್ನದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನೋಡಲು ಪಾದಯಾತ್ರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ತಾವು ಧರ್ಮಸ್ಥಳಕ್ಕೆ ಹೋದಾಗಲೆಲ್ಲ ವೀರೇಂದ್ರ ಹೆಗ್ಗಡೆಯವರು ನಮಗೆ ಉತ್ತಮ ಆತಿಥ್ಯವನ್ನು ನೀಡಿ ಬೀಳ್ಕೊಟ್ಟಿದ್ದಾರೆ. ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರು ಹಿಂದಿರುಗಿದ ನಂತರ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟರೆ ಪರಿಸರಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಡಾ.ಬಳ್ಳೂರು ಉಮೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಧರ್ಮಸ್ಥಳ ಪಾದಯಾತ್ರಿಗಳಿಗೆ ಅನ್ನದಾನ ನಡೆಸಿಕೊಂಡು ಬರುತ್ತಿದ್ದೇವೆ. ಧರ್ಮಸ್ಥಳಕ್ಕೂ ಸಾಲುಮರದ ತಿಮ್ಮಕ್ಕನಿಗೂ ಅವಿನಾಭಾವ ಸಂಬಂಧವಿದೆ, ಪರಿಸರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ತಿಮ್ಮಕ್ಕ ತೆರಳಿ ಶುಭಕೋರಿ ಬಂದಿದ್ದಾರೆ ಎಂದರು.

ವಕೀಲ ನಿಂಗರಾಜ್, ಪ್ರಭಾವತಿ ನಾಗೇಶ್ ಇದ್ದರು.ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಸಾಲುಮರದ ತಿಮ್ಮಕ್ಕ ಫೌಂಡೇಶನ್ ವತಿಯಿಂದ ಪಲಾವ್, ಕೇಸರಿಬಾತ್, ಹಣ್ಣು ಹಂಪಲು ನೀಡಲಾಯಿತು. ಆಯ್ಕೆ । ಅಧ್ಯಕ್ಷ ಸ್ಥಾನಕ್ಕೆ ಉಂಟಾಗಿದ್ದ ಗೊಂದಲ । ಬಳಿಕ ಚುನಾವಣೆ ನಿರ್ಧಾರ

ಬೇಲೂರು ಟೌನ್ ಸಂಘಕ್ಕೆ ನಿರ್ದೇಕರಾಗಿ ಕುಮಾರ್ ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರು ಟೌನ್ ಸಹಕಾರ ಸಂಘ ನಿಯಮಿತ ಸಂಘಕ್ಕೆ ನಿರ್ದೇಕರಾಗಿ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಕೆಂಪೇಗೌಡ ವೃತ್ತದ ಬಳಿ ಇರುವ ಟೌನ್ ಕೋ ಆಪರೇಟಿವ್ ಸಹಕಾರ ಸಂಘದಲ್ಲಿ ಈ ಹಿಂದೆ ನಿರ್ದೇಶಕರಾಗಿದ್ದ ಪರಮೇಶ್ ನಿಧನರಾದ ಹಿನ್ನೆಲೆ ಅವರ ತೆರವಾದ ಸ್ಥಾನಕ್ಕೆ ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ ಕುಮಾರ್ ಅವರನ್ನು ನಾಮನಿರ್ದೇಶನ ಮೂಲಕ ಹಾಗೂ ಜಿಲ್ಲಾ ಉಪ ನಿಬಂಧಕರ ಕಚೇರಿ ಅಧಿಕಾರಿಗಳ ಸೂಚನೆಯಂತೆ ಮಂಗಳವಾರ ಅವರನ್ನು ನೇಮಿಸಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ಬಿ ಎಲ್ ಧರ್ಮೇಗೌಡ ತಿಳಿಸಿದರು,

ಆಯ್ಕೆಯಾದ ಕುಮಾರ್ ಮಾತನಾಡಿ, ‘ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ತಿಳಿಸುತ್ತೇನೆ. ಸಂಘದ ನಿಯಮಕ್ಕೆ ದಕ್ಕೆ ಬರದಂತೆ ನಡೆದುಕೊಳ್ಳುತ್ತೇನೆ, ಸಂಘದ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು

ಸಂಘದ ನಿರ್ದೇಶಕರಾದ ನಿಂಗಶೆಟ್ರು, ಬಸವರಾಜ್, ನಾಗೇಶ್, ರಾಮನಾಯಕ, ಉಮಾದೇವಿ ಯಶೋದಾ, ಮಂಜುನಾಥ ಶೆಟ್ಟಿ ಸೋಮಶೇಖರ್, ರವಿಕುಮಾರ್‌, ಸ್ಥಳೀಯರಾದ ಆನಂದ್ ರಮೇಶ್, ಸತೀಶ್, ದೇವರಾಜ್ ಇದ್ದರು.

ಬೇಲೂರು ಟೌನ್ ಸಹಕಾರ ಸಂಘ ನಿಯಮಿತ ಸಂಘಕ್ಕೆ ನಿರ್ದೇಕರಾಗಿ ಕುಮಾರ್ ಅವಿರೋಧ ಆಯ್ಕೆಯಾದರು.

Share this article