ಕನ್ನಡಪ್ರಭ ವಾರ್ತೆ ಹಾಸನ
ನಂತರ ಮಾತನಾಡಿದ ಅವರು, ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆರಂಭವಾಗಿ ನಂತರ ನಿಂತು ಹೋಗಿದೆ. ಹಾಸನದಲ್ಲಿ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ಇದೇ ಕಾರಣಕ್ಕೆ ನಮ್ಮ ಜಿಲ್ಲೆ ರಾಜ್ಯದಲ್ಲಿ ವಿಭಿನ್ನ, ಎಲ್ಲ ವಿಚಾರದಲ್ಲೂ ಮಾದರಿ ಎನಿಸಿದೆ. ಪ್ರೀತಿ, ಜಗಳ ಎಲ್ಲದಕ್ಕೂ ಇಲ್ಲಿ ಅವಕಾಶವಿದೆ. ಹಾಗಾಗಿ ನಮ್ಮ ಸಂಘ ಎಲ್ಲಾ ವಿಚಾರದಲ್ಲೂ ಮಾದರಿ. ಅಧಿಕಾರ ಮುಖ್ಯ ಅಲ್ಲ, ಅವಕಾಶ ಸಿಕ್ಕಾಗ ಏನು ಮಾಡಿದೆವು ಎಂಬುದು ಮುಖ್ಯ. ಎಲ್ಲರನ್ನೂ ಸಂಭಾಳಿಸಿಕೊಂಡು ಒಂದಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಅಧ್ಯಕ್ಷರಾದವರು ಮಾಡಬೇಕು. ಕೆಲವೊಮ್ಮೆ ಎಲ್ಲವನ್ನೂ ಸರಿದೂಗಿಸಿಕೊಂಡು ಕೆಲಸ ಮಾಡುವುದೂ ಮುಖ್ಯವಾಗುತ್ತದೆ ಎಂದು ಜಿಲ್ಲಾಧ್ಯಕ್ಷರಿಗೆ ಕಿವಿಮಾತು ಹೇಳಿದರು.
ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸುವಾರಿ ಎಚ್.ಬಿ. ಮದನಗೌಡ ಮಾತನಾಡಿ, ತಾಲೂಕು ಉಸ್ತುವಾರಿಗಳು ಪ್ರಾಮಾಣಿಕ, ಸಂಘಟಿತ ಕೆಲಸ ಮಾಡುತ್ತಿದ್ದಾರೆ, ಈಗ ಮಧ್ಯಾಹ್ನದ ಊಟದ ವ್ಯವಸ್ಥೆ ಶುರುವಾಗಿದೆ. ಸಂಘದಲ್ಲಿ ಹಿಂದೆಯೂ ಇತ್ತು, ಆಗ ಹೊರಗಿನಿಂದ ಊಟ ತರಿಸಲಾಗುತ್ತಿತ್ತು. ಈಗ ಸಂಘದಲ್ಲೇ ಬಿಸಿಯಾಗಿ ಮಾಡಿಸಲಾಗುತ್ತಿದೆ, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ರಾಜ್ಯ ಕಾರ್ಯಕಾರ್ಯಕಾರಿ ಸಮಿತಿ ಸದಸ್ಯ ಕೆ ಪಿ ಎಸ್ ಪ್ರಮೋದ್ ಮಾತನಾಡಿ, ಚುನಾವಣೆ ನಂತರ ಜೆ.ಆರ್. ಕೆಂಚೇಗೌಡ ಹಾಗೂ ತಂಡವರು ವಿಭಿನ್ನ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ ಹಾಗೂ ಕಟ್ಟಡ ನಿರ್ವಹಣಾ ಸಮಿತಿಗಳು ಉತ್ತಮವಾದ ಕೆಲಸ ಮಾಡುತ್ತಿವೆ. ಸಂಘದಲ್ಲೇ ಅಡುಗೆ ತಯಾರಿಸಿ ನೀಡಲಾಗುತ್ತದೆ. ಇಡೀ ಜಿಲ್ಲೆಯ ಪತ್ರಕರ್ತರು ಇದರ ಲಾಭ ಪಡೆಯಬೇಕೆಂದರು. ಗ್ರಾಮೀಣ ಭಾಗದಿಂದ ಬಂದವರಿಗೆ ಅನುಕೂಲ ಆಗಲೆಂದು ಈಗ ಚಾಲನೆ ನೀಡಲಾಗಿದೆ. ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.