ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲರ ಮೇಲೆ ಆರೋಪಿಸಿದ್ದು ತಪ್ಪು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತದ ನೀಲಮ್ಮ ಮೇಟಿ, ಸುಜಾತಾ ಕಳ್ಳಿಮನಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಸಂದರ್ಭದಲ್ಲಿ ಬಹುಮತವಿರಲಿಲ್ಲ. ನಮ್ಮ ಪಕ್ಷದವರೇ ಪಕ್ಷಾಂತರ ಮಾಡಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿದ ಎಂ.ಬಿ.ಪಾಟೀಲರು ಬಿಜೆಪಿ ಆಡಳಿತಾರೂಢ ಎದುರಾದ ಸಂದರ್ಭದಲ್ಲಿ ತನು, ಮನ, ಧನದಿಂದ ಬೆಂಬಲಿಸಿ ಅಧ್ಯಕ್ಷ ಸ್ಥಾನವನ್ನು ಕೊಡಿಸಿದ್ದಾರೆ ಎಂದು ಹೇಳಿದರು.
ಹಾಲುಮತ ಸಮಾಜದ ಸಂಗೀತಾ ದಿನ್ನಿ, ನೀಲಮ್ಮ ಮೇಟಿ, ಸುಜಾತಾ ಕಳ್ಳಿಮನಿ ಅಧ್ಯಕ್ಷರಾಗಲು ಎಂ.ಬಿ.ಪಾಟೀಲರೆ ಕಾರಣರಾಗಿದ್ದಾರೆ. ಆ ಸಮಯದಲ್ಲಿ ಎಂ.ಬಿ.ಪಾಟೀಲರು, ಸುನೀಲಗೌಡರು, ಶಿವಾನಂದ ಪಾಟೀಲರು, ಯಶವಂತರಾಯಗೌಡರು ಸೇರಿದಂತೆ ಹಲವರು ಬೆಂಬಲಿಸಿ, ನಮಗೆ ಸಾಥ್ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಹಾಲುಮತದ ಸಮಾಜದವರಿಗೆ ಟಿಕೆಟ್ ಕೊಡಿಸಿ ಅವರನ್ನು ಶಾಸಕರನ್ನಾಗಿಸಬೇಕಿದೆ ಎಂದರು.ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ತಾಲೂಕುಗಳಲ್ಲಿ ಹಾಲುಮತ ಸಮಾಜದ ಜನಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭೆಗೆ ಟಿಕೆಟ್ ನೀಡಬೇಕೆಂದು ಎಲ್ಲರೂ ಸೇರಿ ಒತ್ತಾಯಿಸುತ್ತೇವೆ ಎಂದರು.