ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಅಂಗವಿಕಲರ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರಗಳ ವೈಕಲ್ಯತೆಯನ್ನು ಹೊಂದಿರುವವರು, ಅಂಗವೈಕಲ್ಯತೆಯನ್ನು ಹೊಂದಿರುವವರು, ದೃಷ್ಟಿ ಹೀನರಾಗಿರುವವರು, ಬುದ್ಧಿ ಮಾಂಧ್ಯತೆಯನ್ನು ಹೊಂದಿರುವ ಸಮಾಜದಲ್ಲಿ 21 ರೀತಿಯ ಅಂಗವೈಕಲ್ಯ ಉಳ್ಳವರನ್ನು ಸರ್ಕಾರ ಗುರುತಿಸಿದೆ. ಸರ್ಕಾರ ಇವರ ಅಭಿವೃದ್ಧಿಗಾಗಿ ಹಿಂದೆ ಇದ್ದ ಶೇ. 3 ರಷ್ಟು ಮೀಸಲಾತಿಯನ್ನು ಶೇ. 5ಕ್ಕೆ ಹೆಚ್ಚು ಮಾಡಿದೆ ಎಂದರು.
ಸ್ಥಳೀಯ ಸಂಸ್ಥೆಯಲ್ಲಿಯೂ ಶೇ.3 ರಷ್ಟು ಅನುದಾನ ಮೀಸಲಿರಿಸುತ್ತಿದ್ದುದ್ದನ್ನು ಇಂದು ಶೇ. 5ಕ್ಕೆ ಏರಿಸಿದೆ. ಇವುಗಳ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿಯೂ ದಿವ್ಯಾಂಗರು ಮುಂದೆ ಬರದೇ ಇರುವುದು ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸದುಪಯೋಗವಾಗುತ್ತಿಲ್ಲ ಎಂದು ಅವರು ತಿಳಿಸಿದರು.ದೇಹದಲ್ಲಿ ಯಾವುದೇ ಒಂದು ತೊಂದರೆ ಇದ್ದರೆ ಅದನ್ನೇ ಪ್ರಧಾನವಾಗಿ ಮಾಡಿಕೊಂಡು ಯಾವುದೇ ಕೆಲಸಕ್ಕೆಬಾರದವರು ಎಂದು ನಿರ್ಧರಿಸುವುದು ಸರಿಯಲ್ಲ. ಯಾವುದಾದರೂ ಚಟುವಟಿಕೆಯಲ್ಲಿ ಪಾಲ್ಗೊಂಡು ಸಮಾಜಕ್ಕೆ ತನ್ನಿಂದಲೂ ಕೊಡುಗೆ ನೀದಲು ಸಾಧ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಾಮಾಜಿಕ ದೃಷ್ಟಿಕೋನ ಹಾಗೂ ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಶೇಷಚೇತನರನ್ನು ನೋಡುತ್ತಾರೆ ಎಂದರು.
ಇದೇ ವೇಳೆ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ, ಗ್ರಾಮೀಣ ಪ್ರತಿಭಾವಂತ ಸಾಧಕರನ್ನು, ರೈತ ಮುಖಂಡರನ್ನು ಸನ್ಮಾನಿಸಲಾಯಿತು.