ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಾಲಾ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಹೊಸ ಬ್ಯಾಗ್‌ಗಳನ್ನು ಪಡೆದುಕೊಂಡ ಮಕ್ಕಳ ಮುಖದಲ್ಲಿ ಕಂಡ ಸಂತಸ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತು.ಈ ಸಂದರ್ಭದಲ್ಲಿ ಹಿರಿಯರಾದ ವಿ.ಕೆ.ಮರಕುಂಬಿ, ಫೌಂಡೇಶನ್ ಕಾರ್ಯದರ್ಶಿ ಸಂತೋಷ ಈ ಹಡಪದ, ಮಡಿವಾಳಪ್ಪ ದೂಳಪ್ಪನವರ, ನಾಗಪ್ಪ ಜಕಾತಿ, ರುದ್ರಪ್ಪ ಹೊಂಗಲ, ಬಸಲಿಂಗಯ್ಯ ಚಿಕ್ಕಮಠ, ಮಂಜುನಾಥ ಆದೆನ್ನವರ, ಮಲ್ಲೇಶ್ ಕುರಿ, ಈರಣ್ಣ ಆದೇನ್ನವರ, ಶಿಕ್ಷಕರಾದ ಅನೀಲ ರಾಜನ್ನವರ, ಪ್ರಧಾನ ಗುರುಗಳಾದ ಬೊಳಶೆಟ್ಟಿ, ಶಾಲಾ ಶಿಕ್ಷಕರು, ಪೋಷಕರು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮಕ್ಕಳ ಶಿಕ್ಷಣವೇ ರಾಷ್ಟ್ರದ ಭವಿಷ್ಯ. ಯಾವುದೇ ಮಗು ಸೌಲಭ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಇನ್ನೂ ಹಲವು ಸಮಾಜಮುಖಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.
-ಸುನೀಲ ಮರಕುಂಬಿ, ಅಧ್ಯಕ್ಷರು, ಮಾ ಭಾರತಿ ಸೇವಾ ಫೌಂಡೇಶನ್.