ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಬಮ್ಮನಜೋಗಿ ಗ್ರಾಮದ ಹನುಮಾನ ಮಂದಿರದಲ್ಲಿ ಬುಧವಾರ ನಡೆದ ಅಂಚೆ ಜನಸಂರ್ಪಕ ಅಭಿಯಾನದಲ್ಲಿ ಅವರು ಮಾತನಾಡಿದರು. ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರ ವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕ್‌ಗಳಂತೆ ಕೆಲಸ ಮಾಡುತ್ತಿದ್ದು ಇಲಾಖೆಯಡಿ ದೊರಯುವ ಪಿಎಲ್ಐ ಹಾಗೂ ಆರ್‌ಪಿಎಲ್ಐ, ಅಪಘಾತ ವಿಮೆ, ಆರ್.ಡಿ, ಸುಕನ್ಯ ಯೋಜನೆ, ಪಿಪಿಎಫ್, ಉಳಿತಾಯ ಖಾತೆ ಸಹಿತ ಇರುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಚೆ ಉಪ ಅಧೀಕ್ಷಕ ಬಿ.ಎಸ.ದಾಸರ, ಬಡವರ ಹಾಗೂ ಕೂಲಿ ಕಾರ್ಮಿಕರ ಅವಶ್ಯಕತೆಗಳು ಅರಿತುಕೊಂಡ ಅಂಚೆ ಇಲಾಖೆಯು ಜನರ ವಯಸ್ಸಿನ ಅನುಗುಣವಾಗಿ ಹಲವಾರು ಸೇವೆಗಳಾದ ಬ್ಯಾಂಕ್ ಸೇವೆ, ಆನ್ ಲೈನ್ ಮೊಬೈಲ್ ಬ್ಯಾಂಕಿಂಗ್, ಸಣ್ಣ ಉಳಿತಾಯ ಮತ್ತು ರೈತರಿಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆಗಳ ಮೂಲಕ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವ ಮೂಲಕ ಮನೆ ಬಾಗಿಲಿಗೆ ಅಂಚೆ ಸೇವೆಗಳು ನಮ್ಮ ಇಲಾಖೆ ತರುತ್ತಿದೆ ಎಂದು ಹೇಳಿದರು.ಗ್ರಾಮದ ಮುಖಂಡರಾದ ರಾಜಶೇಖರ ಕೊಣಸಿರಸಗಿ ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ ಜನಸ್ನೇಹಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತದೆ. ಸಿಬ್ಬಂದಿ ಸಹ ಅಷ್ಟೇ ವಿನಯತೆಯಿಂದ ಸಹಕಾರ ಸೇವೆ ನೀಡುತ್ತಾರೆ ಎಂದರು.