ಕನ್ನಡಪ್ರಭ ವಾರ್ತೆ ಸಾವಳಗಿ
ಅಂಬಾಭವಾನಿ ಜಾತ್ರಾ ಮಹೋತ್ಸವ 4ನೇ ದಿನ ಧರ್ಮಸಭೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಜಾತಿಗೆ ನೀಮಿತವಾಗದೆ ಎಲ್ಲ ಜಾತಿ ಜನಾಂಗದವರನ್ನು ಒಗ್ಗೂಡಿಸಿ ವಿಜೃಂಭಣೆಯಿಂದ ಅಂಬಾಭವಾನಿ ಜಾತ್ರೆ ನಡೆಸಿ ಎಂದು ಸಲಹೆ ನೀಡಿದರು.
ಜಾತಿ, ಭಾಷೆ, ವೇಷ-ಭೂಷಣಗಳಲ್ಲಿ ಬೇರೆ ಬೇರೆ ಇರಬಹುದು. ನಮ್ಮಲ್ಲಿರುವ ಚೈತನ್ಯ ರೂಪಿ ಪರಮಾತ್ಮ ಒಬ್ಬನೇ. ಬಿಡಿಬಿಡಿಯಾಗಿರುವ ಎಲ್ಲ ಜೀವಗಳಲ್ಲೂ ಇರುವ ಆತ್ಮದ ಒಟ್ಟು ರೂಪವೇ ಪರಮಾತ್ಮ ಎಂದೆನಿಸಿಕೊಳ್ಳುತ್ತದೆ. ಭಗವಂತನ ಸ್ವರೂಪಗಳು ಹಲವು ರೂಪಗಳಲ್ಲಿವೆ. ಆದರೆ ಪರಮಾತ್ಮ ಒಬ್ಬನೇ. ನಾವು ಯಾವ ರೂಪದಲ್ಲಿರುವ ಭಗವಂತನನ್ನು ಪೂಜಿಸಿದರು ಸಿಗುವ ಫಲ ಒಂದೇ ಆಗಿರುತ್ತದೆ. ಎಲ್ಲರಲ್ಲಿಯೂ ನಾವು ಭಗವಂತನನ್ನು ಕಾಣಬೇಕು. ನಾವೆಲ್ಲರೂ ಭಗಂತನ ಕುಟುಂಬದವರು. ನಾವು ಒಂದೇ ತಂದೆ-ತಾಯಿಯ ಮಕ್ಕಳು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಮಾಜದಲ್ಲಿ ಜಾತಿ, ಮೇಲು ಕೀಳು, ಭೇದವಿಲ್ಲದೆ ಕೆಲಸ ಮಾಡಬೇಕು. ಮಾನವತ್ವ ಚೌಕಟ್ಟಿನಲ್ಲಿ ಎಲ್ಲರೂ ಸಂಪ್ರದಾಯ ಆಚರಣೆಗಳಿಂದ ಬೇರೆಯವರಿಗೆ ನೋವಾಗಬಾರದು. ನಾವೆಲ್ಲರೂ ಸರ್ವ ಜನಾಂಗದ ಶಾಂತಿ ತೋಟ ಕಟ್ಟುವ ದಿಕ್ಕಿ ನಡೆಗೆ ನಡೆಯೋಣ ಎಂದು ಹೇಳಿದರು.
ಇದೇ ವೇಳೆ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮೋಹನ ಜಾಧವ ಮಾತನಾಡಿ, ಶಿವಾಜಿ ಮಹಾರಾಜರು ಧೀರ ಮತ್ತು ಪರಾಕ್ರಮಿಯಾಗಿದ್ದರು. ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಶಿವಾಜಿ ಮಹಾರಾಜರಂತೆ ಇಂದಿನ ಯುವಕರು ಧೈರ್ಯ, ಸೈರ್ಯ, ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.ಇದೇ ವೇಳೆ ತಮ್ಮಣ್ಣಾಚಾರಿ ಜೋಶಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಎ.ಆರ್. ಸಿಂಧೆ, ಬಸವರಾಜ ಪರಮಗೊಂಡ, ಸುನೀಲ ಸಿಂಧೆ, ಉಮೇಶ ಜಾಧವ, ಗ್ರಾಪಂ ಅಧ್ಯಕ್ಷ ಸಂಜಯ ಮಾಳಿ, ಸುಶೀಲಕುಮಾರ ಬೆಳಗಲಿ, ಸುಭಾಷ ಪಾಟೋಳಿ ಸೇರಿದಂತೆ ಅನೇಕರು ಇದ್ದರು. ಕಾಶೀನಾಥ ಜಾಧವ ನಿರೂಪಿಸಿದರು, ಮಾಯಪ್ಪ ಬಾಪಕರ ವಂದಿಸಿದರು.
ಮೌನಾಚರಣೆ: ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜೀತ ಪವಾರ ಸೇರಿದಂತೆ ಐದು ಮಂದಿ ಸಾವಿಗೀಡಾದ ಸುದ್ದಿ ತಿಳಿದು ಜಾತ್ರೆಯ ಧರ್ಮ ಸಭೆಯಲ್ಲಿ ಮೌನಾಚರಣೆ ಮಾಡಿದರು.ನಾನು ಶಾಸಕನಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಕಷ್ಟು ಮನವಿ ಮಾಡಿಕೊಂಡು ಮರಾಠ ಸಮುದಾಯ ಭವನಕ್ಕೆ ಒಂದು ಕೋಟಿ ಅನುದಾನ ಮಂಜೂರು ಮಾಡಿಸಲಾಗಿತ್ತು. ಅನುದಾನ ಏನಾಗಿದೆ ಎಂಬುವುದನ್ನು ಪರಿಶೀಲಿಸಿ ಆ ಒಂದು ಕೋಟಿ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಸಮುದಾಯ ಭವನ ಪೂರ್ಣ ಮಾಡೋಣ.-ಆನಂದ ನ್ಯಾಮಗೌಡ ಮಾಜಿ ಶಾಸಕ ಜಮಖಂಡಿ