ರಾಜ್ಯ ಯುವ ಪ್ರಶಸ್ತಿ ಸ್ಥಾಪಿಸಿ, ಯುವಜನ ಮೇಳ ಆಯೋಜಿಸಿ

KannadaprabhaNewsNetwork |  
Published : Jan 30, 2026, 03:00 AM IST
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಸದ್ಭಾವನಾ ಪ್ರಶಸ್ತಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಯುವ ನೀತಿ ಜಾರಿ ಸೇರಿದಂತೆ ರಾಜ್ಯ ಯುವ ಪ್ರಶಸ್ತಿಗಳನ್ನು ಪುನಃ ಸ್ಥಾಪಿಸಿ, ತಾಲೂಕು, ಜಿಲ್ಲಾ ವಿಭಾಗ ಮಟ್ಟದಿಂದ ರಾಜ್ಯಮಟ್ಟದವರೆಗಿನ ಯುವಜನ ಮೇಳವನ್ನು ಪುನಃ ಆರಂಭಿಸುವಂತೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕರ್ನಾಟಕ ರಾಜ್ಯ ಯುವ ನೀತಿ ಜಾರಿ ಸೇರಿದಂತೆ ರಾಜ್ಯ ಯುವ ಪ್ರಶಸ್ತಿಗಳನ್ನು ಪುನಃ ಸ್ಥಾಪಿಸಿ, ತಾಲೂಕು, ಜಿಲ್ಲಾ ವಿಭಾಗ ಮಟ್ಟದಿಂದ ರಾಜ್ಯಮಟ್ಟದವರೆಗಿನ ಯುವಜನ ಮೇಳವನ್ನು ಪುನಃ ಆರಂಭಿಸುವಂತೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕಳೆದ 25 ವರ್ಷಗಳಿಂದ ರಾಜ್ಯದಾದ್ಯಂತ ಯುವ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡು ರಾಜ್ಯದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಿರಂತರ ಮಾಡುತ್ತಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲೆ ಸತತವಾಗಿ ಯುವಜನರ ಕುರಿತು ಬೇಡಿಕೆ, ಮನವಿ, ಒತ್ತಾಯದ ಮೂಲಕ ಹಲವಾರು ಯೋಜನೆಗಳನ್ನು ಉಳಿಸಿಕೊಂಡಿದೆ. ಆದರೆ ಹಿಂದಿನ ಬಿಜೆಪಿ ಹಾಗೂ ಈಗಿನ ಸರ್ಕಾರ ಎಲ್ಲಾ ಯುವ ಸಂಘಗಳನ್ನು ರದ್ದುಗೊಳಿಸುವ ಮೂಲಕ ಯುವ ಜನರನ್ನು ಮತ್ತು ಅವರ ಸಾಧನೆಗಳನ್ನು ಮೂಲೆಗುಂಪು ಮಾಡಿದೆ. ಅಲ್ಲದೇ ಯುವ ಚಿಂತಕರಿಗೆ ಸಿಗಬೇಕಾದ ಸ್ಥಾನಮಾನ ನೀಡದೇ ಅಪಮಾನಿಸಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಸದ್ಯ ನಮ್ಮ ಒಕ್ಕೂಟ ಹಲವು ಕಾರ್ಯಕ್ರಮ ಆಯೋಜಿಸಿ ಪ್ರತಿ ಜಿಲ್ಲೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವಾರು ಯೋಜನೆಗಳನ್ನು ಸಂಘಟನೆ ರೂಪಿಸಿದೆ. ಸರ್ಕಾರ ಸಂಘಟನೆಗೆ ಸ್ಪಂದಿಸಿ ಆರ್ಥಿಕ ಸಹಾಯ ಜತೆಗೆ ಕರ್ನಾಟಕ ರಾಜ್ಯ ಯುವ ನೀತಿ ಜಾರಿಗೊಳಿಸುವ ಮೂಲಕ ಕ್ರೀಡೆಯ ಜೊತೆಗೆ ಯುವಜನರ ಸಬಲೀಕರಣವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಮಾತನಾಡಿ, ಸದ್ಭಾವನಾ ಪ್ರಶಸ್ತಿ ಸಮಾರಂಭ ಜತೆಗೆ ಯುಜನ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾಮಿ ವಿವೇಕಾನಂದ ಭವ್ಯ ಮೆರವಣಿಗೆ ನಡೆಸಲಾಗುವುದು. ವಿವಿಧ ಜಾನಪದ, ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಲಿವೆ. ಕಾರಣ ತಾಲೂಕಿನ ಯುವ ಮಿತ್ರರು ಗಣ್ಯರು, ಮಹಿಳಾ ಸಾಧಕರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಶ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಚಂದ್ರು ಕರೇಕಲ್ಲ, ಅಪ್ಪುಗೌಡ ಪಾಟೀಲ, ಬಿ.ಎಲ್ ಬಿರಾದಾರ, ಸುಚೀತ ಚಳಿಗೇರಿ, ಮಹ್ಮದರಫೀಕ ಶಿರೋಳ, ಶಿವು ದಡ್ಡಿ, ದೀಪಾ ರತ್ನಶ್ರೀ, ಶಿಲ್ಪಾ ಚಲವಾದಿ, ರೂಪಾ ಹೊಸಮನಿ, ಸಂಗನಗೌಡ ಪಾಟೀಲ, ಶಾಂತು ನಾಯಕಮಕ್ಕಳ, ರಾಜು ನಾಯ್ಕೋಡಿ, ವಿರೇಶ ಗುರುಮಠ, ಕೃಷ್ಣಾ ಕುಂಬಾರ ಸೇರಿದಂತೆ ಹಲವರಿದ್ದರು.

ವಿಜಯಪುರ ಜಿಲ್ಲಾ ಹಾಗೂ ಮುದ್ದೇಬಿಹಾಳ ತಾಲೂಕು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಘಟಕ ಹಾಗೂ ಸಾಧನಾ ಮಹಿಳಾ ಒಕ್ಕೂಟಗಳ ಆಶ್ರಯದಲ್ಲಿ ಜ.31ರಂದು ಸಂಜೆ ವಿಬಿಸಿ ಹೈಸ್ಕೂಲ್‌ನ ಸಿದ್ದೇಶ್ವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರವರ 163ನೇ ಜಯಂತ್ಯುತ್ಸವ ಹಾಗೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಷ್ಟ್ರೀಯ ಯುವ ವೈಭವ, ವಿವೇಖ ಯುವ ಚೈತನ್ಯ ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಗೌರವಿಸಲು ತಿರ್ಮಾನಿಸಿದೆ.- ಡಾ.ಎಸ್.ಬಾಲಾಜಿ, ರಾಜ್ಯಾಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!