ಮುಧೋಳ: ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 8.09 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಕನ್ನಡ ಪ್ರಭವಾರ್ತೆ ಮುಧೋಳ
ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು ₹8.09 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.ಮಹಾಲಿಂಗಪುರ ಕೆಂಗೇರಿ ದಡ್ಡಿ ನಿವಾಸಿ ದುರ್ಗಪ್ಪ ಫಕೀರಪ್ಪ ವಾಲ್ಮೀಕಿ (26), ಜಮಖಂಡಿ ನಿವಾಸಿ ರಾಮಾಚಾರಿ ಯಲ್ಲಪ್ಪ ಗಡ್ಡಿ (40) ಬಂಧಿತರು. ಮುಧೋಳ ನಗರದ ಬಸ್ ನಿಲ್ದಾಣ ಸಮಿಪದ ಬಸವೇಶ್ವರ ವೃತ್ತದ ಬಳಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರುವುದನ್ನು ಗಮನಿಸಿದ ಪೊಲೀಸರು ಅವರನ್ನು ವಿಚಾರಿಸಿದಾಗ, ತಡವರಿಸುತ್ತ ಸಮರ್ಪಕ ಉತ್ತರ ನೀಡದಿದ್ದಾಗ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ರಾತ್ರಿ ವೇಳೆ ಬೀಗ ಹಾಕಿದ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 50 ಗ್ರಾಂ ಚಿನ್ನದ ಆಭರಣಗಳು (ಮೌಲ್ಯ₹7,70,000) ಹಾಗೂ 130 ಗ್ರಾಂ ಬೆಳ್ಳಿಯ ಆಭರಣ (ಮೌಲ್ಯ ₹39,000) ಸೇರಿ ಒಟ್ಟು 8.9 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಎಸ್ಪಿ ಹಾಗೂ ಜಮಖಂಡಿ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುಧೋಳ ಸಿಪಿಐ ಎಂ.ಎನ್. ಶಿರಹಟ್ಟಿ, ಪಿಎಸ್‌ಐ ಅಜಿತಕುಮಾರ ಹೊಸಮನಿ, ಪಿಎಸ್‌ಐ ಪಿ.ಎಸ್. ಮರನಾಳ ಹಾಗೂ ಸಿಬ್ಬಂದಿಯಾದ ಆರ್.ಬಿ. ಕಟಗೇರಿ, ಬಿ.ಡಿ. ಕುರಿ, ಎಚ್.ಜಿ. ಮಾದರ, ಎಂ.ಬಿ. ದಳವಾಯಿ ಮತ್ತು ಎಂ.ಎಲ್. ಒಡೆಯರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಶ್ಲಾಘಿಸಿರುವ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರು ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.