ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ಯಶಸ್ವಿನಿ ಆಸ್ಪತ್ರೆಯಲ್ಲಿ ಅಥಣಿ ರೋಟರಿ ಸಂಸ್ಥೆ ಹಾಗೂ ಬೆಳಗಾವಿಯ ವೇಣುಗ್ರಾಮ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಿವಿ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಬಡ ರೋಗಿಗಳಿಗೆ ಈ ಡಯಾಲಿಸಿಸ್ ಕೇಂದ್ರದ ಸೌಲಭ್ಯ ದೊರಕಲಿದೆ, ಜಪಾನ್ ತಂತ್ರಜ್ಞಾನದ ಯಂತ್ರವನ್ನು ಇಲ್ಲಿ ಅಳವಡಿಸಲಾಗುವುದು ಎಂದರು.ನಮ್ಮ ಬದುಕಿಗೆ ಪ್ರತಿಯೊಂದು ಅಂಗಗಳು ಅವಶ್ಯಕತೆ. ಕಿವಿಗಳ ದೋಷ ಹೊಂದಿದವರಿಗೆ ಶ್ರವಣ ಯಂತ್ರಗಳು ವರದಾನವಾಗಿದ್ದು, ತಜ್ಞ ವೈದ್ಯರ ಸಲಹೆಯಂತೆ ಈ ಸಾಧನ ಯಂತ್ರಗಳನ್ನು ವಿತರಿಸಲಾಗುತ್ತದೆ. ಶಿಬಿರಕ್ಕೆ ಬಂದ ಎಲ್ಲ ಫಲಾನುಭವಿಗಳಿಗೆ ಯಂತ್ರ ವಿತರಿಸಲಾಗುವುದಿಲ್ಲ. ನಿಜವಾದ ಬಡವರಿಗೆ ಮತ್ತು ತಜ್ಞರ ಸಲಹೆಯಂತೆ ಅಗತ್ಯವಿರುವವರಿಗೆ ಮಾತ್ರ ಯಂತ್ರಗಳನ್ನು ವಿತರಿಸಲಾಗುವುದು. ಕನಿಷ್ಠ ₹30 ಸಾವಿರದಿಂದ ₹1.80 ಲಕ್ಷ ಮೌಲ್ಯದ ರೋಟರಿ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತಿದೆ. ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಯಶಸ್ವಿನಿ ಆಸ್ಪತ್ರೆಯ ಕಿವಿ ಮೂಗು ಮತ್ತು ಗಂಟಲು ತಜ್ಞ ಡಾ.ಬಸವರಾಜ ಪಾಟೀಲ ಮಾತನಾಡಿ, ದೈಹಿಕ ವೈಕಲ್ಯಗಳ ಪೈಕಿ ಹೆಚ್ಚು ಗಂಭೀರವಾಗಿರುವ ಸಮಸ್ಯೆ ಎಂದರೇ ಮಾತು ಬಾರದೆ ಇರುವುದು, ಕಿವಿ ಕೇಳಿಸದಿರುವುದು. ದೈಹಿಕ ಅಸಮರ್ಥತೆ ಇರುವವರಿಗೆ, ಚಿಕ್ಕ ಮಕ್ಕಳಿಗೆ ಬಹಳಷ್ಟು ಸಮಸ್ಯೆ ಬರುವುದರಿಂದ ಬೇಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಗತ್ಯವಿರುವ ಸಾಧನ ಯಂತ್ರಗಳನ್ನ ಬಳಸಿಕೊಂಡು ಶ್ರವಣದೋಷ ಸಮಸ್ಯೆಯಿಂದ ಮುಕ್ತರಾಗಬೇಕೆಂದು ಸಲಹೆ ನೀಡಿದರು. ಬೆಳಗಾವಿಯಿಂದ ಆಗಮಿಸಿದ್ದ ರೋಟರಿ ಕ್ಲಬ್ ವೇಣುಗ್ರಾಮದ ಅಧ್ಯಕ್ಷ ಶಶಿಕಾಂತ ನಾಯಿಕ, ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ ರೋಟರಿ ಸಂಸ್ಥೆಯ ಸಾಮಾಜಿಕ ಮತ್ತು ಆರೋಗ್ಯ ಸೇವೆಗಳ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಶೇಖರ ಕೋಲಾರ, ಸಂತೋಷ್ ಬೊಮ್ಮಣ್ಣವರ, ಮಹಾದೇವ ಗಿಡ್ಡಳ್ಳಿ ಗಿದ್ದೋಳ್ಳಿ, ಲೋಕೇಶ್ ಹೊಂಗಲ, ಸೋಮನಾಥ ಕುಡಚಿಕರ, ಅರವಿಂದ ಕಡಬಡಿ, ಕಿಶೋರ್ ಜಗದಾಳಿ, ಬಂಕಥ ಪವಾರ, ಚಂದ್ರಕಾಂತ ರಾಜಮಾನೆ, ಪ್ರಭಾಕರ ಕೋಲಾರ, ಶ್ರೀಕಾಂತ ಅಥಣಿ, ಅರುಣ್ ಎಲಗುದ್ರಿ, ಡಾ. ಆನಂದ ಕುಲಕರ್ಣಿ, ಅರುಣ ಸೌದಾಗರ, ಡಾ. ಆನಂದ ಗುಂಜಿಗಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 130 ಫಲಾನುಭವಿಗಳಿಗೆ ಶ್ರವಣ ಯಂತ್ರ ವಿತರಣೆ
ರೋಟರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕಿವಿ ತಪಾಸಣೆ ಹಾಗೂ ಶ್ರವಣದೋಷ ಯಂತ್ರಗಳ ವಿತರಣೆ ಶಿಬಿರದಲ್ಲಿ 200ಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಿದ್ದರು. ತಜ್ಞವೈದ್ಯರ ಸಲಹೆಯಂತೆ ಶ್ರವಣ ದೋಷ ತಪಾಸಣೆ ನಡೆಸಿ ಯಂತ್ರಗಳ ಅವಶ್ಯಕತೆ ಇರುವ 130 ಫಲಾನುಭವಿಗಳಿಗೆ ಶ್ರವಣ ಯಂತ್ರಗಳನ್ನು ವಿತರಿಸಲಾಯಿತು. ರೋಟರಿ ಸಂಸ್ಥೆಯ ಈ ಸಾಮಾಜಿಕ ಮತ್ತು ಆರೋಗ್ಯ ಸೇವೆಗೆ ಫಲಾನುಭವಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.