ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿದ್ದ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನುಭವ ಮಂಟಪದಲ್ಲಿ ಬಸವಾದಿ ಶಿವಶರಣರು ಕಂದಾಚಾರ, ಲಿಂಗ ಅಸಮಾನತೆ, ಅಂತರ್ಜಾತಿ ವಿವಾಹ, ದೇವರ ಪರಿಕಲ್ಪನೆ ಹೀಗೆ ಹತ್ತಾರು ನೂರಾರು ವಿಷಯಗಳನ್ನು ಚರ್ಚಿಸುತ್ತಿದ್ದರು. ಅಂತರ್ಜಾತಿ ವಿವಾಹ ಕ್ರಾಂತಿಗೆ ಕಾರಣವಾಯಿತು. ಶೋಷಣೆಯ ವಿರುದ್ಧ ಮೆಟ್ಟಿನಿಂತ ಶರಣರನ್ನು ಹತ್ಯೆ ಮಾಡಲಾಯಿತು. ತನ್ನ ಪ್ರಾಣವನ್ನು ಬಲಿಕೊಟ್ಟಾದರೂ ಸಮಸಮಾಜ ಅರ್ಥಾತ್ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ರಚಿಸಿದ ಅಮೂಲ್ಯ ವಚನಸಾಹಿತ್ಯ ಹಾಳಾಗಲು ಬಿಡಬಾರದೆಂಬ ಆಶಯದಿಂದ ಶತೃಗಳಿಂದ ಉಳಿಸುವ ಪ್ರಯತ್ನ ಮಾಡಿದ ಶರಣರಲ್ಲಿ ಮಾಚಿದೇವರು ಅಗ್ರಗಣ್ಯರು ಎಂದರು.
ಮಡಿವಾಳ ಮಾಚಿದೇವರ ಶರಣರ ಬಗ್ಗೆ ವಿಷಯಾವಲೋಕನ ಮಾಡಿದ ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಅನುಭವ ಮಂಟಪದ ಕಲ್ಯಾಣ ಪುರಕ್ಕೆ ವಿಜಯಪುರ ಜಿಲ್ಲೆಯಿಂದ ಮಡಿವಾಳ ಮಾಚಿದೇವರು ಆಗಮಿಸುತ್ತಾರೆ. ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದ ಕಠಿಣ ನಿಲುವಿನ, ಮೃದು ಮನದ, ಶಿವಶರಣರನ್ನು ಕಂಡರೆ ವಿನಯ ತೋರಿಸುತ್ತಿದ್ದ ಮಾಚಿದೇವರು ಸಮಾಜಕ್ಕೆ ಎಚ್ಚರ ಎನ್ನುವ ನೂರಾರು ವಚನಗಳನ್ನು ರಚಿಸಿದ್ದಾರೆ ಎಂದರು.ತಾನು ಮಡಿ ಮಾಡಿ ತಂದ ಬಟ್ಟೆಗಳನ್ನು ಮೈಗಳ್ಳರು, ಲೋಭಿಗಳು, ಪೋಲಿಗಳು ಮುಟ್ಟಬಾರದೆಂಬ ಧೀರೋದಾತ್ತ ನಿಲುವಿನವರಾಗಿದ್ದರು. ಮಹಾಗಣಾಚಾರಿ ಪ್ರವೃತ್ತಿಯವರು. ಶರಣರ ಕೆಲಸಕ್ಕೆ ಅಡ್ಡಿಪಡಿಸಿದವರನ್ನು ಸುಮ್ಮನೆ ಬಿಡುವ ಪ್ರವೃತ್ತಿಯವರಲ್ಲ ಮಾಚಿದೇವರು. ಹಾಗೆಯೇ ಮಾಚಿದೇವರು ಅರಸೊತ್ತಿಗೆಗೂ ಸವಾಲಾಗಿದ್ದರು. ಅರಸರು ಮೇಲಲ್ಲ, ಅಗಸತನ ಕೀಳಲ್ಲ ಎನ್ನುವಂತಹ ಶೋಷಣೆಯ ವಿರುದ್ಧ ಹೋರಾಟ ಮಾಡಿದರೆಂದು ತಿಳಿಸಿದರು.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರಾಮಪ್ಪ ಸೇರಿದಂತೆ ಪ್ರಕಾಶ್ ಎನ್., ನಿಂಗಪ್ಪ.ಎನ್, ರಂಗಪ್ಪ, ಜಯಣ್ಣ, ರುದ್ರಮುನಿಯಪ್ಪ, ಚೈತ್ರ, ಮಾಚಿದೇವ ಮಲಿಗೆಮ್ಮ ಮಹಿಳಾ ಸಂಘದ ಅಧ್ಯಕ್ಷೆ ರಂಗಮ್ಮ, ಕಾರ‍್ಯದರ್ಶಿ ಸುಲೋಚನಮ್ಮ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ. ನಿರಂಜನಮೂರ್ತಿ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಡಾ. ದೊಡ್ಡಮಲ್ಲಯ್ಯ, ಬಸವರಾಜ ಕಟ್ಟಿ, ವಕೀಲರಾದ ಎನ್.ಬಿ. ವಿಶ್ವನಾಥ್, ಪ್ರಾಚಾರ್ಯ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.