ನೆಲಮಂಗಲ: ಸಾರ್ವಜನಿಕರಿಂದ ಪಡೆದ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಸರ್ಕಾರ ಹಾಗೂ ಜನಸಾಮಾನ್ಯರ ನಡುವೆ ಅಧಿಕಾರಿಗಳು ಸೇತುವೆಯಂತೆ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಿಮಗೂ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು
ನೆಲಮಂಗಲ: ಸಾರ್ವಜನಿಕರಿಂದ ಪಡೆದ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಸರ್ಕಾರ ಹಾಗೂ ಜನಸಾಮಾನ್ಯರ ನಡುವೆ ಅಧಿಕಾರಿಗಳು ಸೇತುವೆಯಂತೆ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಿಮಗೂ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ನೆಲಮಂಗಲ ತಾಲೂಕು ಕಚೇರಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳನ್ನು ನಮ್ಮ ಅಧಿಕಾರಿಗಳ ವರ್ಗ ಜನರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲವೋ ಎಂದು ಪರಿಶೀಲಿಸಬೇಕು. ಕಳೆದ ವಾರದ ಪ್ರಜಾಸೇವಾ ಆಂದೋಲನದಿಂದ ಸಲ್ಲಿಸಿದ್ದ ಬಹುತೇಕ ಅರ್ಜಿಗಳು ಕಾನೂನು ಬದ್ಧವಾಗಿ ವಿಲೇವಾರಿಯಾಗಿವೆ. ಕ್ಷೇತ್ರದಲ್ಲಿ ಈ ಯೋಜನೆಗೂ ಮುನ್ನ ಜನಸ್ಪಂದನಾ ಸಭೆ ನಡೆಸಿ ಜನರ ಸಮಸ್ಯೆ ತಿಳಿದು ಪರಿಹಾರ ಒದಗಿಸಲಾಗಿದೆ ಎಂದರು.ಸಾರ್ವಜನಿಕರ ಸಮಸ್ಯೆ:
ಸಾರ್ವಜನಿಕರು ಖಾತೆ, ಇ-ಸ್ವತ್ತು, ಪಹಣಿ, ಪೌತಿಖಾತೆ, ಜಮೀನು ಸರ್ವೇ ಸೇರಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಮಾಡಿದರು.55 ಅರ್ಜಿ ಸ್ವೀಕಾರ:
ಕಳೆದ ವಾರದ ಸಭೆಯಲ್ಲಿ ಸ್ವೀಕರಿಸಿದ್ದ 100 ಅರ್ಜಿಗಳ ಪೈಕಿ ಶೇ.50ರಷ್ಟು ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ವಿಲೇವಾರಿ ಮಾಡಲಾಗಿದೆ. ಇಂದಿನ ಸಭೆಯಲ್ಲಿ 55 ಅರ್ಜಿಗಳು ಸ್ವೀಕೃತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾಹಿತಿ ನೀಡಿದರು.ಸಭೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ವಿಶೇಷ ತಹಸೀಲ್ದಾರ್ ಸಂಧ್ಯಾ, ತಾಪಂ ಇಒ ಡಾ.ಬಿಂದು, ಡಿವೈಎಸ್‍ಪಿ ಉಮಾರಾಣಿ, ಆರಕ್ಷಕ ನಿರೀಕ್ಷಕ ಭರತ್‍ಗೌಡ, ಶಿರಸ್ತೇದಾರ್ ಪುಷ್ಪಲತಾ, ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಅಧ್ಯಕ್ಷ ಎನ್.ಗಣೇಶ್ ಉಪಾಧ್ಯಕ್ಷ ಆನಂದ್, ಎನ್ ಪಿಎ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ವಾಸು, ಮುಖಂಡ ರವಿಕುಮಾರ್, ಗಂಗರಾಜು, ವಿಜಯ್ ಕುಮಾರ್. ಮನುಕುಮಾರ್ ಇತರರಿದ್ದರು.
ಪೋಟೋ 1 :ನೆಲಮಂಗಲ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಎನ್.ಶ್ರೀನಿವಾಸ್ ಜನರ ಅಹವಾಲು ಸ್ವೀಕರಿಸಿದರು.