ಮಾಚಿದೇವರ ವಚನಗಳು ಇಂದಿಗೂ ಆದರ್ಶಪ್ರಿಯ

KannadaprabhaNewsNetwork | Published : Feb 2, 2025 1:01 AM

ಸಾರಾಂಶ

ಹನೂರು ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಯುವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಕರ್ನಾಟಕದಲ್ಲಿ ಅನೇಕ ದಾರ್ಶನಿಕರು ಸಮಾಜದ ಉದ್ಧಾರಕ್ಕಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಬಣ್ಣಿಸಿದರು.

ಹನೂರು ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಸಮಾಜ ಸುಧಾರಣಾ ಚಳವಳಿಯ ಪ್ರಮುಖರಲ್ಲಿ ಮಡಿವಾಳ ಮಾಚಿದೇವರು ಸಹ ಒಬ್ಬರಾಗಿದ್ದಾರೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಪ್ರತಿನಿಧಿಯಾಗಿ ಸ್ಥಾನ ಪಡೆದಿದ್ದರು. ಸಮಾಜ ಸುಧಾರಣೆ ನಿಟ್ಟಿನಲ್ಲಿ ಅವರು ರಚಿಸಿದ ವಚನಗಳು ಇಂದಿಗೂ ಆದರ್ಶಪ್ರಿಯ ಮತ್ತು ಅನುಕರಣೀಯವಾಗಿವೆ. ಕಾಯಕ ತತ್ವದ ಜೊತೆಗೆ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಅವರ ನಿಲುವಾಗಿತ್ತು ಎಂದು ತಿಳಿಸಿದರು.

ಸಮುದಾಯದ ಮುಖಂಡರಾದ ವಿಜಯಕುಮಾರ್ ಮಾತನಾಡಿ, ಮಡಿವಾಳ ಸಮುದಾಯ ತುಂಬಾ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ. ನಮ್ಮ ಸಮುದಾಯ ಶೋಷಿತ ಸಮುದಾಯವಾಗಿದ್ದು, ಸರ್ಕಾರದಿಂದ ತುಂಬಾ ಕಡೆಗಣನೆಗೆ ಒಳಾಗಾಗಿದೆ. ಈ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಬೇಕು ಎಂಬುದು ಒಂದು ದಶಕದ ಹೋರಾಟವಾಗಿದೆ. ಸರ್ಕಾರವು ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ದೈಹಿಕ ಶಿಕ್ಷಣ ಸಂಯೋಜಕ ಮಹಾದೇವ್, ಪ್ರಭಾರ ರಾಜಸ್ವ ನಿರೀಕ್ಷಕ ಶೇಷಣ್ಣ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಹಿರಿಯ ಮುಖಂಡ ಮಾದೇಶಯ್ಯ, ಬಿ.ಆರ್.ಮಹದೇಶ್ ಹಾಗೂ ಪುಟ್ಟಸ್ವಾಮಿ ಮುರುಗ, ಮಾದೇಶ್, ಚಿಕ್ಕಮಾದು, ಜಗದೀಶ್, ನಾಗೇಂದ್ರ, ಸಿದ್ದ ಇನ್ನಿತರ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭಾಗಿಯಾಗಿದ್ದರು.

Share this article