ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಅಶೋಕ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ವೀರ ಮಡಿವಾಳ ಮಾಚಿದೇವ ಸಂಘದ ಸಹಯೋಗದೊಂದಿಗೆ ಭಾನುವಾರ ನಡೆದ ವೀರ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ವಚನ ಚಳುವಳಿಯಲ್ಲಿ ಬಸವಣ್ಣ ಹಾಗೂ ಇತರ ಶರಣರೊಂದಿಗೆ ಮಾಚಿದೇವರು ಮುಂಚೂಣಿಯಲ್ಲಿದ್ದರು. ಸಿದ್ದರಾಮಯ್ಯನವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಚಿದೇವರ ಜಯಂತಿಯನ್ನು ಆಚರಣೆಗೆ ತಂದರು. ಇಂದು ಸಮುದಾಯದ ನಿಗಮವು ಕೂಡ ಆಗಿದ್ದು, ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದೆ. ಮಡಿವಾಳ ಸಮುದಾಯದ ಅನೇಕ ಬೇಡಿಕೆಗಳನ್ನು ಮೇ-ಜೂನ್ ತಿಂಗಳಲ್ಲಿ ಸಿಗುವ ಅನುದಾನದಲ್ಲಿ ಬೇಡಿಕೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಯುವಜನತೆ ಮಹಾತ್ಮರ ವಚನಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕಿದೆ. ವಚನಗಳ ಓದಿನಿಂದ ಪರಿವರ್ತನೆಗೊಳ್ಳಬಹುದು. ದೇಶದಲ್ಲಿರುವ ಯಾವುದೇ ವೃತ್ತಿಯೂ ಮೇಲು ಕೀಳು ಎಂಬುದಿಲ್ಲ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ. ಸಮಸಮಾಜದ ಕಲ್ಪನೆಯನ್ನು ಮಡಿವಾಳ ಮಾಚಿದೇವರು ಕೊಟ್ಟಿದ್ದಾರೆ. ವೃತ್ತಿಯಲ್ಲಿ ಕೈಲಾಸವನ್ನ ಕಾಣಬೇಕೆಂದು ಮಾರ್ಮಿಕವಾಗಿ ಹೇಳಿದ್ದಾರೆ. ಇವತ್ತಿನ ಪ್ರಸ್ತುತ ಸಮಾಜಕ್ಕೆ ಮಹನೀಯರ ವಚನಾದರ್ಶನಗಳು ಅವಶ್ಯಕತೆಯಿದೆ. ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಮಕ್ಕಳ ಬುದ್ಧಿಯನ್ನ ಆಳುತ್ತಿವೆ. ಬುದ್ಧಿಯನ್ನ ಛಿದ್ರಗೊಳಿಸುತ್ತಿವೆ. ಆತ್ಮವಿಶ್ವಾಸದಿಂದ ಬದುಕುವುದು ಹೇಗೆ ಎಂದು ಹೇಳಿಕೊಟ್ಟು ಮಕ್ಕಳನ್ನ ಗಟ್ಟಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ ಮಡಿವಾಳ ಸಮುದಾಯದ ನಿವೃತ್ತ ನೌಕರರಾದ ಅಣ್ಣಯ್ಯ, ಟಿ.ಜಯಣ್ಣ, ಆರ್.ಜಯಣ್ಣ, ಚಂದ್ರಪ್ಪ, ಲೋಕೇಶಪ್ಪ, ಮಂಜುನಾಥ್ ಮತ್ತು ತಿಪ್ಪೇಸ್ವಾಮಿ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಲೋಕೇಶ್ವರಪ್ಪ, ಕಾರ್ಯದರ್ಶಿ ರಮೇಶ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಕುರುಬ ಸಮಾಜದ ಅಧ್ಯಕ್ಷ ನಾಗೇನಹಳ್ಳಿ ಮಂಜುನಾಥ್, ರಾಜ್ಯ ವೀರ ಮಡಿವಾಳ ಮಾಚಿದೇವ ಯುವಸೇನಾ ಪಡೆಯ ಕಾರ್ಯಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್, ಮುಖಂಡರಾದ ಗೋಪಿಕೃಷ್ಣ, ರಾಮ ಕೃಷ್ಣಪ್ಪ, ಹೆಚ್.ನಾಗರಾಜಯ್ಯ, ಮಹಮ್ಮದ್ ಇಸ್ಮಾಯಿಲ್, ಶಿವರುದ್ರಪ್ಪ, ರಾಮಣ್ಣ ಮತ್ತು ಮಲ್ಲೇಶಪ್ಪ ಸೇರಿದಂತೆ ಸಮುದಾಯದ ಬಂಧುಗಳಿದ್ದರು.