ಅನಿಷ್ಠಗಳ ವಿರುದ್ಧ ಹೋರಾಡಿದ ಮಾಚಿದೇವರು

KannadaprabhaNewsNetwork |  
Published : Feb 03, 2024, 01:47 AM IST
ವಿಜೆಪಿ ೦೧ವಿಜಯಪುರ ಪುರಸಭಾ ಆವರಣದಲ್ಲಿ  ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ  ಪುರಸಭಾ ಅಧ್ಯಕ್ಷರು ,ಸದಸ್ಯರು ಗಳು, ಮುಖ್ಯಾಧಿಕಾರಿ, ಸಿಬ್ಬಂದಿ, ಮಾಚಿದೇವರ ಅನುಯಾಯಿಗಳು ಊರಿನ ಪ್ರಮುಖರು | Kannada Prabha

ಸಾರಾಂಶ

ವಿಜಯಪುರ: ೧೨ನೇ ಶತಮಾನದಲ್ಲಿ ಸಾಮಾಜಿಕ ಅನಿಷ್ಠಗಳ ವಿರುದ್ಧ ಕ್ರಾಂತಿ ಮಾಡಿದ ಶರಣರಲ್ಲಿ ಮಡಿವಾಳ ಮಾಚಿದೇವರನ್ನು ವೀರಭದ್ರ ಸ್ವಾಮಿ ಅವತಾರ ಎನ್ನುತ್ತಿದ್ದರು ಎಂದು ಪುರಸಭಾ ಅಧ್ಯಕ್ಷೆ ವಿಮಲಾಬಸವರಾಜು ಹೇಳಿದರು.

ವಿಜಯಪುರ: ೧೨ನೇ ಶತಮಾನದಲ್ಲಿ ಸಾಮಾಜಿಕ ಅನಿಷ್ಠಗಳ ವಿರುದ್ಧ ಕ್ರಾಂತಿ ಮಾಡಿದ ಶರಣರಲ್ಲಿ ಮಡಿವಾಳ ಮಾಚಿದೇವರನ್ನು ವೀರಭದ್ರ ಸ್ವಾಮಿ ಅವತಾರ ಎನ್ನುತ್ತಿದ್ದರು ಎಂದು ಪುರಸಭಾ ಅಧ್ಯಕ್ಷೆ ವಿಮಲಾಬಸವರಾಜು ಹೇಳಿದರು.

ಪುರಸಭಾ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತರಿಗೂ ಸಮಬಾಳು, ಸಮಪಾಲು ದೊರೆಯಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದರು.

ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತ ಕಾಣಿಕೆ ನೀಡಿದ್ದು, ೧೨ನೇ ಶತಮಾನದಲ್ಲಿ ಇಂತಹ ಶರಣರು, ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ, ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಾಚಿದೇವರು ೩೫೪ ವಚನಗಳನ್ನು ಬರೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ಕೇಶವಪ್ಪ, ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಸದಸ್ಯರಾದ ರಾಮು, ನಾರಾಯಣಸ್ವಾಮಿ, ಮಾಚಿದೇವರ ಅನುಯಾಯಿಗಳಾದ ಅಶ್ವಥ್, ಕೇಶವ, ರವಿ, ನಾರಾಯಣಪ್ಪ, ಕೃಷ್ಣಪ್ಪ, ಶೇಖರ್‌, ಜಣ್ಣ, ಪ್ರಕಾಶ್, ವೀರ ಮಡಿವಾಳ ಮಾಚಿದೇವರ ಯುವಕರ ಸಂಘ, ಮಡಿವಾಳ ಮಾಚಿದೇವರ ಲಾಂಡ್ರಿ ಸಂಘದ ಪದಾಧಿಕಾರಿಗಳು, ಪುರಸಭಾ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!