ಮೌಢ್ಯಗಳ ವಿರುದ್ಧ ಹೋರಾಡಿದ್ದ ಮಾಚಿದೇವರು: ತಹಸೀಲ್ದಾರ್‌ ಮಹೇಂದ್ರ

KannadaprabhaNewsNetwork |  
Published : Feb 02, 2024, 01:01 AM IST
ಪೊಟೋ೧ಸಿಪಿಟಿ೧: ನಗರದ ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚೀದೇವರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿನ ಮೌಢ್ಯವನ್ನು ಶುಚಿ ಮಾಡುವ ಕಾಯಕದಲ್ಲಿ ತೊಡಗಿದ್ದ ಅವರು, ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು.

ಚನ್ನಪಟ್ಟಣ: ಬಸವಣ್ಣನವರ ಸಮಕಾಲೀನ ಮಡಿವಾಳ ಮಾಚಿದೇವರು ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ತಮ್ಮ ವಚನಗಳ ಮೂಲಕ ಅರಿವು ಮೂಡಿಸಿದ್ದರು ಎಂದು ತಹಸೀಲ್ದಾರ್‌ ಮಹೇಂದ್ರ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಸಮಾಜದಲ್ಲಿನ ಲಿಂಗತಾರತಮ್ಯ ಹೋಗಲಾಡಿಸಲು ಶ್ರಮಿಸಿದಂತೆ ಮಾಚೀದೇವರು ಸಹ ಅಸಮಾನತೆಯ ಹೋಗಲಾಡಿಸಲು ಶ್ರಮಿಸಿದರು.

೧೨ನೇ ಶತಮಾನದಲ್ಲಿಯೇ ಸಮಾಜದಲ್ಲಿನ ದುರ್ಬಲರು, ಶೋಷಿತರು, ಶಿಕ್ಷಣ ವಂಚಿತರ ಬಗ್ಗೆ ತಮ್ಮ ವಚನಗಳಲ್ಲಿ ಹೇಳಿದರು. ಸಮಾಜದಲ್ಲಿನ ಮೌಢ್ಯವನ್ನು ಶುಚಿ ಮಾಡುವ ಕಾಯಕದಲ್ಲಿ ತೊಡಗಿದ್ದ ಅವರು, ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು. ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಡಿವಾಳ ಮಾಚಿದೇವರ ಕನಸನ್ನು ನನಸು ಮಾಡಲು ಸಮುದಾಯ ಸಂಘಟಿತವಾಗಬೇಕು. ಮಾಚೀದೇವರ ತತ್ವಾದರ್ಶಗಳನ್ನು ಪಾಲಿಸಿ, ಅವರ ಆಶಯದಂತೆ ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಪ್ರದೀಪ್, ಮುಖಂಡರಾದ ಸುನಿತಾ, ವಸಂತ,ನಾಗಮಣಿ ಇತರರಿದ್ದರು.(ಫೋಟೋ ಕ್ಯಾಫ್ಷನ್‌)

ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಮಹೇದ್ರ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಂಪ್‌ಗೆ ಸಿದ್ದು ಆರ್ಥಿಕ ಸಚಿವರಾಗಲಿ: ಎಚ್ಡಿಕೆ!
‘ನರೇಗಾ’ ಬದಲಾವಣೆ ವಿರುದ್ಧ ಹೋರಾಟ : ಪೈಲಟ್‌