ಸಮಾಜದ ಕೊಳಕು ತಿದ್ದಿದ ಮಾಚಿದೇವರು

KannadaprabhaNewsNetwork |  
Published : Feb 02, 2025, 01:02 AM IST
1ಕೆಬಿಪಿಟಿ.1.ಬಂಗಾರಪೇಟೆ ತಾಲೂಕು ಕಚೇಋಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. | Kannada Prabha

ಸಾರಾಂಶ

ಪರಿಶುದ್ಧ ಕಾಯಕಕ್ಕೆ ಪ್ರಸಿದ್ಧರಾಗಿದ್ದ ಮಾಚಿದೇವರು ದೀನದಲಿತರ ಮಾರ್ಗದರ್ಶಕರಾಗಿದ್ದರು ಎಲ್ಲರನ್ನು ಸಮಾನತೆಯಿಂದ ಕಾಣುತ್ತಿದ್ದರು.ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು, ಮಾಚಿದೇವರು ಶರಣರ ಮಲಿನ ಬಟ್ಟೆಗಳನ್ನು ಮಾತ್ರ ಮಡಿ ಮಾಡಲಿಲ್ಲ ಶರಣರ ಅಂತರಂಗದ ಕೊಳೆಯನ್ನು ತೊಳೆದರು ಹಾಗೂ ತಮ್ಮ ವಚನಗಳ ಮೂಲಕ ಸಮಾಜದ ಕೊಳೆಯನ್ನು ಶುದ್ಧಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೧೨ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಮಹತ್ವದ ಕಾಲ. ಯುಗ ಈ ಕಾಲಮಾನದಲ್ಲಿ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜದ ಕೊಳಕನ್ನು ತಿದ್ದಲು ಮಾಡಿದ ಕಾಯಕ ಅನನ್ಯವಾದದ್ದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿ, ಮಾಚಿದೇವರು ನುಡಿದಂತೆ ನಡೆದು ತೋರಿಸಿದ ಮಹಾನುಭಾವಿ ಎಂದರು.

ದೀನದಲಿತರ ಮಾರ್ಗದರ್ಶಕಪರಿಶುದ್ಧ ಕಾಯಕಕ್ಕೆ ಪ್ರಸಿದ್ಧರಾಗಿದ್ದ ಮಾಚಿದೇವರು ದೀನದಲಿತರ ಮಾರ್ಗದರ್ಶಕರಾಗಿದ್ದರು ಎಲ್ಲರನ್ನು ಸಮಾನತೆಯಿಂದ ಕಾಣುತ್ತಿದ್ದರು.ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು, ಮಾಚಿದೇವರು ಶರಣರ ಮಲಿನ ಬಟ್ಟೆಗಳನ್ನು ಮಾತ್ರ ಮಡಿ ಮಾಡಲಿಲ್ಲ ಶರಣರ ಅಂತರಂಗದ ಕೊಳೆಯನ್ನು ತೊಳೆದರು ಹಾಗೂ ತಮ್ಮ ವಚನಗಳ ಮೂಲಕ ಸಮಾಜದ ಕೊಳೆಯನ್ನು ಶುದ್ಧಿ ಮಾಡಿದರು ಎಂದರು.

ಇಂತಹ ಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕಿತ್ತು, ಆದರೆ ಹಿಂದೆ ಇದ್ದ ತಹಸೀಲ್ದಾರ್ ಸಮಾಜದ ಮುಖಂಡರ ಜೊತೆ ಸ್ಪಂದಿಸದ ಕಾರಣ ಸರಳವಾಗಿ ಆಚರಣೆ ಮಾಡುವಂತಾಗಿದೆ, ಮುಂದೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು. ಶೈಕ್ಷಣಿಕ ಅಭಿವೃದ್ಧಿ ಅಗತ್ಯ

ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ ನಮ್ಮ ಸಮಾಜ ಇನ್ನೂ ಎಲ್ಲಾ ರಂಗದಲ್ಲಿಯೂ ಹಿಂದುಳಿದಿದೆ. ಸರ್ಕಾರ ಮಡಿವಾಳ ಸಮಾಜದ ಅಭಿವೃದ್ಧಿಗೆ ಒತ್ತು ನೀಡಬೇಕು. ಸಮಾಜದವರು ಶೈಕ್ಷಣಿಕವಾಗಿ ಮುಂದೆ ಬಂದು ಸರ್ಕಾರದ ಉನ್ನತ ಹುದ್ದೆ ಸೇರುವಂತಾಗಬೇಕು ಎಂದರು.

ಪುರಸಭೆ ಅಧ್ಯಕ್ಷ ಗೋವಿಂದ,ಸಂಘದ ಗೌರವ ಅಧ್ಯಕ್ಷ ಎಸ್.ಬಿ. ವೆಂಕಟೇಶಪ್ಪ,ಉಪಾಧ್ಯಕ್ಷ ಬೇಕರಿ ಶ್ರೀನಿವಾಸ್,ಕೆಇಬಿ ವೆಂಕಟೇಶಪ್ಪ, ಮುರಳಿ ಬಲಮಂದೆ ಶ್ರೀನಿವಾಸ್, ಮಂಜುನಾಥ್, ಸತೀಶ್, ಶ್ಯಾಂಮೂರ್ತಿ, ಕೃಷ್ಣಪ್ಪ, ನಂಜುಂಡಪ್ಪ, ಗ್ರೇಡ್ ೨ ತಹಸೀಲ್ದಾರ್ ಗಾಯಿತ್ರಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ