ಯಂತ್ರಗಳಿಂದ ಕೂಲಿಕಾರರ ನರೇಗಾ ಕೆಲಸಕ್ಕೆ ಖೋತಾ: ಪುಟ್ಟಮಾದು

KannadaprabhaNewsNetwork |  
Published : Jun 21, 2025, 12:49 AM IST
೨೦ಕೆಎಂಎನ್‌ಡಿ-೬ಮಂಡ್ಯದ ಕೆವಿಎಸ್ ಭವನದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಡೆದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ ಉದ್ಘಾಟಿಸಿ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿಯನ್ನೇ ನಿರ್ಲಕ್ಷ್ಯ ಮಾಡಿದ್ದಾರೆ, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರ ಸೇರಿದಂತೆ ಬೇರೆ ನೌಕರರನ್ನು ಸರಿಯಾಗಿ ಅವರ ಸಮಸ್ಯೆ ಬಗೆಹರಿಸುತ್ತಿಲ್ಲ. ನಂತರ ಕೂಲಿ ಕ್ಷೇತ್ರವನ್ನು ನೋಡಿದರೆ ಯಾರೂ ಬರುತ್ತಿಲ್ಲ ಕೂಲಿಗೆ ಎನ್ನುವ ಆರೋಪವಿದೆ. ಬೆಂಬಲ ಬೆಲೆ ನೀಡದೆ ಕನಿಷ್ಠ ಕೂಲಿಯನ್ನೂ ನೀಡದೇ ಈ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಯಂತ್ರಗಳು ಬಂದ ದಿಸೆಯಿಂದ ಕೂಲಿಗಾರರಿಗೆ ವಾರ್ಷಿಕವಾಗಿ ಕಡಿಮೆ ದಿನಗಳು ಮಾತ್ರ ಉದ್ಯೋಗ ಖಾತ್ರಿ ಕೆಲಸ ಸಿಗುತ್ತಿವೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಆತಂಕ ವ್ಯಕ್ತಪಡಿಸಿದರು.

ನರಗದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಶುಕ್ರವಾರ ನಡೆದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರವನ್ನು ನೋಡಿದರೆ ಬೆಳೆಗೆ ಔಷಧ ಸಿಂಪಡಿಸಲು ಡ್ರೋನ್ ಬಳಸಲಾಗುತ್ತಿದೆ. ಭತ್ತ, ರಾಗಿ, ಜೋಳ ಕೊಯ್ಲು ಮಾಡಲು ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯಂತ್ರಗಳ ನಿರ್ವಹಣೆ, ಬಾಡಿಗೆ ಎಲ್ಲವನ್ನೂ ಲೆಕ್ಕ ಹಾಕಿದರೆ ಹಣ ಹೆಚ್ಚಿದೆ, ಆದರೆ ಕೃಷಿಯಲ್ಲಿ ಕೂಲಿಗಾರರಿಗೆ ಖರ್ಚು ಕಡಿಮೆ ಇದೆ ಎಂಬುದು ಗೊತ್ತಿದ್ದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿಯನ್ನೇ ನಿರ್ಲಕ್ಷ್ಯ ಮಾಡಿದ್ದಾರೆ, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರ ಸೇರಿದಂತೆ ಬೇರೆ ನೌಕರರನ್ನು ಸರಿಯಾಗಿ ಅವರ ಸಮಸ್ಯೆ ಬಗೆಹರಿಸುತ್ತಿಲ್ಲ. ನಂತರ ಕೂಲಿ ಕ್ಷೇತ್ರವನ್ನು ನೋಡಿದರೆ ಯಾರೂ ಬರುತ್ತಿಲ್ಲ ಕೂಲಿಗೆ ಎನ್ನುವ ಆರೋಪವಿದೆ. ಬೆಂಬಲ ಬೆಲೆ ನೀಡದೆ ಕನಿಷ್ಠ ಕೂಲಿಯನ್ನೂ ನೀಡದೇ ಈ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು.

ಕನಿಷ್ಠ ೪೭೮ ರು. ಕೊಡಬೇಕೆಂದು ಹೇಳಲಾಗುತ್ತಿದೆ. ಆದರೆ, ಪ್ರಸ್ತುತ ಕಾರ್ಮಿಕ ಕಾನೂನು ಆಧಾರದಲ್ಲಿ ೬೦೦ ರು.ಗಿಂತ ಕಡಿಮೆ ಕೂಲಿ ಮಹಿಳೆಯರಿಗೆ ಇದರಲ್ಲಿ ೫೦೦ ರು. ಸಿಗುತ್ತಿದೆ. ಉದ್ಯೋಗ ಖಾತ್ರಿ ಬರದೇ ಹೋಗಿದ್ದರೂ ಈ ಹಣವೂ ಸಹ ಸಿಗುತ್ತಿರಲಿಲ್ಲ. ೨೦೦೦ ದಿಂದೀಚೆಗೆ ರೈತ ಆತ್ಮಹತ್ಯೆಗಳು ಕಂಡುಬಂದವು. ಆನಂತರ ೨೦೧೪ರಲ್ಲಿ ೬೭೧೯ ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆ ಮಾಡಲಾಯಿತು ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಕೃಷಿ ಕೂಲಿಕಾರರು ಮಾತನಾಡುವುದನ್ನಾದರೂ ಕಲಿಬೇಕು. ಏಕೆಂದರೆ ಈ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಕೃಷಿ ಕೂಲಿಕಾರರು ಅಭಿವೃದ್ಧಿ ಹೊಂದಿಲ್ಲ ಎನ್ನುವುದಕ್ಕಿಂತ ಎಲ್ಲಿ ಸಮಸ್ಯೆ ಆಗಿದೆ ಎನ್ನುವುದನ್ನು ಕಂಡುಕೊಂಡು ಬದಲಾವಣೆ ಮಾಡಿಕೊಳ್ಳುವುದು ಮುಖ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಎನ್.ನಾಗರಾಜು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮುಖಂಡರಾದ ಎಚ್.ಎಸ್.ಮಂಜುಳಾ, ಲಕ್ಷ್ಮೀ ಕುಂತೂರು, ವೈ.ಕೆ.ಗೋಪಾಲಸ್ವಾಮಿ ಭಾಗವಹಿಸಿದ್ದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು