ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಖರ್ಗೆ ಕುಟುಂಬದ ಬಗ್ಗೆ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಬಿಗೆಪಿಗರು ಅವರವರೆ ಒಬ್ಬರಿಗೊಬ್ಬರು ನಿತ್ಯವೂ ಬೈದಾಡಿಕೊಳ್ಳುತ್ತಿದ್ದಾರೆ. ಯತ್ನಾಳ ವಿರುದ್ಧ ವಿಜಯೇಂದ್ರ, ವಿಜಯೇಂದ್ರ ವಿರುದ್ಧ ಯತ್ನಾಳ, ರವಿಕುಮಾರ, ಸದಾನಂದಗೌಡ, ಅಶೋಕ, ಮುನಿರತ್ನ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆಂದು ಲೇವಡಿ ಮಾಡಿದರು.
ಬಿಜೆಪಿಯವರಿಗೆ ಅವರ ಇತಿಹಾಸವೇ ಗೊತ್ತಿಲ್ಲ, ಇನ್ನು ರಜಾಕಾರರ ಇತಿಹಾಸ ಹೇಳ್ತಾರಾ? ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇವರು ರಜಾಕಾರರ ಇತಿಹಾಸ ಹೇಳ್ತಾರೆ. ನಾನು ಇದೇ ಕಾರಣಕ್ಕೆ ಹೇಳಿದ್ದೆ ಬಿಜೆಪಿಯವರಿಗೆ ಫ್ರೀ ಡಿಎನ್‌ಎ ಟೆಸ್ಟ್ ಮಾಡಿಸ್ತಿನಿ ಬನ್ನಿ ಅಂತ. ಯಾರು ಎಲ್ಲಿಂದ ಬಂದವರು ಅನ್ನೋದು ಡಿಎನ್‌ಎ ಟೆಸ್ಟ್ ಮೂಲಕ ಬಹಿರಂಗವಾಗಲಿ ಎಂದರು.ತೇಜಸ್ವಿ ಸೂರ್ಯ, ಶಾಸಕ ರವಿ ಅಳಿಯ, ಆದ್ರೆ ಹೇಳಿಕೊಳ್ಳಲು ನಾಚಿಕೆ ಏಕೆ ಇವರಿಗೆ? ಬೇರೊಬ್ಬರ ವಂಶವಾಹಿನಿ ಬಗ್ಗೆ ಮಾತಾಡುವ ಇವರು ಮೊದಲು ತಮ್ಮ ಡಿಎನ್‌ಎ ಟೆಸ್ಟ್ ಮಾಡಿಸಿಕೊಳ್ಳಲಿ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣರನ್ನು ಹೇಡಿ ಅಂತಾರೆ. ಇದಕ್ಕೆ ಬಿಜೆಪಿಯವರು ಏನು ಹೇಳ್ತಾರೆ.
ಬಿಜೆಪಿಯಲ್ಲೆ ಎರಡೂ ಬಣಗಳ ಮಧ್ಯೆ ಫೈಟ್ ನಡೆದಿದೆ. ಬಿಜೆಪಿ ಕಾರ್ಯಕರ್ತರೇ ಯತ್ನಾಳ್ ಅರೆಹುಚ್ಚ ಎಂದಿದ್ದಾರೆ. ಅಲ್ಲಿಯೇ ಬಿಜೆಪಿ ವಿರುದ್ಧ ಬಿಜೆಪಿ ಆಗಿದೆ. ಯತ್ನಾಳ್ ಅವರ ಹಿಸ್ಟರಿನೇ ಅವರಿಗೆ ಗೊತ್ತಿಲ್ಲ.
ಪೀರ್ ಶಾ ಬಂಗ್ಲೆ ವಾಪಸ್‌ಗೆ ಆಂದೋಲಾ ಸ್ವಾಮೀಜಿಗಳ ನೇತೃತ್ವದಲ್ಲಿ ದೆಹಲಿ ಚಲೋ ವಿಚಾರವಾಗಿ ಪ್ರಶ್ನಿಸಿದಾಗ, ಅವರು ಸ್ವಾಮೀಜಿನಾ? ಮೊದಲು ಅವರ ಕಟ್ಟಡ ಬಗ್ಗೆ ಹೈಕೋಟ್೯ ತೀರ್ಪು ನೀಡಿದೆ ನೋಡಿಕೊಳ್ಳಲಿ. ಇಲ್ಲಾಂದ್ರೆ ನಾನು ಬುಲ್ಡೋಜರ್ ಬಾಬಾ ಆಗಬೇಕಾಗುತ್ತೆ. ಇದು ಉತ್ತರ ಪ್ರದೇಶ ಅಲ್ಲ ಇದು ಕರ್ನಾಟಕ, ಇಲ್ಲಿ ಸಂವಿಧಾನ ರಕ್ಷಣೆ ಮಾಡೋ ಸರ್ಕಾರ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇವತ್ತು ದೇಶದ ಜಿಡಿಪಿ ಏನಾಗಿದೆ? ಅದಕ್ಕೆ ಯಾರು ಉತ್ತರ ಕೊಡುತ್ತಾರೆ. ನಮ್ಮ ರಾಜ್ಯದ ಜಿಡಿಪಿ ಹೇಗಿದೆ.