ಕಾಯಕದ ಮೂಲಕವೇ ಗುರುತಿಸಿಕೊಂಡ ಹೂಗಾರ ಮಾದಯ್ಯ

KannadaprabhaNewsNetwork |  
Published : Sep 19, 2024, 01:52 AM IST
ಗಜೇಂದ್ರಗಡ ತಾಲೂಕಾ ಹೂಗಾರ ಸಮಾಜದ ವತಿಯಿಂದ ಕೆ.ಕೆ ವೃತ್ತದಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತಿಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

೧೨ನೇ ಶತಮಾನದ ಬಸವಾದಿ ಶರಣರಲ್ಲಿ ಹೂವಿನ ಕಾಯಕ ಮಾಡಿಕೊಂಡಿದ್ದ ಹೂಗಾರ ಮಾದಯ್ಯನವರು ಅನುಭವ ಮಂಟಪದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿ ಅನುಭಾವದ ವಚನಗಳನ್ನು ರಚಿಸಿದರು.

ಗಜೇಂದ್ರಗಡ: ಕಾಯಕ ತತ್ವದ ಮೂಲಕ ಬಸವಣ್ಣನವರ ಮನಸ್ಸು ಗೆದ್ದ ಹೂಗಾರ ಮಾದಯ್ಯ ಆದರ್ಶ ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಹೂಗಾರ ಸಮಾಜದ ತಾಲೂಕಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ನಡೆದ ತಾಲೂಕು ಹೂಗಾರ ಸಮಾಜ ವತಿಯಿಂದ ನಡೆದ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆಯಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

೧೨ನೇ ಶತಮಾನದ ಬಸವಾದಿ ಶರಣರಲ್ಲಿ ಹೂವಿನ ಕಾಯಕ ಮಾಡಿಕೊಂಡಿದ್ದ ಹೂಗಾರ ಮಾದಯ್ಯನವರು ಅನುಭವ ಮಂಟಪದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿ ಅನುಭಾವದ ವಚನಗಳನ್ನು ರಚಿಸಿದರು. ಬಸವಾದಿ ಶರಣರ ಮನೆಗಳಿಗೆ ಹೂವು, ಪತ್ರೆ ತಲುಪಿಸುವ ಕಾಯಕ ಮಾಡಿಕೊಂಡಿದ್ದ ಮಾದಯ್ಯನವರೆ ಹೂವಿನ ವೃತ್ತಿಯ ಜನರಿಗೆ ಇಂದಿನ ಲಿಂಗಾಯತ ಹೂಗಾರ ಸಮಾಜಕ್ಕೆ ಮೂಲ ಪುರುಷರಾಗಿದ್ದಾರೆ ಎಂದರು.

ಮುಖಂಡ ಬಿ.ಎಸ್. ಶೀಲವಂತರ ಮಾತನಾಡಿ, ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂವು ಬಾಡುತ್ತದೆ, ಆದರೆ ಹೂಗಾರ ಸಮಾಜದವರ ಮನಸ್ಸು ಬಾಡದೆ, ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ. ೧೨ನೇ ಶತಮಾನದಲ್ಲಿ ರಾಜನಾದ ಸಕಲೇಶ ಮಾದರಸ, ಹೂಗಾರ ಮಾದಯ್ಯನವರು, ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ ಎಂದರು.

ಮುಖಂಡ ಶರಣು ಪೂಜಾರ ಮಾತನಾಡಿ, ಶಿವಶರಣ ಹೂಗಾರ ಮಾದಯ್ಯ ರಚಿಸಿದ ಕೆಲವು ವಚನಗಳ ಪೈಕಿ ಲಭ್ಯವಾಗಿರುವ ವಚನಗಳಲ್ಲಿ ಸಾಮಾಜಿಕ ಸಮಾನತೆ, ಮೂಢನಂಬಿಕೆ ಹಾಗೂ ಅಂಧ ಶ್ರದ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ ಎಂದರು.

ದೇವಪ್ಪ ಮಡಿವಾಳರ, ರವಿ ಗಡೇದವರ ಹಾಗೂ ಬಸವರಾಜ ಕೊಟಗಿ ಮಾತನಾಡಿದರು.

ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್, ವೆಂಕಟೇಶ ಮುದಗಲ್, ರಾಂಪೂರ ಗ್ರಾಪಂ ಸದಸ್ಯ ಬಾಲಾಜಿರಾವ್ ಭೋಸ್ಲೆ, ಮಾಜಿ ಸದಸ್ಯ ಚಂದ್ರು ಹೂಗಾರ, ಮಲ್ಲಯ್ಯ ಪೂಜಾರ, ಬಸವರಾಜ ಹೂಗಾರ, ಲೋಕಪ್ಪ ರಾಠೋಡ, ದೇವಪ್ಪ ಮಡಿವಾಳರ, ಶ್ರೀಧರ ಬಿದರಳ್ಳಿ, ಮಂಜು ಹೂಗಾರ, ಚಿದಾನಂದಪ್ಪ ಹಡಪದ, ರವಿ ಗಡೇದವರ, ಕಳಕಪ್ಪ ಹೂಗಾರ, ತಿರಕಪ್ಪ ಹೂಗಾರ, ನಿಂಗಪ್ಪ ಹೂಗಾರ, ರಾಘು ಹೂಗಾರ, ಪ್ರಭು ಹೂಗಾರ, ಅಲ್ಲಾಭಕ್ಷಿ ಮುಚ್ಚಾಲಿ, ವೀರೇಶ ರಾಠೋಡ, ರಾಜೇಂದ್ರಸ್ವಾಮಿ ಹಿರೇಮಠ, ಶ್ರೀಕಾಂತ ತಾಳಿಕೋಟಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!