ಜಿಲ್ಲಾ ವಕೀಲರಿಂದ ಮದಕರಿ ನಾಯಕ ನಾಟಕ ಪ್ರದರ್ಶನ

KannadaprabhaNewsNetwork |  
Published : Oct 08, 2024, 01:04 AM IST
ಚಿತ್ರ 1 | Kannada Prabha

ಸಾರಾಂಶ

ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಹಾಗೂ ಜಿಲ್ಲಾ ವಕೀಲರ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಅ.13 ರಂದು ಮದಕರಿ ನಾಯಕ ಜಯಂತಿ ಹಾಗೂ ದಸರಾ ಹಬ್ಬದ ಪ್ರಯುಕ್ತ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಾಟಕದ ನಿರ್ದೇಶಕ ಎಸ್. ವಿಜಯಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಹಾಗೂ ಜಿಲ್ಲಾ ವಕೀಲರ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಅ.13 ರಂದು ಮದಕರಿ ನಾಯಕ ಜಯಂತಿ ಹಾಗೂ ದಸರಾ ಹಬ್ಬದ ಪ್ರಯುಕ್ತ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಾಟಕದ ನಿರ್ದೇಶಕ ಎಸ್. ವಿಜಯಕುಮಾರ್ ಹೇಳಿದರು.

ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕದ ಅಂತಿಮ ತಾಲೀಮು ನಿರ್ದೇಶನದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್, ಅಪರ ಜಿಲ್ಲಾ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಹಾಗೂ ಗಂಗಾಧರ ಹಡಪದ ಕಾನೂನು ಸೇವಾ ಪ್ರಾಧಿಕಾರದ ವಿಜಯ್ ಅವರ ಸಮ್ಮುಖದಲ್ಲಿ ಪೋಸ್ಟರ್‌ಗಳನ್ನು ಲೋಕಾರ್ಪಣೆ ಮಾಡುವ‌ ಮೂಲಕ ನಗರ ಸೇರಿದಂತೆ ಇಡೀ ಜಿಲ್ಲಾಧ್ಯಂತ ಪ್ರಚಾರ ಮಾಡಲಾಗಿದ್ದು, ಈ ಬಾರಿ ಸುಮಾರು 10 ಸಾವಿರ ಜನ ವೀಕ್ಷಕರ ನಿರೀಕ್ಷೆ ಇಡಲಾಗಿದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗದ ವ್ಯವಸ್ಥಾಪಕ ಹಿರಿಯ ವಕೀಲ ಪಿ.ಆರ್.ವೀರೇಶ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗದಿಂದ ರಾಜ್ಯದ ವಿವಿಧೆಡೆ ಹಲವು ಕ್ರೀಡೆಗಳು, ಗಾಯನ, ನೃತ್ಯ ಮತ್ತು ಜಾನಪದ ಸಮೂಹ ಗೀತೆ ಸೇರಿ ಹಲವು ಕಾರ್ಯಕ್ರಮಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದು ಚಿತ್ರದುರ್ಗದ ವಕೀಲರು ರಂಗಭೂಮಿಯಲ್ಲೂ ಖಡಕ್ ಪ್ರದರ್ಶನ ನೀಡಲು ತಯಾರಾಗಿದ್ದಾರೆ ಎಂದರು.

ಎಸ್. ವಿಜಯಕುಮಾರ್ ಅಧ್ಯಕ್ಷರಾಗಿದ್ದಾಗ ಆಶಾಲತಾ ಎಂಬ ಸಾಮಾಜಿಕ ನಾಟಕ, ನಂತರ ಸಿ.ಶಿವು ಯಾದವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಎರಡು ಬಾರಿ ಅದ್ಭುತವಾಗಿ ಮಾಡಿದ್ದು ಇದೀಗ ವೈ.ತಿಪ್ಪೇಸ್ವಾಮಿ ಅವಧಿಯಲ್ಲಿ ರಾಜವೀರ ಮದಕರಿ ನಾಯಕ ನಾಟಕವನ್ನು ಇದೇ 13 ರಂದು ಭಾನುವಾರ ಪ್ರದರ್ಶನ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪ್ರೋತ್ಸಾಹ ನೀಡುವಂತೆ ಕೋರಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅನಿಲ್ ಕುಮಾರ್, ಪ್ರಧಾನ‌ ಕಾರ್ಯದರ್ಶಿ ಆರ್. ಗಂಗಾಧರ್ ರ ಪ್ರೋತ್ಸಾಹದೊಂದಿಗೆ ಸಂಗೀತ ಶಿಕ್ಷಕರಾಗಿ ಜಿ.ಮೂಗಬಸಪ್ಪ, ನಾಟಕ ತರಬೇತಿದಾರರಾಗಿ ಎಂ.ಎಚ್ ಮರಿಸ್ವಾಮಿಯವರ ನೇತೃತ್ವದಲ್ಲಿ ಆ.13ರಂದು ಸಂಜೆ 7 ಗಂಟೆಗೆ ತುಮಕೂರಿನ ಶ್ರೀಲತಾ ಹೈಡ್ರಾಲಿಕ್ ಆಟೋಮೇಟಕ್ ಎಲ್‌ಇಡಿ ಡ್ರಾಮ ಸೀನರಿಯಲ್ಲಿ ಡಿಟಿಎಸ್ ಧ್ವನಿವರ್ಧಕ ಯಂತ್ರಗಳಿಂದ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯರಂಗ ಸಜ್ಜಿಕೆಯಲ್ಲಿ ವಕೀಲರು ರೋಚಕ ಇತಿಹಾಸದ ನಾಟಕವನ್ನು ಪ್ರಪ್ರಥಮ ಬಾರಿಗೆ ಅಭಿನಯಿಸಲಿದ್ದಾರೆ.

ಪಾತ್ರ ವರ್ಗದಲ್ಲಿ ರಾಜವೀರ ಮದಕರಿ ನಾಯಕರಾಗಿ ಎಸ್.ವಿದ್ಯಾಧರ, ದೊಡ್ಡ ಮದಕರಿ ನಾಯಕರಾಗಿ ಎನ್. ಶರಣಪ್ಪ, ಶಾಂತವೀರ ಮುರುಘಾ ಸ್ವಾಮೀಜಿಯಾಗಿ ಜಿ.ಸಿ.ದಯಾನಂದ, ಸಿದ್ದ ಪುರುಷರಾಗಿ ಟಿ.ಶಿವಾರಾಧ್ಯ,ಪರಶುರಾಮ ನಾಯಕರಾಗಿ ಎಂ.ಮೂರ್ತಿ, ಭರಮಣ್ಣ ನಾಯಕರಾಗಿ ಟಿ.ಭೋಸಯ್ಯ, ಹೈದರಾಲಿ ಖಾನ್ ಪಾತ್ರದಲ್ಲಿ ಶಿವು ಯಾದವ್ , ಕೃಷ್ಣಪ್ಪ ನಾಯಕರಾಗಿ ಎಂ.ಕೆ.ಲೋಕೇಶ್, ನಿಡುಗಲ್ ದೊರೆ ಕಾಮರಾಜರಾಗಿ ಟಿ.ರವಿ ಸಿದ್ದಾರ್ಥ, ಸೋಮಶೇಖರ್, ನಾಯಕರಾಗಿ ಸೋಮಶೇಖರ್ ರೆಡ್ಡಿ, ದಿವಾನ್ ಪೂರ್ಣಯ್ಯರಾಗಿ ಮಾಲತೇಶ್‌ ಅರಸ್ , ಲಾವಣಿ ಲಿಂಗಯ್ಯರಾಗಿ ಡಾ.ಎಂ.ಸಿ.ನರಹರಿ, ಶಕುನಿ ಶಂಕರಯ್ಯನಾಗಿ‌ ಜೆ.ಕಿರಣ್ ಜೈನ್, ಧನ್ ಸಿಂಗ್ ಪಾತ್ರದಲ್ಲಿ ಕೆ.ಚಂದ್ರಶೇಖರಪ್ಪ, ರಾಜಮಾತೆ ಓಬವ್ವ ನಾಗತಿಯಾಗಿ ಲಕ್ಷ್ಮಿ ಶ್ರೀಧರ್, ಪದ್ಮಾಂಬಿಕೆಯಾಗಿ ಚಂದನ, ನೃತ್ಯ ಕಲಾವಿದೆಯಾಗಿ ಮೌನೇಶ್ ಬಡಿಗೇರ ಪಾತ್ರ ಮಾಡಿದ್ದಾರೆ. ಕ್ಯಾಷಿಯೋ ಪ್ರವೀಣ್, ತಬಲ ಸಾಗರ್, ರಿದಂ ಅನ್ನು ಬದ್ರಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾಟಕದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!