ಕನ್ನಡಪ್ರಭ ವಾರ್ತೆ ಮೈಸೂರು
ಲಕ್ಷ್ಮೀಪುರಂ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಪ.ಪಂಗಡ ಮುನ್ನಡೆ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಸತಿ ಶಾಲೆಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ನೀಡಿದೆ. ಸುಮಾರು 17 ಸಾವಿರ ಗ್ರಾಮಗಳು ಇದರ ಪ್ರೋಂಜನ ಪಡೆದಿವೆ. ಮುದ್ರಾ ಯೋಜನೆ ಮೂಲಕ ಹಲವು ಪರಿಶಿಷ್ಟರು ಉದ್ಯಮಿಗಳಾಗಿದ್ದಾರೆ. ಶೇ 50ಕ್ಕೂ ಹೆಚ್ಚು ಹಿಂದುಳಿದವರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.ಮೈಸೂರು ರಾಜರು ಮಾಡಿರುವ ಕಲ್ಯಾಣದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅವರು ಭಾರತವನ್ನು ಸುವರ್ಣ ಉತ್ತಂಗತ್ತ ಕೊಂಡೊಯ್ಯುತ್ತಿದ್ದು, ಮೈಸೂರು ಕೂಡ ಆ ಪ್ರಯೋಜನ ಪಡಯುವುದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಪ.ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರ ಹನುಮಂತ ಮಾತನಾಡಿ, ಮೈಸೂರು- ಚಾಮರಾಜನಗರದಲ್ಲಿ ಪ.ಪಂಗಡ ಸಮುದಾಯವು ನಿರ್ಣಾಯಕವಾಗಿದ್ದರು. ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಈಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಹೈದರಾಲಿ ಮತ್ತು ಟಿಪುವಿನ ಆರ್ಭಟ ಮುಂದುವರಿಯಬಾರದು ಎಂದರೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು. ನಾಯಕ ಸಮುದಾಯವು ಮದಕರಿ ನಾಯಕ ಮತ್ತು ಒನಕೆ ಓಬವ್ವ ಅವರನ್ನು ಕೊಂದ ದುಷ್ಟರನ್ನು ಮರೆಯಬಾರದು. ಅಂತವರ ಕೈಗೆ ಅಧಿಕಾರ ನೀಡಬಾರದು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
1982 ರಿಂದಲೂ ಇದ್ದ ಪರಿವಾರ ಮತ್ತು ತಳವಾರ ಬೇಡಿಕೆಯನ್ನು ಈ ಭಾಗದ ಯಾವುದೇ ಸಂಸದರು ಪರಿಹರಿಸಲಿಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಸಿ.ಎಚ್. ವಿಜಯಶಂಕರ್, ಎಚ್. ವಿಶ್ವನಾಥ್ ಆದಿಯಾಗಿ ಯಾರೊಬ್ಬರೂ ಸಮಸ್ಯೆ ಪರಿಹರಿಸಲಿಲ್ಲ. ಆದರೆ, ನಾನು ಸಂಸದನಾಗಿ ಆಯ್ಕೆಯಾದ ನಾಲ್ಕೇ ವರ್ಷದಲ್ಲಿ ಸಮುದಾಯದ ಬೇಡಿಕೆ ಈಡೇರಿಸಿದೆ ಎಂದು ಅವರು ಹೇಳಿದರು.
ಇಂದು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಯದುವೀರ್ ಚುನಾವಣೆಗೆ ನಿಂತಿದ್ದು, ಸಮುದಾಯವು ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಮಾವೇಶಕ್ಕೆ ಸುಣ್ಣದಕೇರಿ, ವೀರನಗೆರೆ, ತಿಲಕ್ ನಗರ, ಜಯನಗರ ಮೊದಲಾದ ಭಾಗಗಳಿಂದ ನಾಯಕ ಸಮುದಾಯದವರು ಆಗಮಿಸಿ ಬೆಂಬಲ ನೀಡುವ ಜತೆಗೆ ಯದುವೀರ್ ಪರವಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದರು. ಮದಕರಿನಾಯಕರ ಹೆಗ್ಗುರುತು ಕತ್ತಿಗುರಾಣಿಯನ್ನು ಯದುವೀರ್ ಅವರಿಗೆ ನೀಡಿ ಅಭಿನಂದಿಸಿದರು.