ಕನ್ನಡಪ್ರಭ ವಾರ್ತೆ ಕನಕಗಿರಿ
ಬೆಳಗ್ಗೆ ಪಂಚಾಮೃತ ಅಭಿಷೇಕ, ಫಲ, ಪುಷ್ಪ ಅಲಂಕಾರ, ಅಷ್ಟೋತ್ತರ ಪಾರಾಯಣ, ನೈವೈದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕನಕಗಿರಿಯ ಶ್ರೀ ರಾಘವೇಂದ್ರ ಭಜನಾ ಸಂಘದವರಿಂದ ದಾಸವಾಣಿ ಹಾಗೂ ರಾಯರ ಭಾವಚಿತ್ರ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶೋಭೆ ತಂದರು. ಮಹಾಮಂಗಳಾರತಿ ನಂತರ ಭಕ್ತರು ತೀರ್ಥ, ಪ್ರಸಾದ ಸ್ವೀಕರಿಸಿ ಪುನೀತರಾದರು. ಶ್ರೀಕಾಂತ ಆಚಾರ್ ಪೂಜಾರ ನವಲಿ ಅವರಿಂದ ಹಸ್ತಾಕ್ಷರ ಹೋಮ ನಡೆಯಿತು.
ನಂತರ ಪಂಡಿತ್ ಶ್ರೀಪಾದ ಕುಲಕರ್ಣಿ ಮಾತನಾಡಿ, ಮನುಷ್ಯನ ನೂರಾರು ಸಮಸ್ಯೆಗಳಿಗೆ ಪರಿಹಾರ ರಾಯರು ಆಗಿದ್ದಾರೆ. ರಾಯರ ಸ್ಮರಣೆಯಿಂದ ದೊಡ್ಡ ಪವಾಡಗಳೇ ನಡೆದಿವೆ, ಈಗಲೂ ನಡೆಯುತ್ತಿವೆ. ಮಂತ್ರಾಲಯದಲ್ಲಿ ರಾಯರು ವೃಂದಾವನಸ್ಥರಾಗಿ 353 ವರ್ಷ ಕಳೆದಿದ್ದು, ರಜತ, ಸ್ವರ್ಣ ರಥೋತ್ಸವ, ಗಜ, ಸಿಂಹೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂದ್ರ, ತೆಲಂಗಾಣ ಸೇರಿದಂತೆ ಹೊರ ದೇಶದಲ್ಲಿಯೂ ರಾಯರ ಆರಾಧನೆ ನಡೆಯುತ್ತಿದೆ. ಅದಕ್ಕಾಗಿ ರಾಯರನ್ನು ನಂಬಿ ಕೆಟ್ಟವರಿಲ್ಲ ಎಂದು ಹರಿದಾಸರ ಹಾಡಿ ಹೊಗಳಿದ್ದಾರೆಂದು ತಿಳಿಸಿದರು.ಪ್ರಮುಖರಾದ ಶ್ರೀನಿವಾಸ ಆಚಾರ್ ನವಲಿ, ಮಧುಸೂದನ ಕುಲಕರ್ಣಿ, ಸುದರ್ಶನ ನವಲಿ, ಶ್ರೀಪಾದ ನವಲಿ, ಪರಶುರಾಮ ಕುಲಕರ್ಣಿ, ರಘುನಂದನ ಕುಲಕರ್ಣಿ, ರಾಜೇಂದ್ರ ಬೆಂಗಳೂರು, ಭಜನಾ ಕಲಾವಿದರಾದ ಸುರೇಶರೆಡ್ಡಿ ಮಹಲಿನಮನಿ, ಹನುಮಂತರೆಡ್ಡಿ, ಪರಂಧಾಮರೆಡ್ಡಿ, ಭೀಮರೆಡ್ಡಿ, ಅಂಭಾಜೀರಾವ್ ಬೊಂದಾಡೆ, ಸುರೇಶ ಬೊಂದಾಡೆ, ಅಶೋಕ ನಾಯಕ, ರಾಮಣ್ಣ ಗುಂಜಳ್ಳಿ, ನಾಗರೆಡ್ಡಿ, ವಿಜಯಕುಮಾರ ಹೊಸಳ್ಳಿ ಇತರರಿದ್ದರು.