ಕನ್ನಡಪ್ರಭವಾರ್ತೆ ಮಧುಗಿರಿ
ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠೆ ಶಾಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಪೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಮಕ್ಕಳಿಗಾಗಿ ಗ್ರಾಪಂ ಮಟ್ಟದ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗಣಿತ ಕಲಿಕೆ ನಿರಂತರ ಅಧ್ಯಯನದಿಂದ ಮಾತ್ರ ಸುಲಭವಾಗುತ್ತದೆ. ತರಗತಿಗೆ ಚೆಕ್ಕರ್ ಹಾಕುವುದರಿಂದ ಹಿಂದಿನ ತರಗತಿ ಮತ್ತು ಮುಂದಿನ ತರಗತಿಗಳಿಗೆ ಸರಿಯಾದ ಸಂಬಂಧವಿರುವುದಿಲ್ಲ, ಶಾಲೆಗೆ ಪ್ರತಿದಿನ ಹಾಜರಾಗುವುದರಿಂದ ಪರೀಕ್ಷೆಗೆ ನಿಗದಿ ಪಡಿಸಿದ ಪೂರ್ಣ ಅಂಕಗಳನ್ನು ಗಣಿತದಲ್ಲಿ ಪಡೆಯಬಹುದು. ಒಂದು ವೇಳೆ ಶಾಲಾಗೆ ಗೈರಾದರೆ ನಿಮ್ಮ ಸ್ನೇಹಿತರ ಬಳಿ ಅಂದಿನ ದಿನದ ಪಾಠವನ್ನು ಕೇಳಿ ಪಡೆದು ಕಲಿಯಬೇಕು. ವಿಧ್ಯೆ ಸಾಧಕನ ಸ್ವತ್ತು, ಕಠಿಣ ಪರಿಶ್ರಮದಿಂದ ಕಲಿತರೆ ನಿಮ್ಮ ಬದುಕು ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.
ಬಿಇಒ ಹನುಮಂತರಾಯಪ್ಪ, ಇಒ ಲಕ್ಷ್ಮಣ್, ಗ್ರಾಪಂ ಅಧ್ಯಕ್ಷೆ ಬಾನುಪ್ರಿಯಾ, ಉಪಾಧ್ಯಕ್ಷೆ ಜಯಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತರಾಯಪ್ಪ, ನಳಿನಾ, ಜಿ.ಪಂ. ಮಾಜಿ ಸದಸ್ಯ ಚೊಡಪ್ಪ, ಮುಖ್ಯ ಶಿಕ್ಷಕಿ ಅಶ್ವತ್ಥಮ್ಮ ಸೇರಿದಂತೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.