ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಮಧುಸೂದನ್ ಪದಗ್ರಹಣ

KannadaprabhaNewsNetwork |  
Published : Jul 12, 2024, 01:40 AM IST
ಚಿತ್ರ : 11ಎಂಡಿಕೆ3 : ಮಡಿಕೇರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರ ಪದಗ್ರಹಣ ನಡೆಯಿತು.  | Kannada Prabha

ಸಾರಾಂಶ

ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್‌ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿಯಾಗಿ ಕಟ್ಟೆಮನೆ ಸೋನಜಿತ್ ಪದಗ್ರಹಣ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಗತ್ತಿನಲ್ಲಿಯೇ ರೋಟರಿ ಕ್ರಿಯಾಶೀಲ ಸೇವಾ ಸಂಸ್ಥೆಯಾಗಿ ಖ್ಯಾತವಾಗಿದ್ದು, ರೋಟರಿಯ ಸಾಮಾಜಿಕ ಹೊಣೆಯನ್ನು ಯಶಸ್ಸಿಯಾಗಿ ಮುಂದುವರಿಸುವ ಮಹತ್ವದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲಿದೆ ಎಂದು ಮೈಸೂರಿನ ಉದ್ಯಮಿ, ರೋಟರಿ ಪ್ರಮುಖ ಯಶಸ್ವಿ ಸೋಮಶೇಖರ್ ಕರೆ ನೀಡಿದ್ದಾರೆ.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್‌ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿಯಾಗಿ ಕಟ್ಟೆಮನೆ ಸೋನಜಿತ್ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಜಾಗತಿಕವಾಗಿ 119 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆ ಪ್ರತೀ ವರ್ಷ ಕೋಟ್ಯಾಂತರ ಜನರಿಗೆ ಸೇವೆ ಮೂಲಕ ನೆರವು ನೀಡುತ್ತಲೇ ಬಂದಿದೆ, ರೋಟರಿ ಸದಸ್ಯರು ನೀಡುವ ದೇಣಿಗೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಸಂತ್ರಸ್ತರಿಗೆ ತಲುಪುತ್ತಿದೆ ಎಂದು ಸೋಮಶೇಖರ್ ಹೇಳಿದರು.ರೋಟರಿ ಸಂಸ್ಥೆ ಸಾಮಾಜಿಕ ಜವಬ್ದಾರಿಯುಳ್ಳ, ಸಮಾಜಸೇವೆ ಕಳಕಳಿಯುಳ್ಳ ನಿಸ್ವಾರ್ಥ ಮನೋಭಾವದ ಸಮಾಜದ ಎಲ್ಲಾ ವರ್ಗಕ್ಕೆ ಸೇರಿರುವ ಸದಸ್ಯರನ್ನು ಹೆಚ್ಚಾಗಿ ಬಯಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್‌ ನೂತನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, 65 ಸದಸ್ಯ ಬಲದ ಮಿಸ್ಟಿ ಹಿಲ್ಸ್ 19 ವರ್ಷಗಳಲ್ಲಿ ಸೇವಾಸಾಧನೆಗಾಗಿ ಖ್ಯಾತವಾಗಿದ್ದು ಮತ್ತಷ್ಟು ನೂತನ ಯೋಜನೆಗಳ ಮೂಲಕ ಈ ಸೇವಾ ಪರಂಪರೆ ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು,

ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್ ಮತ್ತು ವಲಯ ಸೇನಾನಿ ಅನಿತಾ ಪೂವಯ್ಯ, ಈ ವರ್ಷದ ರೋಟರಿಯ ಸೇವಾ ಯೋಜನೆಗಳ ಮಾಹಿತಿ ನೀಡಿದರು. ಎಸ್.ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ರೋಟರಿ ಸಂಸ್ಥೆಗೆ ಮೇಜರ್ ಡೋನರ್ ಆದ ಮಿಸ್ಟಿ ಹಿಲ್ಸ್ ನಿದೇ೯ಶಕ ಡಾ. ಚೆರಿಯಮನೆ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ನೂತನ ಸದಸ್ಯರಾಗಿ ಮನೋಜ್ ಕುಮಾರ್ ಅವರನ್ನು ಸೇರ್ಪಡೆಗೊಳಿಸಲಾಯಿತು.

ಮಿಸ್ಟಿ ಹಿಲ್ಸ್‌ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ ವೇದಿಕೆಯಲ್ಲಿದ್ದರು.

ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್‌ಗಳಾದ ರವೀಂದ್ರ ಭಟ್, ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು, ಕಟ್ಟೆಮನೆ ಸೋನಜಿತ್ ವಂದಿಸಿದರು. ಮಿಸ್ಟಿ ಹಿಲ್ಸ್ ಪ್ರಮುಖ ಬಿ.ಜಿ. ಅನಂತಶಯನ, ಅನಿಲ್ ಎಚ್‌.ಟಿ., ಬಿ.ಕೆ.ರವೀಂದ್ರ ರೈ, ಕಪಿಲ್ ಕುಮಾರ್, ಕೆ.ಎಂ. ಪೂಣಚ್ಚ, ಲೀನಾ ಪೂವಯ್ಯ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!