ಕನ್ನಡಪ್ರಭ ವಾರ್ತೆ ಪಾಂಡವಪುರ
ಎಲ್.ಸಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕಾವೇರಿ ಉಳಿವಿಗಾಗಿ ಹೋರಾಟಗಾರ ನಡೆಸಿದ ಮಾಜಿ ಸಂಸದ ಜಿ.ಮಾದೇಗೌಡರ ಸುಪುತ್ರ ಎಂಎಲ್‌ಸಿ ಮಧು ಜಿ.ಮಾದೇಗೌಡರ ಹುಟ್ಟುಹಬ್ಬದ ಅಂಗವಾಗಿ ಎಲ್ಲಾ ಕಾಂಗ್ರೆಸ್ ಮುಖಂಡರು ಸೇರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದ್ದೇವೆ ಎಂದರು.
ಮಧು ಜಿ.ಮಾದೇಗೌಡರು ಜನ ಸಾಮಾನ್ಯರೊಂದಿಗೆ ಸ್ಪಂದಿಸಿ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ತಂದೆ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ. ಇಂತಹ ನಾಯಕರಿಗೆ ಮುಂದೆ ಮತ್ತಷ್ಟು ದೊಡ್ಡ ರಾಜಕೀಯ ಸ್ಥಾನಮಾನಗಳು ದೊರೆಯುವಂತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲೆಂದು ಹಾರೈಸಿದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ಡಾ.ಮಾಯಿಗೌಡ, ಆರ್.ಎ.ನಾಗಣ್ಣ, ಅಮೃತಿ ರಾಜಶೇಖರ್, ಕೆ.ಮಂಜುನಾಥ್, ಚಿಕ್ಕಾಡೆ ಮಹೇಶ್, ದೀಪು, ಎನ್.ರಾಮೇಗೌಡ, ದೇವರಾಜು, ರಮೇಶ್, ಸಿದ್ದಲಿಂಗಯ್ಯ, ಮಾಲತಿ, ಕಣಿವೆರಾಮು, ದೊಡ್ಡವೆಂಕಟಯ್ಯ, ಕಣಿವೆ ವಿಶ್ವೇಶ್ವರ, ವೈದ್ಯಾಧಿಕಾರಿ ಡಾ.ಅರವಿಂದ್ ಸೇರಿದಂತೆ ಹಲವರು ಇದ್ದರು.
ಮಂಡ್ಯ: ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಹೊಯ್ಸಳರ 3ನೇ ವೀರಬಲ್ಲಾಳ ನಿರ್ಮಿಸಿರುವ ಇತಿಹಾಸ ಪ್ರಸಿದ್ಧ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿವೈಕುಂಠ ಏಕಾದಶಿ ಮಹೋತ್ಸವವನ್ನು ಡಿ.30 ರಂದು ಏರ್ಪಡಿಸಲಾಗಿದೆ.