ಅರವಿಂದರ ವಿಚಾರಧಾರೆ ಪರಿಚಯಿಸಿದ್ದು ಮಧುರಚೆನ್ನರು:ಡಾ.ಬಸವ ಮರುಳಸಿದ್ಧ ಶ್ರೀ

KannadaprabhaNewsNetwork |  
Published : Jun 30, 2026, 01:15 AM IST
ಸಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕನ್ನಡಕ್ಕೆ ಮಹರ್ಷಿ ಅರವಿಂದರ ವಿಚಾರಧಾರೆಗಳನ್ನು ಪರಿಚಯಿಸಿದ ಮಹಾನುಭಾವರು ಮಧುರಚೆನ್ನರು ಎಂದು ಬಸವ ತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕನ್ನಡಕ್ಕೆ ಮಹರ್ಷಿ ಅರವಿಂದರ ವಿಚಾರಧಾರೆಗಳನ್ನು ಪರಿಚಯಿಸಿದ ಮಹಾನುಭಾವರು ಮಧುರಚೆನ್ನರು ಎಂದು ಬಸವ ತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಚಿಕ್ಕಮಗಳೂರಿನ ಕಲ್ಯಾಣನಗರದ ಬಸವತತ್ವಪೀಠದಲ್ಲಿ ‌ಭಾನುವಾರ 58ನೇ ಶಿವಾನುವಭವ ಗೋಷ್ಠಿ ಅಂಗವಾಗಿ ''''''''ಸೆಲ್ಫಿಬುಕ್'''''''' ಜಾಲತಾಣದ ಆ್ಯಪ್ ಬಿಡುಗಡೆ ಹಾಗೂ ''''''''ಮಧುರಚೆನ್ನ'''''''' ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಒಡಹುಟ್ಟಿದವ ಎಂದೆನಿಸಿಕೊಂಡವರು ಮಧುರಚೆನ್ನರು. ಅಲ್ಲದೆ ಮಧುರಚೆನ್ನರನ್ನು ಹೂತಿಲ್ಲ; ಬಿತ್ತೀರಿ ಎಂದ ಬೇಂದ್ರೆಯವರ ಮಾತು ನಿಜ‌. ಅವರನ್ನು ಉಳಿಸುವ, ಬೆಳೆಸುವ ಕೆಲಸ ''''''''ಮಧುರಚೆನ್ನ'''''''' ಎಂಬ ಏಕವ್ಯಕ್ತಿ ನಾಟಕದ ಮೂಲಕ ನಡೆದಿದೆ ಎಂದು ಶ್ಲಾಘಿಸಿದರು.

ಮಹರ್ಷಿ ಅರವಿಂದರಿಗೂ ನಮ್ಮ ಬಸವತತ್ವಪೀಠಕ್ಕೂ ಸಂಬಂಧವಿದೆ‌. ದೈಹಿಕ, ಮಾನಸಿಕ ಹಾಗೂ ಆತ್ಮಿಕ ವಿಕಾಸದ ಮೂಲಕ ಪ್ರತಿಯೊಬ್ಬರೂ ಸಾಧಿಸಬೇಕು. ಇದೇ ಯೋಗ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅರವಿಂದರು. ಇದನ್ನೇ ಶರಣರು ಪ್ರತಿಪಾದಿಸಿದರು. ಇದನ್ನು ಮಧುರಚೆನ್ನರು ಮುಂದುವರಿಸಿದರು.

ಇಂಥ ಅಪರೂಪದ ಕವಿ ಕುರಿತ ನಾಟಕವಿದು‌. ವಿಶೇಷವೆಂದರೆ ಮಧುರ ಚೆನ್ನರ ಮೊಮ್ಮಗ ಜಗದೇವ ಗಲಗಲಿ ಅವರೇ ನಾಟಕವನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಮಾತಿಗೆ ನಿಲುಕದ ಭಾವವನ್ನು ಅನುಭವಿಸಿದ್ದು ಅನುಭಾವ. ಇಂಥ ಅನುಭವ ಪಡೆದವರು ಅನುಭಾವಿಗಳು. ಇಂಥ ಅನುಭಾವ ಪರಂಪರೆ 12ನೇ ಶತಮಾನದಲ್ಲಿ ಆರಂಭಗೊಂಡು ಬೆಳೆಯಿತು. ಈ ಪರಂಪರೆಗೆ ಸೇರಿದವರು ಮಧುರಚೆನ್ನರು. ಹಲಸಂಗಿ ಗೆಳೆಯರನ್ನು ಕಟ್ಟಿಕೊಂಡು ನಾಡು-ನುಡಿಗಾಗಿ ಜೊತೆಗೆ ಸಂಸ್ಕೃತಿ ಉದ್ದೀಪನಕ್ಕೆ ದುಡಿದರು ಎಂದು ಹೇಳಿದರು.ಈ ವೇಳೆ ಸಿಂದಿಗೆರೆ ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶಿರಸಂಗಿ ಬಸವಮಹಾಂತ ಸ್ವಾಮೀಜಿ, ಸಾಹಿತಿ ಹಿರೇಮಗಳೂರು ಕಣ್ಣನ್‌, ಇಟಲಿ ಕನ್ನಡ ಅಸೋಸಿಯೇಷನ್ ಅಧ್ಯಕ್ಷ ಹೇಮೇಗೌಡ ರುದ್ರಪ್ಪ, ಸೆಲ್ಫಿ ಬುಕ್ ಆ್ಯಪ್ ಸಂಸ್ಥಾಪಕ ನಂಜೇಶ್ ಬೆನ್ನೂರು, ರಂಗಕರ್ಮಿ ಗಣೇಶ ಅಮೀನಗಡ ಮೊದಲಾದವರಿದ್ದರುಫೋಟೋ

ಚಿಕ್ಕಮಗಳೂರಿನ ಬಸವತತ್ವಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ 58ನೇ ಶಿವಾನುವಭವ ಗೋಷ್ಠಿ ಅಂಗವಾಗಿ ''''''''ಸೆಲ್ಫಿಬುಕ್'''''''' ಜಾಲತಾಣದ ಆ್ಯಪ್ ಅನ್ನು ಬಸವತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ವೇಳೆ ಸಿಂದಿಗೆರೆ ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶಿರಸಂಗಿಯ ಬಸವಮಹಾಂತ ಸ್ವಾಮೀಜಿ, ಹಿರೇಮಗಳೂರು ಕಣ್ಣನ್‌, ಹೇಮೇಗೌಡ ರುದ್ರಪ್ಪ, ನಂಜೇಶ್ ಬೆನ್ನೂರು ಇದ್ದರು.--ಕೋಟ್‌---

ಬಸವತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ನೇತೃತ್ವದಲ್ಲಿ ಮುಂದಿನಗಳಲ್ಲಿ ಜರ್ಮನಿಯಲ್ಲಿ ಬಸವಪುತ್ಥಳಿ ಮತ್ತು ಬಸವತತ್ವ ಪೀಠ ಸ್ಥಾಪನೆ ಮಾಡಲಾಗುವುದು.

- ಹೇಮೇಗೌಡ ರುದ್ರಪ್ಪ, ಅಧ್ಯಕ್ಷರು, ಇಟಲಿ ಕನ್ನಡ ಅಸೋಸಿಯೇಷನ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ