ಜಾತಿ ಕಾಲಂನಲ್ಲಿ ಮಾದಿಗ ನಮೂದಿಸಲು ಮಾದಿಗ ಮಹಾಸಭಾ ಮನವಿ

KannadaprabhaNewsNetwork |  
Published : Apr 12, 2025, 12:46 AM IST
ಹಾನಗಲ್ಲಿನಲ್ಲಿ ಗುರುವಾರ ಮಾದಿಗ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. | Kannada Prabha

ಸಾರಾಂಶ

ಕೆಲವೊಂದು ಕಡೆ ಮಾದಿಗ ಸಮುದಾಯದ ಜನರು ಕ್ರೈಸ್ತ ಮತ್ತಿತರ ಧರ್ಮದ ಆಚರಣೆಯ ಪಾಲನೆ ಮಾಡುತ್ತಿದ್ದು, ಅಂಥವರೂ ಜಾತಿ ಸರ್ವೆ ಸಂದರ್ಭದಲ್ಲಿ ಕಡ್ಡಾಯವಾಗಿ ತಮ್ಮ ಮೂಲ ಜಾತಿ ಮಾದಿಗ ಎಂದು ಬರೆಸಬೇಕು.

ಹಾನಗಲ್ಲ: ಪರಿಶಿಷ್ಟ ಜಾತಿ, ಉಪಜಾತಿಗಳ ಮಾಹಿತಿ ಸಂಗ್ರಹಿಸಲು ಉದ್ದೇಶಿತ ಎಸ್‌ಸಿ ಜನಗಣತಿ ಮೇ ತಿಂಗಳ ಮೊದಲ ವಾರದಲ್ಲಿ ಶುರುವಾಗುವ ಹಿನ್ನೆಲೆ ಗುರುವಾರ ಮಾದಿಗ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.ಸಭೆಯ ನೇತೃತ್ವ ವಹಿಸಿ ಮಾತನಾಡಿದ ಮಾದಿಗ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ರಾಜು ಹರಿಜನ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಡಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ನೀಡುವ ಕುರಿತು ರಾಜ್ಯದಲ್ಲಿ ಸರ್ವೆ ಕಾರ್ಯ ನಡೆಯಲಿದೆ. ಸಮೀಕ್ಷೆ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದರು.ಕೆಲವೊಂದು ಕಡೆ ಮಾದಿಗ ಸಮುದಾಯದ ಜನರು ಕ್ರೈಸ್ತ ಮತ್ತಿತರ ಧರ್ಮದ ಆಚರಣೆಯ ಪಾಲನೆ ಮಾಡುತ್ತಿದ್ದು, ಅಂಥವರೂ ಜಾತಿ ಸರ್ವೆ ಸಂದರ್ಭದಲ್ಲಿ ಕಡ್ಡಾಯವಾಗಿ ತಮ್ಮ ಮೂಲ ಜಾತಿ ಮಾದಿಗ ಎಂದು ಬರೆಸಬೇಕು ಎಂದು ಸ್ಪಷ್ಟಪಡಿಸಿದರು.ಮಹಾಸಭಾ ಜಿಲ್ಲಾ ಕಾನೂನು ಸಲಹೆಗಾರ ಮಹೇಶ ಹರಿಜನ ಮಾತನಾಡಿ, ಅಂತರ್‌ಜಾತಿ ವಿವಾಹವಾದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಯವರು ಸಹ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ತಮ್ಮ ಜಾತಿಯನ್ನು ಮಾದಿಗ ಎಂದು ನಮೂದಿಸಬೇಕು ಎಂದರು.ರಾಜ್ಯದ ಸುಮಾರು 9 ಜಿಲ್ಲೆಗಳಲ್ಲಿ ಮಾದಿಗರು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಗುರುತಿಸಿಕೊಂಡಿದ್ದಾರೆ. ಇವರೂ ಸ್ಪಷ್ಟವಾಗಿ ಮಾದಿಗ ಎಂದು ಜಾತಿ ಕಾಲಂ ಭರ್ತಿ ಮಾಡಬೇಕು. ಸರ್ವೆ ಪ್ರಕ್ರಿಯೆಯಿಂದ ವಂಚಿತರಾದವರು ಆನ್‌ಲೈನ್ ಮೂಲಕವೂ ಸಮೀಕ್ಷೆಯ ಭಾಗವಾಗಬಹುದು ಎಂದರು.ಸಮಾಜದ ಪ್ರಮುಖರಾದ ಫಕ್ಕೀರೇಶ ಹರಿಜನ, ನೀಲಪ್ಪ ಹರಿಜನ, ಶೇಖರ ಹರಿಜನ, ಜಿ.ವಿ. ಮೇತ್ರಿ, ವಿಷ್ಣು ತಳಗೇರಿ, ಬಸವರಾಜ ಮಣ್ಣಮ್ಮನವರ, ಬಂಗಾರಪ್ಪ ಉದ್ದವಾಣಿ, ಸಮಗಾರ ಸಮಾಜದ ಮಾರುತಿ ಹಂಚಗಿ ಇದ್ದರು.ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘಕ್ಕೆ ನೇಮಕ

ರಟ್ಟೀಹಳ್ಳಿ: ತಾಲೂಕು ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದ ಸಭಾಭವನದಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ತಾಲೂಕು ಅಧ್ಯಕ್ಷರಾಗಿ ಎರಡನೇ ಬಾರಿಗೆ ಮಂಜುನಾಥ ತಳವಾರ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹನುಮಂತಪ್ಪ ಮೇಗಳಮನಿ, ಉಪಾಧ್ಯಕ್ಷರಾಗಿ ಅಶೋಕ ಹೆಡಿಯಾಲ ಹಾಗೂ ಮಂಜು ಎಸ್. ತಳವಾರ, ಕಾರ್ಯದರ್ಶಿಯಾಗಿ ಕರಿಯಪ್ಪ ಹ. ಚೌಡಕ್ಕನವರ ಖಜಾಂಚಿಯಾಗಿ ನಾಗರಾಜ ಬಳ್ಳಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಮೇಗಳಮನಿ ಮತ್ತು ರವೀಂದ್ರ ಮುದ್ನಳ್ಳಿ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಮಂಜುನಾಥ ಕುಪ್ಪೇಲೂರ, ಶಿವಕುಮಾರ ದೀವಿಗಿಹಳ್ಳಿ, ಮಲ್ಲೇಶಪ್ಪ ಅರಳಿಕಟ್ಟಿ, ಈರಪ್ಪ ತೋಟದ, ಹರೀಶ ಮಾಳಗೇರ, ಕರಬಸಪ್ಪ ನಾಗೇನಹಳ್ಳಿ, ಮಹದೇವಪ್ಪ ಮಾಳಗಿಮನಿ, ಕುಮಾರ ಮಾಸೂರು, ಬಸವರಾಜ ಸೊಂಟೇರ, ಮರೆಡಪ್ಪ ಕಾಟಪ್ಪನವರ, ರಮೇಶ ತಳವಾರ, ಹನುಮಂತಪ್ಪ ಶಂಕರನಹಳ್ಳಿ, ಸುನೀಲ ನಾಯಕ, ಬಂಗಾರಪ್ಪ ಶೇತಸನದಿ, ಸಿದ್ದಪ್ಪ ಕಾಗೇರ, ಮಹೇಶಣ್ಣ ತಿಪ್ಪಣ್ಣನವರ, ಮಾರುತೆಪ್ಪ ಗಿರಿಯಣ್ಣನವರ, ಶರಣಗೌಡ ಬಾಲನಗೌಡ್ರ ಆಯ್ಕೆಯಾದರು.

ಹಿರಿಯರಾದ ನಿವೃತ್ತ ಡಿವೈಎಸ್‍ಪಿ ಎನ್.ಎಂ. ಈಟೇರ, ಕೆ.ಡಿ. ದೀವಿಗಿಹಳ್ಳಿ, ಹನುಮಂತಪ್ಪ ದೀವಿಗಿಹಳ್ಳಿ, ಎ.ಆರ್. ಮಣಕೂರು, ವಕೀಲರಾದ ಮಾರುತೆಪ್ಪ ಜೋಕನಾಳ, ಯು.ಎಂ. ಸಾಲಿ, ರಾಜು ನಾಯಕ, ಮಾರುತೆಪ್ಪ ರಟ್ಟೀಹಳ್ಳಿ, ಪರಶುರಾಮ ಸಾಲಿ, ಹುಚ್ಚಪ್ಪ ಗೋಣೇರ, ಆರ್.ಎಫ್. ಹುಲ್ಲತ್ತಿ, ರಾಘವೇಂದ್ರ ಎ.ಜಿ. ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು