ಸರ್ಕಾರಿ ಜಯಂತಿ ಕಾರ್ಯಕ್ರಮಕ್ಕೆ ಮಾದಿಗರ ಬಹಿಷ್ಕಾರ

KannadaprabhaNewsNetwork |  
Published : Apr 13, 2026, 01:15 AM IST
೧೨ಶಿರಾ೧: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಾರ ಮಹಾಸಭಾ ತಾಲೂಕು ಘಟಕದಿಂದ ಪೂರ್ವಭಾವಿ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಸರ್ಕಾರದಿಂದ ಆಚರಿಸುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಜಯಂತಿಗಳಿಗೆ ಭಾಗವಹಿಸುವುದಿಲ್ಲ ಎಂದು ಕರ್ನಾಟಕ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ಪಿ.ಬಿ.ನರಸಿಂಹಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮಾದಿಗ ಸಮುದಾಯದವರು ಸರ್ಕಾರದಿಂದ ಆಚರಿಸುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಜಯಂತಿಗಳಿಗೆ ಭಾಗವಹಿಸುವುದಿಲ್ಲ ಎಂದು ಕರ್ನಾಟಕ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ಪಿ.ಬಿ.ನರಸಿಂಹಯ್ಯ ಹೇಳಿದರು. ಅವರು ಭಾನುವಾರ ನಗರದಲ್ಲಿ ನಡೆದ ಪೂರ್ವಭಾವಿ ಸಭೆ ನಡೆಸಿ ನಂತರ ಮಾತನಾಡಿದ ಅವರು, ೧೪ ರ ಸಂಜೆ ೪ ಗಂಟೆಗೆ ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಇಬ್ಬರು ಮಹನೀಯರ ಜಯಂತಿಯನ್ನು ಸಂಘಟನೆಯಿಂದ ಪ್ರತ್ಯೇಕವಾಗಿ ಆಚರಿಸಲಾಗುವುದು ಎಲ್ಲಾ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಜೆ.ಎನ್.ರಾಜಸಿಂಹ ಮಾತನಾಡಿ ಮಾದಿಗರು ಸರ್ಕಾರದಿಂದ ಆಚರಿಸುವ ಜಯಂತಿಯಲ್ಲಿ ಭಾಗವಹಿಸುವುದಿಲ್ಲ. ಸರ್ಕಾರದ ನೀತಿಗೆ ನಮ್ಮ ದಿಕ್ಕಾರ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ಉಳಿವಿಗಾಗಿ ನಾವು ಹೋರಾಡುತ್ತಿದ್ದೇನೆ. ಸರ್ಕಾರ ಮಾಡುವ ಜಯಂತಿಗೆ ಪ್ರತಿಭಟನೆ ರೂಪದಲ್ಲಿ ನಾವು ಭಾಗವಹಿಸುತ್ತಿಲ್ಲ ಎಂದರು. ಈ ವೇಳೆ ಕರ್ನಾಟಕ ಮಾದಾರ ಮಹಾಸಭಾದ ತಾಲೂಕು ಕಾರ್ಯದರ್ಶಿ ಸಿ.ಎನ್.ನರಸಿಂಹರಾಜು, ಉಪಾಧ್ಯಕ್ಷ ಶಿವಣ್ಣ, ದಸಂಸ ತಾಲೂಕು ಅಧ್ಯಕ್ಷ ಗಜಮಾರನಹಳ್ಳಿ ನಾಗರಾಜು, ಮಾದಿಗ ದಂಡೋರ ಕಾರ್ಯಾಧ್ಯಕ್ಷ ಮಾಗೋಡು ಯೋಗಾನಂದ್, ಎಸ್.ಆರ್.ರಂಗನಾಥ್, ಗುಮ್ಮನಹಳ್ಳಿ ಮಂಜುನಾಥ್, ಶಾಸಮರು ಮೂರ್ತಿ, ಹನುಮಂತರಾಯಪ್ಪ, ಕಲ್ಲುಕೋಟೆ ನರಸಿಂಹರಾಜು, ದ್ವಾರನಕುಂಟೆ ಲಕ್ಷ್ಮಣ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಡಿಕಾ ಹೋಮ
ಭಾರತದ ನರ್ಸಿಂಗ್‌ಗೆ ವಿಶ್ವಾದ್ಯಂತ ಬೇಡಿಕೆ: ದಿನೇಶ್‌