ಮಡಿಕೇರಿ: ಶ್ರೀ ಕೋಟಿ ಮಹಾಗಣಪತಿ ದಸರಾ ದಶ ಮಂಟಪ ಸಮಿತಿ ವತಿಯಿಂದ 2026-27ನೇ ಸಾಲಿನ ದಸರಾ ದಶಮಂಟಪ ಸಮಿತಿ ಅಧಿಕಾರವನ್ನು ಶ್ರೀ ಕೋಟೆ ಮಹಾಗಣಪತಿ ದೇವಾಲಯದ ಆವರಣದಲ್ಲಿ ಕೋಟೆ ಗಣಪತಿ ದೇವರಿಗೆ ಪೂಜೆ ಮಾಡುವ ಮೂಲಕ ಶ್ರೀ ಕರಾವಳಿ ಭಗವತಿ ದೇವಾಲಯದಿಂದ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.ಈ ಸಂದರ್ಭ ಮಾತನಾಡಿದ ಬಿ.ಎಂ. ಹರೀಶ್ ಅವರು, ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ದೇವಾಲಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಈ ಸಾಲಿನ ದಶಮಂಟಪ ಸಮಿತಿ ಅಧ್ಯಕ್ಷ ಸಜನ್ ಪೂಣಚ್ಚ ಅವರಿಗೆ ಎಲ್ಲ ದಾಖಲೆಗಳನ್ನೊಳಗೊಂಡ ಫೈಲ್ ಅನ್ನು ಹಸ್ತಾಂತರಿಸಿದರು.
ಶ್ರೀ ಕರಾವಳಿ ಭಗವತಿ ದೇವಾಲಯದ ದಶಮಂಟಪ ಸಮಿತಿ ಪದಾಧಿಕಾರಿಗಳಾದ ಡಿನ್ ಬೋಪಣ್ಣ, ಸಚಿನ್ ಕರಿಯಪ್ಪ, ಜಗದೀಶ್ ರೈ, ಆಕಾಶ್ ಭಂಡಾರಿ, ರವಿನ್ ಮಚಯ್ಯ, ಅಚ್ಚಯ್ಯ, ದರ್ಶನ್, ಕುಶಾ ಹಾಗೂ ಕಂಚಿ ಕಾಮಾಕ್ಷಿ ದೇವಸ್ಥಾನದ ಗಿರೀಶ್, ಪ್ರಶಾಂತ್, ದಂಡಿನ ಮಾರಿಯಮ್ಮ ದೇವಾಲಯದಿಂದ ನಾಗರಾಜ್, ಚೌಡೇಶ್ವರಿ ದೇವಾಲಯದಿಂದ ಡಿ.ಪಿ. ನಾಗೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.